ಕೃಷಿ ಸಾಲ ನೀಡಲು ಲಂಚಕ್ಕೆ ಬೇಡಿಕೆ: ರೈತ ಕೊಟ್ಟ ದೂರಿನಿಂದ ಗ್ರಾಮೀಣ ಬ್ಯಾಂಕ್ ಶಾಖಾಧಿಕಾರಿಗೆ 2 ವರ್ಷ ಜೈಲು, 15 ಸಾವಿರ ದಂಡ

| Updated By: ವಿವೇಕ ಬಿರಾದಾರ

Updated on: Dec 07, 2022 | 4:51 PM

ಕೃಷಿ ಸಾಲ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿ ‌ಪ್ರಗತಿ ಗ್ರಾಮೀಣ ಬ್ಯಾಂಕ್ ಶಾಖಾಧಿಕಾರಿ ಎನ್.ಶ್ರೀಧರ್​​​ಗೆ ಸಿಬಿಐ ಕೋರ್ಟ್ 2 ವರ್ಷ ಸೆರೆವಾಸ, 15 ಸಾವಿರ ದಂಡ ವಿಧಿಸಿದೆ.

ಕೃಷಿ ಸಾಲ ನೀಡಲು ಲಂಚಕ್ಕೆ ಬೇಡಿಕೆ: ರೈತ ಕೊಟ್ಟ ದೂರಿನಿಂದ ಗ್ರಾಮೀಣ ಬ್ಯಾಂಕ್ ಶಾಖಾಧಿಕಾರಿಗೆ 2 ವರ್ಷ ಜೈಲು, 15 ಸಾವಿರ ದಂಡ
ಸಾಂಧರ್ಬಿಕ ಚಿತ್ರ
Follow us on

ಬೆಂಗಳೂರು: ಕೃಷಿ ಸಾಲ (Agriculture loan) ಮಂಜೂರು ಮಾಡಲು ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿ ‌ಪ್ರಗತಿ ಗ್ರಾಮೀಣ ಬ್ಯಾಂಕ್ (Pragathi Grameena Bank) ಶಾಖಾಧಿಕಾರಿ ಎನ್.ಶ್ರೀಧರ್​​​ಗೆ ಸಿಬಿಐ ಕೋರ್ಟ್ (CBI Court) 2 ವರ್ಷ ಸೆರೆವಾಸ, 15 ಸಾವಿರ ದಂಡ ವಿಧಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚೇಳೂರು ಗ್ರಾಮದ ರೈತ ರವಿ, ಕೃಷಿ ಸಾಲ ನೀಡಿ ಎಂದು ಪ್ರಗತಿ ಗ್ರಾಮೀಣ ಬ್ಯಾಂಕ್ ಅರ್ಜಿ ಹಾಕಿದ್ದರು. ಈ ಅರ್ಜಿ ಮಂಜೂರಾತಿಗೆ ಶಾಖಾಧಿಕಾರಿ ಎನ್.ಶ್ರೀಧರ್​​​ 7,500 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಇದನ್ನೂ ಓದಿ: ಮಾಡದ ತಪ್ಪಿಗೆ ಯಾರಿಗೋ ಜೈಲು ಶಿಕ್ಷೆ, ಮೃತಪಟ್ಟಿದ್ದ ಬಾಲಕಿ 7 ವರ್ಷಗಳ ಬಳಿಕ ಜೀವಂತ ಕಂಡಾಗ

ಈ ಹಿನ್ನೆಲೆ ರವಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆದರೆ ಬ್ಯಾಂಕ್ ಕೇಂದ್ರದ ಅಧೀನ ಸಂಸ್ಥೆಯಾಗಿದ್ದರಿಂದ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು. ಪ್ರಕರಣ ತನಿಕೆ ನಡೆಸಿದ ಸಿಬಿಐ ಕೋರ್ಟ್​, ನ್ಯಾಯಾಲಯಕ್ಕೆ ಚಾರ್ಜ್​​ಶೀಟ್​ ಸಲ್ಲಿಸಿತ್ತು. ಸದ್ಯ ಕೋರ್ಟ್​ ಪ್ರಕರಣದ ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡಿದೆ. ಸಿಬಿಐ ಪರ ಅಭಿಯೋಜಕ ಶಿವಾನಂದ ಪೆರ್ಲ ವಾದ ಮಂಡಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದುಇಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:33 pm, Wed, 7 December 22