ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ಕ್ಷೇತ್ರದಲ್ಲಿ 42 ಸ್ಟೋನ್ ಕ್ರಷರ್​ಗಳು ಬಂದ್

| Updated By: Ganapathi Sharma

Updated on: Nov 01, 2023 | 8:12 PM

ಸ್ಥಳೀಯರು ಹಾಗೂ ಕೆಲವು ಕಾಂಗ್ರೆಸ್ ಮುಖಂಡರುಗಳು ‘ಕ್ರಷರ್ ಹಟಾವೋ, ಚಿಕ್ಕಬಳ್ಳಾಪುರ ಬಚಾವೋ’ ಅಭಿಯಾನ ಆರಂಬಿಸಿದ್ದು, ಚಿಕ್ಕಬಳ್ಳಾಪುರ ತಹಶೀಲ್ದಾರ್ ಕಛೇರಿ ಮುಂದೆ ಧರಣಿ, ಪ್ರತಿಭಟನೆ ನಡೆಸಿ ಯಲಗಲಹಳ್ಳಿ ಕಲ್ಲುಪುಡಿ ಘಟಕಗಳ ಸೇಫರ್ ಝೋನ್ ರದ್ದು ಮಾಡುವಂತೆ ಒತ್ತಾಯಿಸಿದ್ದರು.

ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ಕ್ಷೇತ್ರದಲ್ಲಿ 42 ಸ್ಟೋನ್ ಕ್ರಷರ್​ಗಳು ಬಂದ್
ಸ್ಟೋನ್​ ಕ್ರಷರ್​ಗಳ ವಿರುದ್ಧ ನಡೆದಿದ್ದ ಪ್ರತಿಭಟನೆ
Follow us on

ಚಿಕ್ಕಬಳ್ಳಾಪುರ, ನವೆಂಬರ್ 1: ಬಳ್ಳಾರಿಯ ಐರನ್‍ಓರ್ ಗಣಿಗಾರಿಕೆಯನ್ನೇ ಮೀರಿಸುವ ಹಾಗೆ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ವಿಧಾನಸಭಾ ಕ್ಷೇತ್ರ ಚಿಕ್ಕಬಳ್ಳಾಪುರದಲ್ಲಿ (Chikkaballapur) ಕಲ್ಲುಕ್ವಾರಿ, ಸ್ಟೋನ್‍ಕ್ರಷರ್​​ಗಳು ಬೆಳೆದು ನಿಂತಿವೆ. ಕಲ್ಲುಕ್ವಾರಿ, ಸ್ಟೋನ್‍ಕ್ರಷರ್ ಗಳ ಆರ್ಭಟದಿಂದ ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ ಸೇರಿದಂತೆ ಯಲಗಲಹಳ್ಳಿ, ದಿಗೂರು, ಆದೆನ್ನಗಾರನಹಳ್ಳಿ, ಬುಶೆಟ್ಟಿಹಳ್ಳಿ, ಮುತ್ತಕದಹಳ್ಳಿ, ಕೊರೇನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಜನರು ನೆಮ್ಮದಿಯಾಗಿ ಬದುಕಲು ಸಾಧ್ಯವಾಗುತ್ತಿಲ್ಲ.

ಯಲಗಲಹಳ್ಳಿ ಕಲ್ಲುಪುಡಿ ಘಟಕಗಳ ಸೇಫರ್ ಝೋನ್ ಬ್ಯಾನ್ ಮಾಡುವಂತೆ ಪ್ರತಿಭಟನೆ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಯುವನಾಯಕ ಪ್ರದೀಪ್ ಈಶ್ವರ್ ಇತ್ತೀಚಿಗೆ ಪೆರೇಸಂದ್ರ ಸುತ್ತಮುತ್ತ ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡಿದ್ದರು. ಆಗ ಬಹುತೇಕರಲ್ಲಿ ಉಸಿರಾಟ ಸಮಸ್ಯೆ, ಲಂಗ್ಸ್ ಕ್ಯಾನ್ಸರ್, ಕಿವಿ ಮಂದಾಗುವುದು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಕಂಡುಬಂದಿವೆಯಂತೆ. ಮತ್ತೊಂದಡೆ ಸ್ಥಳೀಯರು ಶಾಸಕ ಪ್ರದೀಪ್‍ಗೆ ದೂರು ನೀಡಿದ್ದು, ಕ್ರಷರ್ ಹಾವಳಿಯನ್ನು ನಿಲ್ಲಿಸುವಂತೆ ಮನವಿ ಮಾಡಿದ್ದರು. ಇದರಿಂದ ಸ್ಥಳೀಯರು ಹಾಗೂ ಕೆಲವು ಕಾಂಗ್ರೆಸ್ ಮುಖಂಡರುಗಳು ‘ಕ್ರಷರ್ ಹಟಾವೋ, ಚಿಕ್ಕಬಳ್ಳಾಪುರ ಬಚಾವೋ’ ಅಭಿಯಾನ ಆರಂಬಿಸಿದ್ದು, ಚಿಕ್ಕಬಳ್ಳಾಪುರ ತಹಶೀಲ್ದಾರ್ ಕಛೇರಿ ಮುಂದೆ ಧರಣಿ, ಪ್ರತಿಭಟನೆ ನಡೆಸಿ ಯಲಗಲಹಳ್ಳಿ ಕಲ್ಲುಪುಡಿ ಘಟಕಗಳ ಸೇಫರ್ ಝೋನ್ ರದ್ದು ಮಾಡುವಂತೆ ಒತ್ತಾಯಿಸಿದ್ದರು.

ಪ್ರತಿಭಟನೆಗೆ ಮಣಿದು 42 ಕ್ರಷರ್​​ಗಳು ಬಂದ್?

ಚಿಕ್ಕಬಳ್ಳಾಪುರ ತಾಲ್ಲೂಕಿನ ಶಾಸಕರ ಸ್ವಗ್ರಾಮ ಪೆರೇಸಂದ್ರ ಸೇರಿದಂತೆ ಯಲಗಲಹಳ್ಳಿ, ದಿಗೂರು, ಆದೆನ್ನಗಾರನಹಳ್ಳಿ, ಬುಶೆಟ್ಟಿಹಳ್ಳಿ, ಮುತ್ತಕದಹಳ್ಳಿ, ಕೊರೇನಹಳ್ಳಿ ಸೇರಿದಂತೆ ಸುತ್ತಮುತ್ತಲ ಸ್ಥಳೀಯರು ಪ್ರತಿಭಟನೆ, ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಎಚ್ಚೆತ್ತ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಯಲಗಲಹಳ್ಳಿ ಸೇಪರ್ ಜೋನ್‍ನಲ್ಲಿರುವ 42 ಕ್ರಷರ್​ಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಕನ್ನಡ ಧ್ವಜ ಹಾರಿಸಲು ಅನುಮತಿ ನಿರಾಕರಣೆ; ತಹಸೀಲ್ದಾರ್ ವಿರುದ್ದ ಪ್ರತಿಭಟನೆ ನಡೆಸಿದ ಕನ್ನಡ ಪರ ಸಂಘಟನೆಗಳು

ಗಣಿಗಾರಿಕೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹೇಳೋದೇನು?

ಇನ್ನು ಯಲಗಲಹಳ್ಳಿ ಕಲ್ಲುಪುಡಿ ಘಟಕಗಳ ಸೇಫರ್ ಝೋನ್ ಬ್ಯಾನ್ ಮಾಡುವಂತೆ ಸುತ್ತಮುತ್ತಲಿನ ಸ್ಥಳೀಯರು ಪ್ರತಿಭಟನೆ, ಧರಣಿ ಮಾಡಿದ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಅವರನ್ನು ಪ್ರಶ್ನಿಸಿದಾಗ, ಸೇಫರ್ ಝೋನ್ ಮಾಡುವಾಗ ಸುಮ್ಮನಿದ್ದು, ಈಗ ಗಣಿಗಾರಿಕೆ ನಡೆಯುವಾಗ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದೆಂದು ತಿಳಿಸಿದರು. ಜತೆಗೆ, 42 ಕ್ರಷರ್​​ಗಳನ್ನು ಬಂದ್ ಮಾಡಿರುವುದು ನನ್ನ ಗಮನಕ್ಕೆ ಬಂದಿಲ್ಲವೆಂದು ನುಣುಚಿಕೊಂಡರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:57 pm, Wed, 1 November 23