ಚಿಕ್ಕಬಳ್ಳಾಪುರ: ಕನ್ನಡ ಧ್ವಜ ಹಾರಿಸಲು ಅನುಮತಿ ನಿರಾಕರಣೆ; ತಹಸೀಲ್ದಾರ್ ವಿರುದ್ದ ಪ್ರತಿಭಟನೆ ನಡೆಸಿದ ಕನ್ನಡ ಪರ ಸಂಘಟನೆಗಳು
ಇಂದು ಕನ್ನಡ ರಾಜ್ಯೋತ್ಸವ ಹಿನ್ನಲೆ ಕನ್ನಡ ದ್ವಜ ಹಾರಿಸಲು ತಹಶೀಲ್ಧಾರ್ ಬಳಿ ಮನವಿ ಸಲ್ಲಿಸಿದ್ದಾರೆ. ಆದರೆ, ತಹಶೀಲ್ಧಾರ್ ಅವಕಾಶ ನೀಡಿಲ್ಲವೆಂದು ಆರೋಪಿಸಿ, ವಿವಿಧ ಕನ್ನಡ ಸಂಘಟನೆಗಳು ಆತನ ವಿರುದ್ದ ಘೋಷಣೆ ಕೂಗಿದ್ದಾರೆ. ರಾಷ್ಟ್ರಧ್ವಜ ಹಾರಿಸಿ, ಕನ್ನಡ ದ್ವಜಾರೋಹಣ ಮಾಡಲು ಅವಕಾಶ ನೀಡದ ತಹಶೀಲ್ದಾರ್ ಹಾಗೂ ಕನ್ನಡ ಪರಸಂಘಟನೆಗಳ ನಡುವೆ ಕೆಲ ಹೊತ್ತು ವಾಗ್ವಾದ ನಡೆದಿದೆ.
ಚಿಕ್ಕಬಳ್ಳಾಪುರ, ನ.01: ನಾಡಿನೆಲ್ಲಡೆ ಕನ್ನಡ ರಾಜ್ಯೋತ್ಸವ(Kannada Rajyotsava) ಸಂಭ್ರಮಾಚರಣೆ ಜೋರಾಗಿ ನಡೆಯುತ್ತಿದೆ. ಅದರಂತೆ ವಿವಿಧ ಜಿಲ್ಲೆಗಳಲ್ಲಿ ಕನ್ನಡದ ಕಹಳೆ ಮೇಳೈಸಿದೆ. ಈ ಮಧ್ಯೆ ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆಯ ಗೌರಿಬಿದನೂರು ನಗರದ ನೇತಾಜಿ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಹಶೀಲ್ಧಾರ್(Tahsildar) ಮಹೇಶ್ ಪತ್ರಿ ಹಾಗೂ ಕನ್ನಡ ಪರಸಂಘಟನೆಗಳ ನಡುವೆ ವಾಗ್ವಾದ ನಡೆದಿದೆ. ಹೌದು, ಕನ್ನಡ ರಾಜೋತ್ಸವ ಕಾರ್ಯಕ್ರಮದಲ್ಲೇ ತಹಸೀಲ್ದಾರ್ ವಿರುದ್ದ ಪ್ರತಿಭಟನೆ ನಡೆಸಿ, ಆಕ್ರೋಶ ಹೊರ ಹಾಕಿದ್ದಾರೆ.
ಏನಿದು ಘಟನೆ
ಇಂದು ಕನ್ನಡ ರಾಜ್ಯೋತ್ಸವ ಹಿನ್ನಲೆ ಕನ್ನಡ ದ್ವಜ ಹಾರಿಸಲು ತಹಶೀಲ್ಧಾರ್ ಬಳಿ ಮನವಿ ಸಲ್ಲಿಸಿದ್ದಾರೆ. ಆದರೆ, ತಹಶೀಲ್ಧಾರ್ ಅವಕಾಶ ನೀಡಿಲ್ಲವೆಂದು ಆರೋಪಿಸಿ, ವಿವಿಧ ಕನ್ನಡ ಸಂಘಟನೆಗಳು ಆತನ ವಿರುದ್ದ ಘೋಷಣೆ ಕೂಗಿದ್ದಾರೆ. ರಾಷ್ಟ್ರಧ್ವಜ ಹಾರಿಸಿ, ಕನ್ನಡ ದ್ವಜಾರೋಹಣ ಮಾಡಲು ಅವಕಾಶ ನೀಡದ ತಹಶೀಲ್ದಾರ್ ಹಾಗೂ ಕನ್ನಡ ಪರಸಂಘಟನೆಗಳ ನಡುವೆ ಕೆಲ ಹೊತ್ತು ವಾಗ್ವಾದ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಗೌರಿಬಿದನೂರು ಪೊಲೀಸರು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಯಿತು.
ಇದನ್ನೂ ಓದಿ:ಮುಂಬೈನಲ್ಲಿ ಸಭೆ ನಡೆಸಿದ ಎಂಇಎಸ್ ಸದಸ್ಯರು, ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ತಗಾದೆ ತೆಗೆಯುವ ಹುನ್ನಾರವೇ?
ಧ್ವಜಕಂಬದಿಂದ ಕೆಳಗೆ ಬಿದ್ದ ಕನ್ನಡದ ಬಾವುಟ
ಹೌದು, ಕೋಲಾರದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮದ ವೇಳೆ ಎಡವಟ್ಟಾಗಿದ್ದು, ಧ್ವಜಾರೋಹಣ ವೇಳೆ ಧ್ವಜಕಂಬದಿಂದ ಬಾವುಟ ಕೆಳಗೆ ಬಿದ್ದಿದೆ. ಕೋಲಾರ ನಗರದ ಎಂ.ಜಿ.ರಸ್ತೆಯಲ್ಲಿ ಜಿಲ್ಲಾಧಿಕಾರಿ ಅಕ್ರಂಪಾಷಾ ಸೇರಿದಂತೆ ಶಾಸಕ, ಸಂಸದರು ಧ್ವಜಾರೋಹಣ ಮಾಡುವ ವೇಳೆ ಧ್ವಜಕಂಬದಿಂದ ಬಾವುಟ ಕೆಳಗೆ ಬಿದ್ದಿದೆ. ನಂತರ ಯುವಕನೋರ್ವ ಮತ್ತೆ ಧ್ವಜ ಕಂಬಕ್ಕೆ ಹತ್ತಿ ಕನ್ನಡ ಧ್ವಜ ಕಟ್ಟಿರುವ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:43 pm, Wed, 1 November 23