AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ಕೈಗೆಟುಕದ ಪ್ರೀತಿ- ಮನನೊಂದ ಯುವಕ ಆತ್ಮಹತ್ಯೆಗೆ ಶರಣು

ಚಿಕ್ಕಬಳ್ಳಾಪುರ ತಾಲೂಕಿನ ವಡ್ರೆಪಾಳ್ಯಾ ಗ್ರಾಮದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ‘ನನ್ನಿಂದ ಯಾರಿಗೂ ನೋವಾಗುವುದು ಬೇಡ, ಒಂದು ವೇಳೆ ನೋವಾದ್ರೆ ನಾನೇ ನಿಮ್ಮಿಂದ ದೂರವಾಗುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ತನ್ನ ಪ್ರೇಯಸಿಯ ಫೋಟೋ ಹಾಗೂ ಪ್ರೀತಿಯ ಬರಹವನ್ನು ಪೋಸ್ಟ್ ಮಾಡಿ ಕೊನೆಯುಸಿರೆಳೆದಿದ್ದಾನೆ. 

ಚಿಕ್ಕಬಳ್ಳಾಪುರ: ಕೈಗೆಟುಕದ ಪ್ರೀತಿ- ಮನನೊಂದ ಯುವಕ ಆತ್ಮಹತ್ಯೆಗೆ ಶರಣು
ಮೃತ ಯುವಕ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on:Feb 29, 2024 | 7:55 PM

Share

ಚಿಕ್ಕಬಳ್ಳಾಪುರ, ಫೆ.29: ತಾಲೂಕಿನ ವಡ್ರೆಪಾಳ್ಯಾ ಗ್ರಾಮದ ಶ್ರೀಕಾಂತ್ ಎನ್ನುವ 26 ವರ್ಷದ ಯುವಕ ವಾಟ್ಸಪ್, ಫೇಸ್ ಬುಕ್, ಇನ್‍ಸ್ಟಾಗ್ರಾಂ ಸೇರಿದಂತೆ ಆತನ ಸಾಮಾಜಿಕ ಜಾಲತಾಣಗಳಲ್ಲಿ(Social media) ‘ಹೀಗೆ ನನ್ನಿಂದ ಯಾರಿಗೂ ನೋವಾಗುವುದು ಬೇಡ. ಒಂದು ವೇಳೆ ನೋವಾದ್ರೆ ನಾನೇ ನಿಮ್ಮಿಂದ ದೂರವಾಗುತ್ತೇನೆ  ಎಂದು ತಾನು ಇಷ್ಟಪಟ್ಟ ಹುಡುಗಿಯ ಫೋಟೋಗಳನ್ನು ಶೇರ್ ಮಾಡಿ ತನ್ನದೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಮುಗಿಸಿದ್ದ ಶ್ರೀಕಾಂತ್, ಇತ್ತೀಚೆಗೆ ಯುವತಿಯೊಬ್ಬಳನ್ನು ಪ್ರೀತಿಸಿದ್ದನಂತೆ. ಆದ್ರೆ, ತನ್ನ ಪ್ರೀತಿಗೆ ಆಕೆಯಿಂದ ಸಮ್ಮತಿ ದೊರೆಯದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಪೋಷಕರನ್ನು ಕಳೆದುಕೊಂಡಿದ್ದ ಯುವಕ

ಇನ್ನು ಮೃತ ಶ್ರೀಕಾಂತ್, ತಂದೆ-ತಾಯಿಯನ್ನು ಕಳೆದುಕೊಂಡಿದ್ದನಂತೆ. ವಿದ್ಯಾಭ್ಯಾಸದಲ್ಲಿ ಪ್ರತಿಭಾವಂತನಾಗಿದ್ದ ಇತ, ಪದವಿ ನಂತರ ಅಭಿನಯ ಕೋರ್ಸ್ ಕಲಿತಿದ್ದ. ತಾನು ಪ್ರೀತಿಸುತ್ತಿದ್ದಾಕೆಯ ಮೇಲೆ ಕವಿತೆಗಳನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಆದ್ರೆ, ಶ್ರೀಕಾಂತ್ ಯಾರನ್ನು ಪ್ರೀತಿ ಮಾಡುತ್ತಿದ್ದ ಎನ್ನುವುದನ್ನು ಮಾತ್ರ ಆತನ ಮನೆಯಲ್ಲಿಯಾಗಲಿ ಅಥವಾ ಆತನ ಸ್ನೇಹಿತರ ಬಳಿ ಹೇಳಿಕೊಂಡಿರಲಿಲ್ಲ. ಯುವಕ ಶ್ರೀಕಾಂತ್​ನ ಸಾವಿನಿಂದ ವಂಡ್ರೆಪಾಳ್ಯಾ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದು, ಮೃತನ ಸಹೋದರ ಸುರೇಶ್​ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ಪ್ರತ್ಯೇಕ ಘಟನೆ: ಯುವಕನ ಕಾಟ ತಾಳಲಾರದೆ ಬಾಲಕಿ ಆತ್ಮಹತ್ಯೆ, ಪತಿ ಮತ್ತೊಂದು ಮದುವೆಯಾಗಿದ್ದಕ್ಕೆ ಮೊದಲ ಪತ್ನಿ ಆತ್ಮಹತ್ಯೆ

ಸೇನಾ ಪರೀಕ್ಷೆಯಲ್ಲಿ ಫೇಲ್; ಪೋಷಕರೇ ಹೇಳಲು ಭಯಪಟ್ಟು ಯುವಕ ಆತ್ಮಹತ್ಯೆ

ಚಿಕ್ಕಮಗಳೂರು: ಸೇನಾ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಯಡದಾಳು ಗ್ರಾಮದಲ್ಲಿ ನಡೆದಿದೆ. ಕಾರ್ತಿಕ್ (23) ಮೃತ ರ್ದುದೈವಿ. ‘ಭಾರತೀಯ ಸೇನೆಯ ಪರೀಕ್ಷೆಯಲ್ಲಿ ಫೇಲ್ ಆಗಿದ್ದೇನೆ. ಇದನ್ನು ಮನೆಯವರಿಗೆ ಹೇಳುವ ಧೈರ್ಯ ನನ್ನ ಬಳಿ ಇಲ್ಲ ಎಂದು ಡೆತ್ ನೋಟ್ ಬರೆದಿಟ್ಟು ಕಾರ್ತಿಕ್, ನೇಣಿಗೆ ಶರಣಾಗಿದ್ದಾನೆ. ಸೇನೆಗೆ ಸೇರಬೇಕೆಂದು 2 ವರ್ಷದಿಂದ ನಿರಂತರ ಪ್ರಯತ್ನಿಸುತ್ತಿದ್ದ ಕಾರ್ತಿಕ್, ಸೇನಾ ನೇಮಕಾತಿ ಪರೀಕ್ಷೆಯ ರಿಸಲ್ಟ್ ಬಂದ ಹಿನ್ನಲೆ ಸಾವಿಗೆ ಶರಣಾಗಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:47 pm, Thu, 29 February 24