ಚಿಕ್ಕಬಳ್ಳಾಪುರ: ಮಹಿಳಾ ಸ್ವಸಹಾಯ ಸಂಘಗಳ ಹಣ ದುರುಪಯೋಗಪಡಿಸಿಕೊಂಡ ಬ್ಯಾಂಕ್ ಸಿಬ್ಬಂದಿ

| Updated By: Ganapathi Sharma

Updated on: Jan 25, 2025 | 4:14 PM

ಮಹಿಳಾ ಸ್ವಸಹಾಯ ಸಂಘಗಳು ಸ್ಥಳೀಯ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್​​​ನಿಂದ ಸಾಲ ಪಡೆಯಲು ಠೇವಣಿ ಹಣವನ್ನು ಬ್ಯಾಂಕ್​​ಗೆ ಜಮೆ ಮಾಡಿದ್ದರು. ಆದರೆ ಬ್ಯಾಂಕ್ ಸಿಬ್ಬಂದಿ ಹಾಗೂ ಡೈರೆಕ್ಟರ್​ಗಳು ಮಹಿಳಾ ಸಂಘಗಳಿಗೆ ಸಾಲ ನೀಡುವುದಿರಲಿ, ಸಂಘಗಳು ಜಮೆ ಮಾಡಿದ್ದ ಹಣವನ್ನು ದುರುಪಯೋಗ ಮಾಡಿಕೊಂಡ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ: ಮಹಿಳಾ ಸ್ವಸಹಾಯ ಸಂಘಗಳ ಹಣ ದುರುಪಯೋಗಪಡಿಸಿಕೊಂಡ ಬ್ಯಾಂಕ್ ಸಿಬ್ಬಂದಿ
ಚಿಕ್ಕಬಳ್ಳಾಪುರ: ಮಹಿಳಾ ಸ್ವಸಹಾಯ ಸಂಘಗಳ ಹಣ ದುರುಪಯೋಗಪಡಿಸಿಕೊಂಡ ಬ್ಯಾಂಕ್ ಸಿಬ್ಬಂದಿ
Follow us on

ಚಿಕ್ಕಬಳ್ಳಾಪುರ, ಜನವರಿ 25: ಚಿಕ್ಕಬಳ್ಳಾಪುರ ತಾಲೂಕಿನ ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಸಾಲ ಪಡೆಯಲು ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್​​​ಗೆ, ಲಕ್ಷ ಲಕ್ಷ ರೂಪಾಯಿ ಹಣವನ್ನು ಜಮೆ ಮಾಡಿದ್ದರು. ಲಕ್ಕನಾಯಕ್ಕನಹಳ್ಳಿ, ರೇಣುಮಾಕಲಹಳ್ಳಿ, ಗುಂಡ್ಲುಗುರ್ಕಿ ಸೇರಿದಂತೆ ಐದಾರು ಹಳ್ಳಿಗಳ ಐದಕ್ಕೂ ಹೆಚ್ಚು ಗ್ರಾಮದ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಹಣವನ್ನು ಜಮೆ ಮಾಡಿ ಠೇವಣಿ ಇಟ್ಟಿದ್ದರು. ನಂತರ ಸಾಲ ಕೇಳಲು ಬ್ಯಾಂಕ್ ಬಳಿ ಹೋದರೆ ಬ್ಯಾಂಕ್ ಸಿಬ್ಬಂದಿ ಬೀಗ ಜಡಿದು ಪರಾರಿಯಾಗಿದ್ದರು!

ಇದರಿಂದ ಅನುಮಾನಗೊಂಡು ಪರಿಶೀಲನೆ ನಡೆಸಿದರೆ ಮಹಿಳಾ ಸಂಘಗಳ ಜಮೆ ಹಣ ಬ್ಯಾಂಕ್​ನಲ್ಲಿ ಇರಲಿಲ್ಲ, ಸುಮಾರು ಹತ್ತು ಲಕ್ಷ ರೂಪಾಯಿ ಹಣವನ್ನು ಸ್ವತಃ ಬ್ಯಾಂಕ್ ಸಿಬ್ಬಂದಿ ದುರುಪಯೋಗಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಇನ್ನು ಮಹಿಳಾ ಸ್ವಸಹಾಯ ಸಂಘಗಳ ಹಣ ದುರುಪಯೋಗ ಸುದ್ದಿ ತಿಳಿಯುತ್ತಿದ್ದಂತೆಯೇ ಮಹಿಳೆಯರು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಕಾರ್ಯದರ್ಶಿ ಕಾರ್ತಿಕ್​​ರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.

ಕಾಂಗ್ರೆಸ್​ ಮುಖಂಡಗೆ ಅನಧಿಕೃತವಾಗಿ ಹಣ

ಹಣ ದುರುಪಯೋಗ ಮಾಡಿರುವುದನ್ನು ಕಾರ್ತಿಕ್ ಒಪ್ಪಿಕೊಂಡಿದ್ದಾರೆ. ಸುಮಾರು ಆರು ಲಕ್ಷ ರೂಪಾಯಿ ಹಣವನ್ನು ಬ್ಯಾಂಕ್ ನಿರ್ದೇಶಕ ಹಾಗೂ ಕಾಂಗ್ರೆಸ್ ಮುಖಂಡ ಸುಬ್ಬರಾಯಪ್ಪ ಅನಧಿಕೃತವಾಗಿ ಪಡೆದಿದ್ದು ಅವರು ಹಣ ನೀಡಿದ ತಕ್ಷಣ ಮಹಿಳಾ ಸ್ವಸಹಾಯ ಸಂಘಗಳಿಗೆ ಹಣ ನೀಡುವುದಾಗಿ ತಿಳಿಸಿದ್ದಾನೆ.

ಇದನ್ನೂ ಓದಿ: ಮೈಕ್ರೋ ಫೈನಾನ್ಸ್‌ ಹಾವಳಿ: ಸಿಎಂ ಸಿದ್ದರಾಮಯ್ಯ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ಏನೇನು ಚರ್ಚೆಯಾಯ್ತ? ಇಲ್ಲಿದೆ ಮಾಹಿತಿ

ಒಟ್ಟಿನಲ್ಲಿ ಮೈಕ್ರೋ ಪೈನಾನ್ಸ್​​​ಗಳಿಂದ ಸಾಲ ಪಡೆದರೆ ಕಿರುಕುಳ ಹೆಚ್ಚಾಗುತ್ತದೆ ಎಂದು ಸ್ಥಳಿಯ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್​ನಿಂದ ಸಾಲ ಪಡೆಯಲು ಠೇವಣಿ ಹಣ ಜಮೆ ಮಾಡಿದರೆ ಸಹಕಾರ ಬ್ಯಾಂಕ್​​ನಿಂದಲೂ ಮಹಾ ಮೋಸವಾಗಿರುವುದು ವಿಪರ್ಯಾಸ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ