ಚಿಕ್ಕಬಳ್ಳಾಪುರ: ಚಲಿಸುತ್ತಿದ್ದ ಕಾರಿನಲ್ಲೇ ಹೃದಯಾಘಾತವಾಗಿ(Heart Attack) ವಿಧಿ ವಿಜ್ಞಾನ ತಜ್ಞ ಡಾ.ಭಗವಾನ್(Dr S Bhagwan) ನಿಧನರಾದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಚದಲಪುರ ಗ್ರಾಮದ ಸಮೀಪ ನಡೆದಿದೆ. ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಆಸ್ಪತ್ರೆಯ ಹಿರಿಯ ವೈದ್ಯ ಡಾ.ಭಗವಾನ್ ಅವರು ತಮ್ಮ ಕರ್ತವ್ಯ ಮುಗಿಸಿ ಬೆಂಗಳೂರಿಗೆ ವಾಪಸಾಗುವ ವೇಳೆ ಹೃದಯಾಘಾತವಾಗಿದೆ. ತಕ್ಷಣ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಭಗವಾನ್ರನ್ನ ಕರೆ ತರಲಾಗಿತ್ತು. ಆದ್ರೆ ವೈದ್ಯರು ಪರೀಕ್ಷೆ ಮಾಡುವಷ್ಟರಲ್ಲಿ ಡಾ.ಎಸ್.ಭಗವಾನ್ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
ಕಾರಿನಲ್ಲಿ ಹಿಂಬದಿ ಕುಳಿತಿದ್ದ ಡಾ.ಭಗವಾನ್ ಅವರು ತಮ್ಮ ಕಾರಿನ ಚಾಲಕನಿಗೆ ತಲೆಸುತ್ತು ಬರ್ತಿದೆ, ಬೇವರು ಬರ್ತಿದೆ ಎಂದು ಹೇಳಿದ್ದರು. ಬಳಿಕ ಚಾಲಕ ಕಾರು ನಿಲ್ಲಿಸುವಷ್ಟರಲ್ಲಿ ಕಾರಿನಲ್ಲಿ ಮೃತಪಟ್ಟಿದ್ದಾರೆ. ತಕ್ಷಣ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆತರಲಾದರೂ ವೈದ್ಯರು ಪರೀಕ್ಷೆ ಮಾಡುವಷ್ಟರಲ್ಲಿ ಪ್ರಾಣ ಹೋಗಿದೆ. ಪತ್ನಿ, ಇಬ್ಬರು ಮಕ್ಕಳನ್ನು ಭಗವಾನ್ ಅಗಲಿದ್ದಾರೆ. ಕಳೆದ ಐದು ವರ್ಷಗಳಿಂದ ಡಾ.ಭಗವಾನ್ ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: Sindhnur: 74ನೇ ಗಣರಾಜ್ಯೋತ್ಸವ ಹಿನ್ನೆಲೆ ನೃತ್ಯ ಮಾಡುವಾಗ ಹೃದಯಾಘಾತದಿಂದ ಕೊನೆಯುಸಿರೆಳೆದ ಸ್ಟಾಫ್ ನರ್ಸ್
ಚಳಿಗಾಲದಲ್ಲಿ ಹೃದಯಾಘಾತವು ಸಾಮಾನ್ಯ. ಹೃದ್ರೋಗಗಳು ಪಾಶ್ರ್ವವಾಯುವಿಗೆ ಕಾರಣವಾಗುತ್ತದೆ. ಮತ್ತು ಹೃದಯ ಕುಸಿತವು ಶೀತ ತಿಂಗಳುಗಳಲ್ಲಿ ಬಹಳ ಸಾಮಾನ್ಯ ವಿದ್ಯಾಮಾನವಾಗಿದೆ. ತಾಪಮಾನದಲ್ಲಿನ ಹಠಾತ್ ಕುಸಿತದಿಂದಾಗಿ ಹೃದಯಾತದಿಂದ ಉಂಟಾಗುವ ಸಾವಿನಲ್ಲಿ ಏರಿಕೆಯಾಗಿದೆ. ವೈದ್ಯರ ಪ್ರಕಾರ ಶೀತ ಹವಾಮಾನವು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದು ಹಠಾತ್ ಹೃದಯಾಘಾತ, ಮೆದುಳಿನ ಪಾಶ್ರ್ವವಾಯು ಮುಂತಾದ ಹೃದಯ ಸಂಬಂಧಿ ಕಾಯಿಲೆಗಳನ್ನು ಪ್ರಚೋದಿಸುತ್ತದೆ.
Published On - 11:13 am, Sat, 4 February 23