ಚಿಕ್ಕಬಳ್ಳಾಪುರ: ನಂದಿಯಲ್ಲಿ ಬ್ರಹ್ಮರಥೋತ್ಸವದ ವೇಳೆ ಅಂಚು ಮುರಿದು ನಿಂತಲ್ಲೆ ನಿಂತ ರಥ! ಅಪಶಕುನ ಎಂದ ಭಕ್ತರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 19, 2023 | 3:22 PM

ದಕ್ಷಿಣಕಾಶಿ ಎಂದೇ ಖ್ಯಾತಿಯಾಗಿರುವ ತಾಲೂಕಿನ ನಂದಿಗಿರಿಧಾಮದ ತಪ್ಪಲಿನಲ್ಲಿರುವ ನಂದಿಯಲ್ಲಿ ಜೋಡಿ ಬ್ರಹ್ಮರಥೋತ್ಸವ ನಡೆಯಿತು. ಈ ವೇಳೆ ರಥದ ಅಂಚು ಮುರಿದು ನಿಂತಲ್ಲೆ ನಿಂತ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ: ನಂದಿಯಲ್ಲಿ ಬ್ರಹ್ಮರಥೋತ್ಸವದ ವೇಳೆ ಅಂಚು ಮುರಿದು ನಿಂತಲ್ಲೆ ನಿಂತ ರಥ! ಅಪಶಕುನ ಎಂದ ಭಕ್ತರು
ನಂದಿಯಲ್ಲಿ ಬ್ರಹ್ಮರಥೋತ್ಸವದ ವೇಳೆ ಅಂಚು ಮುರಿದು ನಿಂತಲ್ಲೆ ನಿಂತ ರಥ
Follow us on

ಚಿಕ್ಕಬಳ್ಳಾಪುರ: ದಕ್ಷಿಣಕಾಶಿ ಎಂದೇ ಖ್ಯಾತಿಯಾಗಿರುವ ತಾಲೂಕಿನ ನಂದಿಗಿರಿಧಾಮದ ತಪ್ಪಲಿನಲ್ಲಿರುವ ನಂದಿ ಗ್ರಾಮದ ಶ್ರೀ ಭೋಗನಂದೀಶ್ವರ, ಅರುಣಾಚಲೇಶ್ವರ ಹಾಗೂ ಉಮಾಮಹೇಶ್ವರ ದೇವರುಗಳ ಜೋಡಿ ಬ್ರಹ್ಮರಥೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ನಂತರ ಜೋಡಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದ್ರು. ಆದರೆ ಜೋಡಿ ಬ್ರಹ್ಮ ರಥೋತ್ಸವದಲ್ಲಿ ಅಪಶಕುನವೆಂಬಂತೆ ಗಿರಿಜಾಂಭ ಸಮೇತ ಭೋಗನಂದೀಶ್ವರ ಇದ್ದ ರಥದ ಅಚ್ಚು ಮುರಿದು ರಥ ನಿಂತಲ್ಲೆ ನಿಂತ ಘಟನೆ ನಡೆಯಿತು.

ರಥೋತ್ಸವದಲ್ಲಿ ಅಪಶಕುನ ಹಿನ್ನಲೆ ಗಂಡಾತರ ಕಾದಿದೆ ಎನ್ನುತ್ತಿರುವ ಭಕ್ತರು

ಈ ವೇಳೆ ಭಕ್ತರು ಒಂದು ರಥವನ್ನು ಅಲ್ಲೆ ಬಿಟ್ಟು ಗಣಪತಿ ಸಮೇತ ಅಂಭಿಕಾ ರಥವನ್ನು ಮಾತ್ರ ಎಳೆದು ದೇವರ ಕೃಪೆಗೆ ಪಾತ್ರರಾದರು. ಕೊನೆಗೆ ನಿಂತ ರಥದಲ್ಲಿದ್ದ ದೇವರುಗಳನ್ನು ಉತ್ಸವದ ಪಲ್ಲಕ್ಕಿಯಲ್ಲಿ ಇಟ್ಟು ಮೇರವಣಿಗೆ ಮಾಡಲಾಯಿತು. ರಥ ವಿಘ್ನ ಹಿನ್ನಲೆ ಭಕ್ತರು ಬೇರೆ ಬೇರೆ ರೀತಿ ವಿಶ್ಲೇಷಣೆ ಮಾಡಿದ್ದು, ರಾಜ್ಯಕ್ಕೆ ಏನೋ ಗಂಡಾಂತರ ಕಾದಿದೆ ಎಂದು ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ.

ನಂತರ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ರಾಜ್ಯದಲ್ಲಿ ಮಳೆ ಬೆಳೆಯಾಗಿ ರೈತರು ಸಮೃದ್ದಿಯಾಗಿರಲಿ. ರಾಜ್ಯದ ಎಲ್ಲಾ ವರ್ಗದ ಜನ ಸುಖ ಸಂತೋಷದಿಂದ ಇರಲಿ ಎಂದು ಪ್ರಾರ್ಥನೆ ಮಾಡಿದ್ದಾಗಿ ತಿಳಿಸಿದ್ರು. ಇನ್ನೂ ಒಂದು ರಥದ ಅಂಚು ಮುರಿದು ರಥ ನಿಂತಲ್ಲೆ ನಿಂತಿದ್ದರ ಕುರಿತು ದೇವಸ್ಥಾನದ ಆಡಳಿತ ಮಂಡಳಿ ವಿರುದ್ದ ಅಸಮಧಾನ ವ್ಯಕ್ತಪಡಿಸಿದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ