ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿನ ಆ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಅಲ್ಲಿ ಕಾಂಗ್ರೆಸ್ ಹಿರಿಯ ಕಟ್ಟಾಳು ಹಾಗೂ ಕಾಂಗ್ರೆಸ್ ನ ಹಾಲಿ ಶಾಸಕರು ಪಟ್ಟಾಗಿ ಕುಳಿತಿದ್ದಾರೆ. ಅವರನ್ನು ಬಿಟ್ಟು ಈ ಬಾರಿ ಕಾಂಗ್ರೆಸ್ ಟಿಕೇಟ್ ತನಗೇ ಕೊಡ್ತಾರೆ ಅಂತಾ ಕಾಂಗ್ರೆಸ್ (Congress) ಮುಖಂಡ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಆ ಕ್ಷೇತ್ರದ ಮತದಾರರಿಗೆ ಭರ್ಜರಿ ಬಾಡೂಟ ಏರ್ಪಡಿಸಿದ್ರು. ಇನ್ನು ನಮ್ಮ ಜನ ಕೇಳಬೇಕಾ… ಬಿಟ್ಟಿ ಬಾಡೂಟ ಅಂತ ಸರತಿ ಸಾಲಿನಲ್ಲಿ ನಿಂತು ಮುಗಿಬಿದ್ದು ರುಚಿ ರುಚಿ ಬಾಡೂಟಕ್ಕೆ (Badoota) ಸವಿದ್ರು. ಅಷ್ಟಕ್ಕೂ ಅದ್ಯಾವ ಕ್ಷೇತ್ರ? ಅದ್ಯಾವ ಮುಖಂಡ? ಅಂತ ತಿಳಿದುಕೊಳ್ಳಬೇಕಾದರೆ ಇದನ್ನು ಓದಿ (Karnataka Assembly elections 2023).
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ (Sidlaghatta) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಲ್ಲಿ ಈಗ ಗೊಂದಲ ಉಂಟಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಹಾಲಿ ಶಾಸಕ ವಿ. ಮುನಿಯಪ್ಪ (V Muniyappa) ಅವರು ಇದ್ದಾರೆ. ಅವರು ತಮ್ಮ ಪಕ್ಷದಷ್ಟೇ ಪುರಾತನರಾಗಿದ್ದಾರೆ. ಅಂದ್ರೆ ಮುನಿಯಪ್ಪನವರಿಗೂ ವಯಸ್ಸಾಗಿದೆ. ಇದ್ರಿಂದ ಚುನಾವಣೆ ರಾಜಕೀಯದಲ್ಲಿ ಮುನಿಯಪ್ಪನವರಿಗೆ ಅಷ್ಟೊಂದು ಆಸಕ್ತಿ ಕಂಡು ಬಂದಿಲ್ಲ. ಇದ್ರಿಂದ ಕ್ಷೇತ್ರದಲ್ಲಿ ಇದ್ದೂ ಇಲ್ಲದಂತಾಗಿದ್ದಾರೆ.
ಇದನ್ನೇ ಎನ್ ಕ್ಯಾಷ್ ಮಾಡಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರು ರಣಕಣಕ್ಕೆ ಇಳಿದಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇದ್ರಿಂದ ಕ್ಷೇತ್ರದಲ್ಲಿ ಬೀಡುಬಿಟ್ಟಿರುವ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ, ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಹಾಗೂ ಮತದಾರರ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇದ್ರಿಂದ ಇಂದು ಕ್ಷೇತ್ರದಲ್ಲಿ ಭರ್ಜರಿ ಬಾಡೂಟ ಏರ್ಪಡಿಸಿದ್ರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿರುವ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರ ಚಿತ್ತ ಸೆಳೆಯಲು ಮುಂದಾಗಿರುವ ಉದ್ಯಮಿ ರಾಜೀವ್ ಗೌಡ, ಬರೋಬ್ಬರಿ 10 ಸಾವಿರ ಜನರಿಗೆ ಆಗುವಷ್ಟು ಮಟನ್ ಬಿರಿಯಾನಿ ಮಾಡಿಸಿದ್ದರು. ಅದರಲ್ಲಿ ಮಟನ್ ದಮ್ ಬಿರಿಯಾನಿ, ತರಕಾರಿ ಬಿರಿಯಾನಿ ಊಟ ಏರ್ಪಡಿಸಿದ್ದರು. ಮಟನ್ ಬಿರಿಯಾನಿಯ ಘಮ ಘಮ ಸ್ಮೆಲ್ ಸೂಸುತ್ತಿದ್ದಂತೆ… ಜನ ಅದೆಲ್ಲಿದ್ದರೊ ಏನೋ… ಸರತಿ ಸಾಲಿನಲ್ಲಿ ನಿಂತು ಕೆಲವರು ಮಟನ್ ಪಡೆದ್ರೆ ಇನ್ನು ಕೆಲವರು ನಾನಾ ನೀನಾ ಅಂಗತ ಮುಗಿಬಿದ್ದು ಬಾಡೂಟ ಸವಿದರು.
ವರದಿ: ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ