Shivarajkumar: 37 ವರ್ಷ, 125 ಸಿನಿಮಾ, ಹಲವಾರು ಸೂಪರ್​ ಹಿಟ್​; ಕನ್ನಡ ಚಿತ್ರರಂಗದಲ್ಲಿ ಶಿವಣ್ಣನ ಮೈಲಿಗಲ್ಲು

Shivanna | Kannada Film Industry: ಶಿವರಾಜ್​ಕುಮಾರ್​ ಅವರು ಚಂದನವನಕ್ಕೆ ಕಾಲಿಟ್ಟು 37 ವರ್ಷ ತುಂಬಿದೆ. ಈ ಸುದೀರ್ಘ ಪಯಣದಲ್ಲಿ ಅವರು ನೀಡಿದ ಸೂಪರ್​ ಹಿಟ್​ ಸಿನಿಮಾಗಳು ಒಂದೆರಡಲ್ಲ.

Shivarajkumar: 37 ವರ್ಷ, 125 ಸಿನಿಮಾ, ಹಲವಾರು ಸೂಪರ್​ ಹಿಟ್​; ಕನ್ನಡ ಚಿತ್ರರಂಗದಲ್ಲಿ ಶಿವಣ್ಣನ ಮೈಲಿಗಲ್ಲು
ಶಿವರಾಜ್​ಕುಮಾರ್
Follow us
|

Updated on:Feb 19, 2023 | 1:02 PM

ನಟ ಶಿವರಾಜ್​ಕುಮಾರ್​ (Shivarajkumar) ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 37 ವರ್ಷಗಳು ಕಳೆದಿವೆ. ಇಂದಿಗೂ ಅವರು ಬಹುಬೇಡಿಕೆಯ ನಟನಾಗಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಬಗೆಯ ಪಾತ್ರಗಳ ಮೂಲಕ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಇಷ್ಟು ವರ್ಷಗಳು ಉರುಳಿದರೂ ಅವರ ಎನರ್ಜಿ ಕಡಿಮೆ ಆಗಿಲ್ಲ. ಹದಿಹರೆಯದ ಹುಡುಗರನ್ನೂ ನಾಚಿಸುವಂತೆ ಅವರು ಡ್ಯಾನ್ಸ್​ ಮತ್ತು ಫೈಟಿಂಗ್​ ಮಾಡುತ್ತಾರೆ. ಶಿವರಾಜ್​ಕುಮಾರ್​ ಅವರು ಚಂದನವನದಲ್ಲಿ 37 ವರ್ಷಗಳನ್ನು ಪೂರೈಸಿರುವುದಕ್ಕೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಅವರ ಸಿನಿಮಾ (Shivarajkumar Movies) ಜರ್ನಿಯನ್ನು ಫ್ಯಾನ್ಸ್​ ಮೆಲುಕು ಹಾಕುತ್ತಿದ್ದಾರೆ. ಪ್ರಸ್ತುತ ಶಿವರಾಜ್​ಕುಮಾರ್​ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ.

ಶಿವರಾಜ್​ಕುಮಾರ್​ ನಟನೆಯ ಮೊದಲ ಸಿನಿಮಾ ‘ಆನಂದ್​’. ಆ ಚಿತ್ರ ಸೆಟ್ಟೇರಿದ್ದು 1986ರ ಫೆಬ್ರವರಿ 19ರಂದು. ಮೊದಲ ಬಾರಿ ಶಿವಣ್ಣ ಬಣ್ಣ ಹಚ್ಚಿದ್ದು ಈ ದಿನಾಂಕದಲ್ಲಿ. ಇಂದಿಗೆ 37 ವರ್ಷಗಳು ಪೂರ್ಣಗೊಂಡಿವೆ. ಇಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಳ್ಳುವುದು ಎಂದರೆ ಸುಲಭದ ಮಾತಲ್ಲ. ಈವರೆಗೂ 125 ಸಿನಿಮಾಗಳಲ್ಲಿ ಶಿವಣ್ಣ ನಟಿಸಿದ್ದಾರೆ. 125ನೇ ಚಿತ್ರವಾಗಿ ತೆರೆಕಂಡ ‘ವೇದ’ ಸಿನಿಮಾ ಅಭಿಮಾನಿಗಳಿಗೆ ಇಷ್ಟ ಆಗಿದೆ.

ಇದನ್ನೂ ಓದಿ: ‘ಜೈಲರ್’ ಸಿನಿಮಾ ಸೆಟ್​ನ ಫೋಟೋ ವೈರಲ್; ಬಾಡಿಗಾರ್ಡ್ಸ್​ ಜತೆ ಮಿಂಚಿದ ಶಿವಣ್ಣ, ರಜನಿಕಾಂತ್

ಇದನ್ನೂ ಓದಿ
Image
ಶಿವಣ್ಣ ಜತೆ ನಟಿಸುವ ಚಾನ್ಸ್​ ಸಿಕ್ಕರೂ ಮುಹೂರ್ತಕ್ಕೆ ಪ್ರಭುದೇವ ಬರಲಿಲ್ಲ; ಕಾರಣ ತಿಳಿಸಿ ಕ್ಷಮೆ ಕೇಳಿದ ನಟ
Image
ಶಿವರಾಜ್​​ಕುಮಾರ್ ಅವರನ್ನು ಬಾಯ್ತುಂಬ ಹೊಗಳಿದ ಅನುಶ್ರೀ; ಶಿವಣ್ಣನ ರಿಯಾಕ್ಷನ್ ಹೇಗಿತ್ತು ನೋಡಿ
Image
‘ನಾವು ಬೇರೆ ಭಾಷೆಯಲ್ಲಿ ಮಾತಾಡ್ತೀವಿ, ಅದು ಯಾವುದು ಅಂತ ಈಗ ಬೇಡ’: ವೇದಿಕೆಯಲ್ಲಿ ಶಿವಣ್ಣ ಮನದ ಮಾತು
Image
ರಜನಿಕಾಂತ್ ಜತೆ ಶಿವಣ್ಣ ನಟನೆ; ವಿಷಯ ಖಚಿತಪಡಿಸಿ ಹೊಸ ಅಪ್​ಡೇಟ್ ನೀಡಿದ ಶಿವರಾಜ್​ಕುಮಾರ್

ಈ ಸುದೀರ್ಘ ಪಯಣದಲ್ಲಿ ಶಿವಣ್ಣ ನೀಡಿದ ಸೂಪರ್​ ಹಿಟ್​ ಸಿನಿಮಾಗಳು ಒಂದೆರಡಲ್ಲ. ‘ಆನಂದ್​’, ‘ಓಂ’, ‘ಎಕೆ 47’, ‘ನಮ್ಮೂರ ಮಂದಾರ ಹೂವೇ’, ‘ಜನುಮದ ಜೋಡಿ’, ‘ಜೋಗಿ’, ‘ಟಗರು’ ಸೇರಿದಂತೆ ಅನೇಕ ಸಿನಿಮಾಗಳ ಮೂಲಕ ಅವರು ಭಿನ್ನ ವಿಭಿನ್ನ ಪಾತ್ರಗಳನ್ನು ಮಾಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ. 60ರ ಪ್ರಾಯದಲ್ಲೂ ಶಿವರಾಜ್​ಕುಮಾರ್​ ಸಖತ್​ ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ: ಹೈದರಾಬಾದ್​ನಲ್ಲಿ ಅಪ್ಪು ನೆನೆದು ಕಣ್ಣೀರು ಹಾಕಿದ ಶಿವಣ್ಣ; ಸಮಾಧಾನ ಮಾಡಿದ ಬಾಲಯ್ಯ

ಶಿವರಾಜ್​ಕುಮಾರ್​ ಅವರ ಎನರ್ಜಿಗೆ ಯಾರೂ ಸರಿಸಾಟಿ ಇಲ್ಲ ಎನ್ನಬಹುದು. ಈ ವಯಸ್ಸಿನಲ್ಲಿ ಕೂಡ ಅವರು ಸಾಹಸ ದೃಶ್ಯಗಳಲ್ಲಿ ಅಭಿನಯಿಸಲು ಹಿಂದೇಟು ಹಾಕುವುದಿಲ್ಲ. ಈ ಉತ್ಸಾಹದ ಕಾರಣದಿಂದಲೇ ಅವರು ನಿರ್ಮಾಪಕರ ಫೇವರಿಟ್​ ನಟನಾಗಿ ಬೇಡಿಕೆ ಉಳಿಸಿಕೊಂಡಿದ್ದಾರೆ. ಬ್ಯಾಕ್ ಟು​ ಬ್ಯಾಕ್​ ಸಿನಿಮಾಗಳಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಹೊಸ ಹೊಸ ಚಿತ್ರಗಳು ಅನೌನ್ಸ್​ ಆಗುತ್ತಿವೆ. ಶಿವರಾತ್ರಿ ಹಬ್ಬದ ಪ್ರಯುಕ್ತ ‘ಬೈರತಿ ರಣಗಲ್​’ ಚಿತ್ರದ ಘೋಷಣೆ ಆಗಿದೆ. ಈ ಚಿತ್ರಕ್ಕೆ ನರ್ತನ್​ ನಿರ್ದೇಶನ ಮಾಡಲಿದ್ದಾರೆ.

ಇದನ್ನೂ ಓದಿ: ‘ನನ್ನ ಎಲ್ಲ ಮೈಲುಗಲ್ಲಿನ ಚಿತ್ರಗಳಲ್ಲಿ ಹೆಣ್ಣಿನ ಕಥೆ’; ಮೊದಲ ಚಿತ್ರದಿಂದ ‘ವೇದ’ ತನಕ ಮಾತಾಡಿದ ಶಿವಣ್ಣ

ಶ್ರೀನಿ ನಿರ್ದೇಶನದ ‘ಘೋಸ್ಟ್​’ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ನಟಿಸುತ್ತಿದ್ದಾರೆ. ರಜನಿಕಾಂತ್​ ನಟನೆಯ ‘ಜೈಲರ್​’ ಸಿನಿಮಾದಲ್ಲೂ ಅವರೊಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಧನುಷ್​ ಅಭಿನಯದ ‘ಕ್ಯಾಪ್ಟನ್​ ಮಿಲ್ಲರ್​’ ಚಿತ್ರದಲ್ಲೂ ಶಿವಣ್ಣ ನಟಿಸುತ್ತಿದ್ದಾರೆ. ಈ ಎಲ್ಲ ಸಿನಿಮಾಗಳು ಭಾರಿ ನಿರೀಕ್ಷೆ ಸೃಷ್ಟಿ ಮಾಡಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:02 pm, Sun, 19 February 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ