Ghost Movie: ಶಿವರಾಜ್ಕುಮಾರ್ ನಟನೆಯ ‘ಘೋಸ್ಟ್’ ಮೋಷನ್ ಪೋಸ್ಟರ್ ರಿಲೀಸ್; ಹೊಸ ವರ್ಷಕ್ಕೆ ಶ್ರೀನಿ ಗಿಫ್ಟ್
Ghost Movie Motion Poster: ‘ಘೋಸ್ಟ್’ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಯನ್ನು ದುಪ್ಪಟ್ಟು ಮಾಡುವ ರೀತಿಯಲ್ಲಿ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ.
ನಟ, ನಿರ್ದೇಶಕ ಶ್ರೀನಿ (Srini) ಅವರು ‘ಘೋಸ್ಟ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಬಹುನಿರೀಕ್ಷಿತ ಚಿತ್ರಕ್ಕೆ ‘ಸೆಂಚುರಿ ಸ್ಟಾರ್’ ಶಿವರಾಜ್ಕುಮಾರ್ (Shivarajkumar) ಹೀರೋ. ಕೆಲವೇ ದಿನಗಳ ಹಿಂದೆ ಈ ಚಿತ್ರಕ್ಕೆ 2ನೇ ಹಂತದ ಚಿತ್ರೀಕರಣ ಮುಕ್ತಾಯ ಆಗಿತ್ತು. ಈಗ ಹೊಸ ವರ್ಷದ ಪ್ರಯುಕ್ತ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇದನ್ನು ಕಂಡು ‘ಹ್ಯಾಟ್ರಿಕ್ ಹೀರೋ’ ಅಭಿಮಾನಿಗಳಿಗೆ ಖುಷಿ ಆಗಿದೆ. ‘ಘೋಸ್ಟ್’ (Ghost Movie) ಸಿನಿಮಾದಲ್ಲಿ ಶಿವಣ್ಣ ಅವರ ಪಾತ್ರ ಸಖತ್ ರಗಡ್ ಆಗಿರಲಿದೆ. ಮೇಕಿಂಗ್ ಕೂಡ ಅದ್ದೂರಿಯಾಗಿ ಇರಲಿದೆ ಎಂಬುದಕ್ಕೆ ಈ ಮೋಷನ್ ಪೋಸ್ಟರ್ ಸುಳಿವು ನೀಡುತ್ತಿದೆ. ಶೀಘ್ರದಲ್ಲಿಯೇ ಟೀಸರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.
ಬ್ಯಾಕ್ ಟು ಬ್ಯಾಕ್ ಸಿನಿಮಾ ಕೆಲಸಗಳಲ್ಲಿ ಶಿವರಾಜ್ಕುಮಾರ್ ಅವರು ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ತೆರೆಕಂಡ ಅವರ ‘ವೇದ’ ಸಿನಿಮಾ ಸೂಪರ್ ಹಿಟ್ ಆಗಿದೆ. ಆದ್ದರಿಂದ ಅವರ ಮುಂಬರುವ ಸಿನಿಮಾಗಳ ಮೇಲೆ ಸಹಜವಾಗಿಯೇ ನಿರೀಕ್ಷೆ ಜೋರಾಗಿದೆ. ಅದರಲ್ಲೂ ಶ್ರೀನಿ ಜೊತೆ ಅವರು ಕೈ ಜೋಡಿಸಿರುವುದರಿಂದ ಹೆಚ್ಚು ಹೈಪ್ ಸೃಷ್ಟಿ ಮಾಡಿದೆ. ಶ್ರೀನಿ ಮತ್ತು ಶಿವಣ್ಣ ಅವರ ಕಾಂಬಿನೇಷನ್ ಆದ್ದರಿಂದ ‘ಘೋಸ್ಟ್’ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಯನ್ನು ದುಪ್ಪಟ್ಟು ಮಾಡುವ ರೀತಿಯಲ್ಲಿ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ.
ಇದನ್ನೂ ಓದಿ: Shivarajkumar: ಮೊದಲ ಹಂತದ ಶೂಟಿಂಗ್ ಮುಗಿಸಿದ ‘ಘೋಸ್ಟ್’; ಶಿವಣ್ಣ-ಶ್ರೀನಿ ಸೂಪರ್ ಫಾಸ್ಟ್
ಶ್ರೀನಿ ಅವರು ಕನ್ನಡ ಚಿತ್ರರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ‘ಬೀರ್ಬಲ್’ ಅಂತಹ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. 2022ರಲ್ಲಿ ತೆರೆಗೆ ಬಂದ ‘ಓಲ್ಡ್ ಮಾಂಕ್’ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯಭೂಮಿಕೆಯಲ್ಲೂ ನಟಿಸಿದರು. ಪ್ರೇಕ್ಷಕರಿಗೆ ಆ ಸಿನಿಮಾ ಸಖತ್ ಇಷ್ಟವಾಯಿತು. ಹಾಗಾಗಿ ಶ್ರೀನಿ ಅವರ ನಿರ್ದೇಶನದ ಮೇಲೆ ಸಿನಿಪ್ರಿಯರಿಗೆ ಭರವಸೆ ಮೂಡಿದೆ.
ಇದನ್ನೂ ಓದಿ: Shivarajkumar: ‘ಎಲ್ಲರಿಗೂ ಬಾಸ್ ಒಬ್ಬರೇ’; ಬಾಸ್ ಎಂದ ಅಭಿಮಾನಿಗೆ ಬುದ್ಧಿವಾದ ಹೇಳಿದ ಶಿವಣ್ಣ
ಶ್ರೀನಿ ಅವರ ಈ ಹಿಂದಿನ ಸಿನಿಮಾಗಳಿಗಿಂತಲೂ ತುಂಬ ಡಿಫರೆಂಟ್ ಆಗಿ ‘ಘೋಸ್ಟ್’ ಚಿತ್ರ ಮೂಡಿಬರುತ್ತಿದೆ. ನಿರ್ದೇಶಕ ಶ್ರೀನಿ ಅವರೇ ಕಥೆ-ಚಿತ್ರಕಥೆ ಬರೆದಿದ್ದಾರೆ. ಮಾಸ್ತಿ ಹಾಗೂ ಪ್ರಸನ್ನ ಅವರು ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣದಲ್ಲಿ ‘ಘೋಸ್ಟ್’ ಚಿತ್ರ ಮೂಡಿಬರುತ್ತಿದೆ.
Make way for ya’ man #GHOST. Presenting you the MotionPoster of #GHOST.. shooting in progress@lordmgsrinivas @ArjunJanyaMusic@SandeshPro@baraju_SuperHit pic.twitter.com/GGLr3Caxcg
— DrShivaRajkumar (@NimmaShivanna) January 1, 2023
ಐದು ಸಾಹಸ ಸನ್ನಿವೇಶಗಳು ‘ಘೋಸ್ಟ್’ ಚಿತ್ರದಲ್ಲಿ ಇರಲಿವೆ. ಶಿವರಾಜ್ಕುಮಾರ್ ಜೊತೆ ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ನಟಿಸುತ್ತಿದ್ದಾರೆ. ‘ಸಂದೇಶ್ ಪ್ರೊಡಕ್ಷನ್ಸ್’ ಮೂಲಕ ಸಂದೇಶ್ ಎನ್. ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬೆಂಗಳೂರಿನ ಮಿನರ್ವ ಮಿಲ್ನಲ್ಲಿ 15ಕ್ಕೂ ಹೆಚ್ಚು ಸೆಟ್ಗಳನ್ನು ನಿರ್ಮಿಸಿ, ಹಲವು ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:18 pm, Sun, 1 January 23