Shivarajkumar: ‘ಎಲ್ಲರಿಗೂ ಬಾಸ್ ಒಬ್ಬರೇ’; ಬಾಸ್ ಎಂದ ಅಭಿಮಾನಿಗೆ ಬುದ್ಧಿವಾದ ಹೇಳಿದ ಶಿವಣ್ಣ
ನವೆಂಬರ್ 28ರಂದು ಮೈಸೂರಿನ ಇಟ್ಟಿಗೆಗೂಡು ಬಡಾವಣೆಯಲ್ಲಿ ಡಾ. ರಾಜ್ಕುಮಾರ್ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಶಿವಣ್ಣ ಭಾಗಿ ಆಗಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಬಾಸ್ ವಿಚಾರವಾಗಿ ಮಾತನಾಡಿದ್ದಾರೆ.
ಶಿವರಾಜ್ಕುಮಾರ್ (Shivarajkumar) ಅವರು ಹಲವು ಬಾರಿ ನೇರ ಮಾತುಗಳನ್ನು ಆಡುವ ಮೂಲಕ ಗುರುತಿಸಿಕೊಂಡಿದ್ದಾರೆ. ಈಗ ಅವರು ಬಾಸ್ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಬಾಸ್ ಬಿರುದಿಗಾಗಿ ಅಭಿಮಾನಿಗಳ ಮಧ್ಯೆ ಕಿತ್ತಾಟ ನಡೆದೇ ಇದೆ. ಹಲವು ಸ್ಟಾರ್ಗಳ ಅಭಿಮಾನಿಗಳು ಈ ವಿಚಾರಕ್ಕಾಗಿ ಕಿತ್ತಾಡಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಜಗಳ ಮಾಡಿಕೊಳ್ಳುವ ಅಭಿಮಾನಿಗಳಿಗೆ ಶಿವರಾಜ್ಕುಮಾರ್ ಅವರು ಕಿವಿಮಾತು ಹೇಳಿದ್ದಾರೆ. ‘ಎಲ್ಲರಿಗೂ ಒಬ್ಬರೇ ಬಾಸ್. ಅದು ದೇವರು’ ಎಂದಿದ್ದಾರೆ ಶಿವರಾಜ್ಕುಮಾರ್.
ನವೆಂಬರ್ 28ರಂದು ಮೈಸೂರಿನ ಇಟ್ಟಿಗೆಗೂಡು ಬಡಾವಣೆಯಲ್ಲಿ ಡಾ. ರಾಜ್ಕುಮಾರ್ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಶಿವಣ್ಣ ಭಾಗಿ ಆಗಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಬಾಸ್ ವಿಚಾರವಾಗಿ ಮಾತನಾಡಿದ್ದಾರೆ. ‘ಎಲ್ಲರಿಗೂ ಬಾಸ್ ಒಬ್ಬರೇ ಅದು ದೇವರು. ಏಕೆ ಬಾಸ್ ಬಾಸ್ ಅಂತಾ ಒದ್ದಾಡ್ತೀರಾ? ಎಲ್ಲರ ಮನೆಯಲ್ಲೂ ಒಬ್ಬೊಬ್ಬ ಬಾಸ್ ಇರುತ್ತಾನೆ. ಎಲ್ಲರ ಹೃದಯದಲ್ಲೂ ಒಬ್ಬ ಬಾಸ್ ಇರ್ತಾನೆ. ಮನೆಗೆ ಅವನೇ ಬಾಸ್. ನಾನೊಬ್ಬನೇ ಬಾಸ್ ಅಲ್ಲ’ ಎಂದಿದ್ದಾರೆ ಶಿವರಾಜ್ಕುಮಾರ್.
ಈ ಹೇಳಿಕೆ ಬಂದಿದ್ದೇಕೆ?
ಮೈಸೂರಿನ ರಿಫ್ರೆಶ್ಮೆಂಟ್ ಮಾಲೀಕ ವಿಶ್ವ ಎಂಬುವವರು ಈ ಕಾರ್ಯಕ್ರಮ ಆಯೋಜಿಸಿದ್ದರು. ಅಲ್ಲಿದ್ದ ಯುವಕನೋರ್ವ ‘ವಿಶ್ವ ಅವರನ್ನು ನಮ್ಮ ಬಾಸ್’ ಎಂದರು. ಯುವಕನಿಗೆ ಬಾಸ್ ಬಗ್ಗೆ ಶಿವಣ್ಣ ವಿವರಣೆ ನೀಡಿದ್ದಾರೆ. ಶಿವರಾಜ್ಕುಮಾರ್ ಮಾತಿಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಾರ್ಯಕ್ರಮದಲ್ಲಿ ನಿರ್ಮಾಪಕ ಸಂದೇಶ್ ಸೇರಿ ಹಲವರು ಭಾಗಿ ಆಗಿದ್ದರು.
ವೇದ ಗೆದ್ದ ಸಂಭ್ರಮದಲ್ಲಿ ಶಿವಣ್ಣ
ಶಿವರಾಜ್ಕುಮಾರ್ ಅವರು ‘ವೇದ’ ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ. ನಿರ್ದೇಶಕ ಎ.ಹರ್ಷ ಜತೆಗೆ ಸೇರಿ ಮಾಡಿರುವ ನಾಲ್ಕನೇ ಸಿನಿಮಾ ಇದಾಗಿದೆ. ಈ ಸಿನಿಮಾದ ವಿಜಯ ಯಾತ್ರೆಯಲ್ಲಿ ಶಿವರಾಜ್ಕುಮಾರ್ ಭಾಗಿ ಆಗುತ್ತಿದ್ದಾರೆ. ಇದಕ್ಕಾಗಿ ಅವರು ನಾನಾ ಕಡೆಗೆ ತೆರಳುತ್ತಿದ್ದಾರೆ. ಸದ್ಯ ಅವರು ಮೈಸೂರಿನಲ್ಲಿದ್ದಾರೆ.
ಹರ್ಷ ಕಾಂಬಿನೇಷನ್ ಬಗ್ಗೆ ಮಾತನಾಡಿದ್ದ ಶಿವಣ್ಣ
ನಿರ್ದೇಶಕ ಎ. ಹರ್ಷ ಮತ್ತು ನಟ ಶಿವರಾಜ್ಕುಮಾರ್ ಅವರು ‘ಭಜರಂಗಿ’, ‘ವಜ್ರಕಾಯ’, ‘ಭಜರಂಗಿ 2’, ‘ವೇದ’ ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ‘ವೇದ’ ಚಿತ್ರ ಯಶಸ್ಸು ಕಂಡಿದ್ದು, ಹಲವು ಚಿತ್ರಮಂದಿರಗಳಿಗೆ ಎ. ಹರ್ಷ ಮತ್ತು ಶಿವಣ್ಣ ಜೊತೆಯಾಗಿ ಭೇಟಿ ನೀಡುತ್ತಿದ್ದಾರೆ. ಪದೇಪದೇ ಒಟ್ಟಿಗೆ ಸಿನಿಮಾ ಮಾಡುತ್ತಿರುವ ಬಗ್ಗೆ ಮೈಸೂರಿನಲ್ಲಿ ಮಾಧ್ಯಮದವರಿಂದ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಉತ್ತರಿಸಿದ ಶಿವಣ್ಣ, ‘ಇನ್ನೂ ಹತ್ತು ಸಿನಿಮಾ ಒಟ್ಟಿಗೆ ಮಾಡ್ತೀವಿ. ನಿಮಗೇನಾದರೂ ಹೊಟ್ಟೆಕಿಚ್ಚಾ? ಅವರ ಜೊತೆ ಯಾವಾಗಲೂ ನನಗೆ ಕಂಫರ್ಟ್ ಆಗಿರುತ್ತದೆ’ ಎಂದಿದ್ದರು ಶಿವರಾಜ್ಕುಮಾರ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:01 am, Thu, 29 December 22