- Kannada News Photo gallery Swetha Changappa did bold character in Shivarajkumar starrer Vedha Kannada movie
Swetha Changappa: ‘ವೇದ’ ಚಿತ್ರದಲ್ಲಿ ಬೋಲ್ಡ್ ಪಾತ್ರ ಮಾಡಿದ ಶ್ವೇತಾ ಚಂಗಪ್ಪ; ಅಭಿಮಾನಿಗಳಿಂದ ಭರ್ಜರಿ ಮೆಚ್ಚುಗೆ
Swetha Changappa Photos: ‘ವೇದ’ ಸಿನಿಮಾದಲ್ಲಿ ನಟಿ ಶ್ವೇತಾ ಚಂಗಪ್ಪ ಅವರು ಡಿಫರೆಂಟ್ ಪಾತ್ರ ಮಾಡಿದ್ದಾರೆ. ತುಂಬ ಬೋಲ್ಡ್ ಆಗಿ ಅವರು ಕಾಣಿಸಿಕೊಂಡಿದ್ದಾರೆ.
Updated on: Dec 24, 2022 | 7:45 AM

ನಟಿ ಶ್ವೇತಾ ಚಂಗಪ್ಪ ಅವರು ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಫೇಮಸ್ ಆಗಿದ್ದಾರೆ. ನಟಿಯಾಗಿ, ನಿರೂಪಕಿಯಾಗಿ ಅವರು ಗಮನ ಸೆಳೆದಿದ್ದಾರೆ. ‘ವೇದ’ ಚಿತ್ರದಲ್ಲಿ ಅವರಿಗೆ ಮಹತ್ವದ ಪಾತ್ರವಿದೆ.

ಶಿವರಾಜ್ಕುಮಾರ್ ನಟನೆಯ ‘ವೇದ’ ಸಿನಿಮಾ ಡಿ.23ರಂದು ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಶ್ವೇತಾ ಚಂಗಪ್ಪ ಅವರು ಡಿಫರೆಂಟ್ ಪಾತ್ರ ಮಾಡಿದ್ದಾರೆ. ತುಂಬ ಬೋಲ್ಡ್ ಆಗಿ ಅವರು ಕಾಣಿಸಿಕೊಂಡಿದ್ದಾರೆ.

ಎ. ಹರ್ಷ ನಿರ್ದೇಶನದ ಈ ಸಿನಿಮಾದಲ್ಲಿ ಶ್ವೇತಾ ಚಂಗಪ್ಪ ಅವರು ಫೈಟಿಂಗ್ ಮಾಡಿದ್ದಾರೆ. ಖಳರನ್ನು ಸೆದೆಬಡಿಸುವ ದಿಟ್ಟ ಮಹಿಳೆಯಾಗಿ ಅವರು ಅಭಿನಯಿಸಿದ್ದಾರೆ. ಕಥೆಗೆ ಟ್ವಿಸ್ಟ್ ನೀಡುವಂತಹ ಪಾತ್ರ ಇದಾಗಿದೆ.

‘ವೇದ’ ಸಿನಿಮಾದಲ್ಲಿ ಮಹಿಳೆಯರ ಪಾತ್ರಗಳಿಗೆ ಸಾಕಷ್ಟು ಮಹತ್ವ ನೀಡಲಾಗಿದೆ. ಶ್ವೇತಾ ಚಂಗಪ್ಪ ಮಾತ್ರವಲ್ಲದೇ ನಟಿಯರಾದ ಗಾನವಿ ಲಕ್ಷ್ಮಣ್ ಮತ್ತು ಅದಿತಿ ಸಾಗರ್ ಅವರು ನಿಭಾಯಿಸಿದ ಪಾತ್ರಗಳು ಕೂಡ ಹೈಲೈಟ್ ಆಗಿವೆ.

ಈ ರೀತಿಯ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ಶ್ವೇತಾ ಚಂಗಪ್ಪ ಖುಷಿ ಆಗಿದ್ದಾರೆ. ಅವರ ನಟನೆಗೆ ಅಭಿಮಾನಿಗಳು ಮತ್ತು ವಿಮರ್ಶಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ‘ವೇದ’ ಚಿತ್ರ ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.




