2020 ಆ ಭಾನುವಾರ ನನ್ನ ಬದುಕು ಬದಲಾಯ್ತು, ಅಂದಿನಿಂದ ಕೇಳಲಾಗುತ್ತಿರುವ ಆ ಒಂದು ಪ್ರಶ್ನೆಗೆ ಉತ್ತರ ಕೊಡ್ತೀನಿ -ಕುತೂಹಲ ಮೂಡಿಸಿದ ಮೇಘನಾ ರಾಜ್ ಪೋಸ್ಟ್
Meghana Raj: ಭಾನುವಾರ ನಾನು ಆ ಪ್ರಶ್ನೆಯೊಂದಕ್ಕೆ ಉತ್ತರ ನೀಡಲಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ನಟಿ ಮೇಘನಾ ರಾಜ್ ಸರ್ಜಾ ಅವರು ಕುತೂಹಲ ಮೂಡಿಸಿದ್ದಾರೆ.
ಬೆಂಗಳೂರು: “2020, ಭಾನುವಾರದ ದಿನ ನನ್ನ ಬದುಕು ಸಂಪೂರ್ಣವಾಗಿ ಬದಲಾಯ್ತು. ಆಗಿನಿಂದಲೂ ನನಗೆ ಒಂದು ಪ್ರಶ್ನೆಯನ್ನು ಕೇಳಲಾಗುತ್ತಿದೆ. ಆ ಒಂದು ಪ್ರಶ್ನೆಗೆ ಉತ್ತರ ನೀಡುವ ಸಮಯ ಬಂದಿದೆ. ಭಾನುವಾರ ನಾನು ಆ ಪ್ರಶ್ನೆಯೊಂದಕ್ಕೆ ಉತ್ತರ ನೀಡಲಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ನಟಿ ಮೇಘನಾ ರಾಜ್ ಸರ್ಜಾ(Meghana Raj) ಅವರು ಕುತೂಹಲ ಮೂಡಿಸಿದ್ದಾರೆ. ಈ ಮೂಲಕ ಜೀವನದ ಬಹುಮುಖ್ಯವಾದ ವಿಷಯವೊಂದನ್ನು ಬಹಿರಂಗಪಡಿಸಲಿದ್ದಾರೆ.
ಪ್ರೀತಿಸಿ ಮದುವೆಯಾಗಿದ್ದ ಚಿರಂಜೀವಿ ಸರ್ಜಾ ನಿಧನದ ನಂತರ ಜೀವನದಲ್ಲಿ ಕುಗ್ಗಿದ್ದ ಮೇಘನಾ ರಾಜ್ ಅವರು ಡ್ಯಾನ್ಸ್ ಶೋ ಸೇರಿದಂತೆ ಕೆಲ ವೇದಿಕೆಗಳಲ್ಲಿ ಭಾಗಿಯಾಗುವ ಮೂಲಕ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗುವ ಮೂಲಕ ತಮ್ಮ ನೋವನ್ನು ಮರೆಯುವ ಪ್ರಯತ್ನ ಮಾಡುತ್ತಿದ್ದರು. ಆದ್ರೆ ಬಹುತೇಕ ಅಭಿಮಾನಿಗಳು ಹಾಗೂ ಸ್ನೇಹಿತರು ತಾವು ಮತ್ತೊಂದು ಮದುವೆ ಯಾಕೆ ಆಗಬಾರದು? ನೀವು ಎರಡನೇ ಮದುವೆಯಾಗುತ್ತೀರಾ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದರು. ಸದ್ಯ ಮೇಘನಾ ರಾಜ್ ಅವರು ನನಗೆ ಬಹಳ ಸಲ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರ ನೀಡಲಿದ್ದೇನೆ ಎಂದು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದು ಅದು ಭಾರೀ ಕುತೂಹಲ ಮೂಡಿಸಿದೆ. ಈ ಪೋಸ್ಟ್ಗೆ ಅನೇಕರು ಪ್ರತಿಕ್ರಿಯಿಸಿದ್ದು ಅನೇಕ ಊಹೆಗಳು ಹೊರ ಬೀಳುತ್ತಿವೆ. ಮೇಘನಾ ಅವರ ಉತ್ತರ ಕೇಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಂದು ಬೆಳಗ್ಗೆ 10.35ಕ್ಕೆ ಮೇಘನಾ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಲಿದ್ದಾರೆ.
ಇದನ್ನೂ ಓದಿ: ಥೈಲ್ಯಾಂಡ್ನಲ್ಲಿ ಮೇಘನಾ ರಾಜ್ ಮೋಜು-ಮಸ್ತಿ; ಇಲ್ಲಿವೆ ಫೋಟೋಗಳು
ಮೇಘನಾ ರಾಜ್ ಪೋಸ್ಟ್ ಏನು?
“2020, ಭಾನುವಾರವಾಗಿತ್ತು ನನ್ನ ವಿಚಾರದಲ್ಲಿ ತೀವ್ರವಾದ ಬದಲಾವಣೆಯಾದವು. ಆಗಿನಿಂದಲೂ ನನಗೆ ಒಂದು ಪ್ರಶ್ನೆಯನ್ನು ಕೇಳಲಾಗುತ್ತಿದೆ. ಫೆಬ್ರವರಿ 19ರ ಭಾನುವಾರ ನಾನು ಆ ಪ್ರಶ್ನೆಗೆ ಉತ್ತರ ಕೊಡ್ತೀನಿ. 2023ರ ಫೆಬ್ರವರಿ 19ರ ಬೆಳಗ್ಗೆ 10.35ಕ್ಕೆ” ಎಂದು ನಟಿ ಮೇಘನಾ ರಾಜ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ. ಅದಕ್ಕೆ ಅನೇಕರು ವಿಧ ವಿಧವಾದ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:58 am, Sun, 19 February 23