CCL 2023: ಸೆಲೆಬ್ರಿಟಿ ಕ್ರಿಕೆಟ್ ಲೀಗ್ಗೆ ಚಾಲನೆ: ಟಾಸ್ ಸೋತ ಕರ್ನಾಟಕ
Karnataka Bulldozers vs Bengal Tigers: ಜೈಪುರ, ಹೈದರಾಬಾದ್, ರಾಯ್‌ಪುರ, ಜೋಧ್‌ಪುರ, ಬೆಂಗಳೂರು ಮತ್ತು ತಿರುವನಂತಪುರಂನ ಆರು ನಗರಗಳಲ್ಲಿ ಎಂಟು ತಂಡಗಳು ಒಟ್ಟು 19 ಪಂದ್ಯಗಳನ್ನು ಆಡಲಿವೆ.
ಸಿನಿತಾರೆಯರ ರಂಗು ರಂಗಿನ ಕ್ರಿಕೆಟ್ ಟೂರ್ನಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ಗೆ ಚಾಲನೆ ದೊರೆತಿದೆ. ರಾಯ್‌ಪುರ ಶಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಝರ್ಸ್ ಹಾಗೂ ಬೆಂಗಾಲ್ ಟೈಗರ್ಸ್ (Karnataka Bulldozers vs Bengal Tigers) ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಬೆಂಗಾಲ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿದೆ. ವಿಶೇಷ ಎಂದರೆ ಕರ್ನಾಟಕ ತಂಡವನ್ನು ಈ ಬಾರಿ ಸುದೀಪ್ (Sudeep) ಮುನ್ನಡೆಸುತ್ತಿಲ್ಲ. ಬದಲಾಗಿ ಯುವ ನಾಯಕ ನಟ ಪ್ರದೀಪ್ಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಇನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಂಡದಲ್ಲಿ ಇರುವುದು ಬುಲ್ಡೋಝರ್ಸ್ ಬಲ ಹೆಚ್ಚಿಸಿದೆ. ಹಾಗೆಯೆ ಇದೇ ಮೊದಲ ಬಾರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಕಣಕ್ಕಿಳಿಯುತ್ತಿದ್ದಾರೆ.
ಜೈಪುರ, ಹೈದರಾಬಾದ್, ರಾಯ್‌ಪುರ, ಜೋಧ್‌ಪುರ, ಬೆಂಗಳೂರು ಮತ್ತು ತಿರುವನಂತಪುರಂನ ಆರು ನಗರಗಳಲ್ಲಿ ಎಂಟು ತಂಡಗಳು ಒಟ್ಟು 19 ಪಂದ್ಯಗಳನ್ನು ಆಡಲಿವೆ. ಎರಡು ಸೆಮಿ ಫೈನಲ್ ಪಂದ್ಯಗಳು ಮಾರ್ಚ್ 18 ರಂದು ನಡೆಯಲಿದ್ದರೆ, ಗ್ರ್ಯಾಂಡ್ ಫಿನಾಲೆ ಮರುದಿನ ಹೈದರಾಬಾದ್‌ನಲ್ಲಿ ಆಯೋಜಿಸಲಾಗಿದೆ. ಎಲ್ಲಾ ಪಂದ್ಯಗಳು ಮಧ್ಯಾಹ್ನ 02:30 ಮತ್ತು 07:00 ರಿಂದ ಪ್ರಾರಂಭವಾಗುತ್ತವೆ.
ಈ ಪಂದ್ಯಗಳನ್ನು ಯಾವ ಚಾನೆಲ್ಗಳಲ್ಲಿ ಲೈವ್ ವೀಕ್ಷಿಸಬಹುದು?
- ಝೀ ಅನ್ಮೋಲ್ ಸಿನಿಮಾ – ಹಿಂದಿ
- & ಪಿಚ್ಚರ್ಸ್ – ಇಂಗ್ಲೀಷ್
- ಝೀ ತಿರೈ – ತಮಿಳು
- ಝೀ ಸಿನಿಮಾಲು – ತೆಲುಗು
- ಝೀ ಪಿಚ್ಚರ್ – ಕನ್ನಡ
- ಫ್ಲವರ್ಸ್ ಟಿವಿ – ಮಲಯಾಳಂ
- PTC ಪಂಜಾಬಿ – ಪಂಜಾಬಿ
- ಝೀ ಬಾಂಗ್ಲಾ ಸಿನಿಮಾ – ಬಾಂಗ್ಲಾ
- ಝೀ ಬಿಸ್ಕೋಪ್ – ಭೋಜ್‌ಪುರಿ
ಹಾಗೆಯೇ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಯೂಟ್ಯೂಬ್ ಚಾನೆಲ್ನಲ್ಲೂ ಈ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದೆ.
ಕರ್ನಾಟಕ ಬುಲ್ಡೋಝರ್ಸ್ ತಂಡ: ಪ್ರದೀಪ್, ರಾಜೀವ್ ಹೆಚ್, ಕಿಚ್ಚ ಸುದೀಪ್, ಸುನೀಲ್ ರಾವ್, ಜಯರಾಮ್ ಕಾರ್ತಿಕ್, ಪ್ರತಾಪ್, ಪ್ರಸನ್ನ, ಶಿವರಾಜ ಕುಮಾರ್, ಗಣೇಶ್, ಕೃಷ್ಣ, ಸೌರವ್ ಲೋಕೇಶ್, ಚಂದನ್, ಅರ್ಜುನ್ ಯೋಗಿ, ನಿರೂಪ್ ಭಂಡಾರಿ, ನಂದ ಕಿಶೋರ್, ಸಾಗರ್ ಗೌಡ.
ಬೆಂಗಾಲ್ ಟೈಗರ್ಸ್ ತಂಡ: ಉದಯ್, ಇಂದ್ರಶಿಶ್, ಮೋಹನ್, ಸುಮನ್, ಜಾಯ್, ಜೋ, ಯೂಸುಫ್, ಜೀತು ಕಮಲ್, ಜಮ್ಮಿ, ರತ್ನದೀಪ್ ಘೋಷ್, ಆನಂದ ಚೌಧರಿ, ಸ್ಯಾಂಡಿ, ಆದಿತ್ಯ ರಾಯ್ ಬ್ಯಾನರ್ಜಿ, ಅರ್ಮಾನ್ ಅಹಮದ್, ಮಾಂಟಿ, ರಾಹುಲ್ ಮಜುಂದಾರ್, ಗೌರವ್ ಚಕ್ರವರ್ತಿ, ಬೋನಿ, ಸೌರವ್ ದಾಸ್.
Published On - 2:36 pm, Sat, 18 February 23