ವೇದ ಸಿನಿಮಾ ಸಕ್ಸಸ್ ಮೀಟ್: ಕಲಾವಿದರಿಗೆ ನೆನಪಿನ ಕಾಣಿಕೆಯಾಗಿ ಬೆಳ್ಳಿ ಪದಕ ನೀಡಿದ ಚಿತ್ರತಂಡ

ವೇದ ಚಿತ್ರ 50 ದಿನಗಳನ್ನು ಪೂರ್ಣಗೊಳಿಸಿದೆ. ಇಡೀ ಚಿತ್ರತಂಡ ಸಂಭ್ರಮದಲ್ಲಿದ್ದು, ತಂತ್ರಜ್ಞಾನರಿಗೆ ನೆನಪಿನ ಕಾಣಿಕೆ ನೀಡುವ ಮೂಲಕ ವೇದ ಸಕ್ಸಸ್ ಸಂಭ್ರಮವನ್ನ ಆಚರಿಸಲಾಯಿತು.

Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Feb 19, 2023 | 10:06 PM

ಸೆಂಚುರಿ ಸ್ಟಾರ್​ ಶಿವರಾಜ್​ಕುಮಾರ್ (Shivarajkumar) ನಟನೆಯ, ಎ. ಹರ್ಷ ನಿರ್ದೇಶನದ, ಗೀತಾ ಪಿಕ್ಚರ್ಸ್ ಬ್ಯಾನರ್​ನಲ್ಲಿ ನಿರ್ಮಾಣವಾದ ಚಿತ್ರವೇ ‘ವೇದ’. ಶಿವಣ್ಣನ 125ನೇ ಸಿನಿಮಾ ಕೂಡ ವೇದ’. ಕಳೆದ ವರ್ಷ ಡಿಸೆಂಬರ್​ 22 ರಂದು ವೇದ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಇಂದಿಗೆ 50 ದಿನಗಳನ್ನು ಪೂರೈಸಿದೆ. ‘ಕಾಂತಾರ’ ಚಿತ್ರದ ಬಳಿಕ ವೇದ ಚಿತ್ರ 50 ದಿನಗಳನ್ನು ಪೂರ್ಣಗೊಳಿಸಿರುವ ಮತ್ತೊಂದು ಚಿತ್ರವಾಗಿದೆ. ‘ವೇದ’ ಚಿತ್ರ ಇನ್ನು ಚಿತ್ರಮಂದಿರಗಳಲ್ಲಿ ಮತ್ತು ಓಟಿಟಿಯಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕನ್ನಡ ಸೇರಿದಂತೆ ತೆಲುಗಿನಲ್ಲಿಯೂ ‘ವೇದ’ ಚಿತ್ರ ತನ್ನ ಆರ್ಭಟ ಮುಂದುವರೆಸಿದೆ. ಸದ್ಯ 50 ದಿನಗಳನ್ನು ಪೂರೈಸಿರುವ ‘ವೇದ’ ಚಿತ್ರತಂಡ ಖುಷಿಯಲ್ಲಿದೆ. ಈ ವಿಚಾರವಾಗಿ ಇಂದು (ಫೆ. 19) ಸಕ್ಸಸ್ ಮೀಟ್​ ಆಯೋಜನೆ ಮಾಡಿತ್ತು. ಸಿನಿಮಾ ತಂಡ ಹಾಗೂ ತಂತ್ರಜ್ಞಾನರಿಗೆ ನೆನಪಿನ ಕಾಣಿಕೆ ನೀಡುವ ಮೂಲಕ ‘ವೇದ’ ಸಕ್ಸಸ್ ಸಂಭ್ರಮವನ್ನ ಆಚರಿಸಲಾಯಿತು. ಇದೇ ವೇಳೆ ಶಿವಣ್ಣ ಇಂಡಸ್ಟ್ರಿಯಲ್ಲಿ 37 ವರ್ಷ ಪೂರ್ಣಗೊಳಿಸಿದ್ದು, ಇದನ್ನು ಸಂಭ್ರಮಿಸಲಾಯಿತು.

ಇದನ್ನೂ ಓದಿ: Shivarajkumar: 37 ವರ್ಷ, 125 ಸಿನಿಮಾ, ಹಲವಾರು ಸೂಪರ್​ ಹಿಟ್​; ಕನ್ನಡ ಚಿತ್ರರಂಗದಲ್ಲಿ ಶಿವಣ್ಣನ ಮೈಲಿಗಲ್ಲು

ಬಳಿಕ ಮಾತನಾಡಿದ ನಟ ಶಿವಣ್ಣ, ‘ಈಗ ಸಿನಿಮಾಗಳು 100 ದಿನ ಪೂರೈಸೋದು ತೀರಾ ಕಡಿಮೆ. ಆದ್ರೆ ನಮ್ಮ ಸಿನಿಮಾ ಚೆನ್ನಾಗಿ ಹೋಗ್ತಿದೆ. ಥಿಯೇಟರ್ ಮತ್ತು ಒಟಿಟಿಯಲ್ಲೂ ಸಿನಿಮಾ ಸಕ್ಸಸ್ ಆಗ್ತಿದೆ. ನನಗೆ ನನ್ನ ತಾಯಿ ನನ್ನ ಹೆಂಡ್ತಿ ಎರಡು ಕಣ್ಣುಗಳು.  ಈ ಸಿನಿಮಾದಲ್ಲಿ ಹೆಣ್ಣುಮಕ್ಕಳು ಯಾರೆಲ್ಲಾ ಮಾಡಿದ್ದಾರೋ ಅದಕ್ಕೆ ಹೆಮ್ಮೆ ಆಗುತ್ತೆ. ಸಿನಿಮಾದಲ್ಲಿ‌ ಶಿವಣ್ಣನಿಗಿಂತ ಹೆಚ್ಚು ಚೆನ್ಮಾಗಿ ಅಭಿನಯ ಮಾಡಿರೋದು ಹೆಣ್ಣು ಮಕ್ಕಳು. ಅದನ್ನ ನೋಡಿ ಬಹಳಾ ಖುಷಿ ಆಯ್ತು. ಇನ್ನೂ 25 ವರ್ಷ ನಾನು ಸಿನಿಮಾ ಮಾಡುತ್ತೇನೆ’ ಎಂದರು.

‘ವೇದ’ ಚಿತ್ರದ ಮೂಲಕ ಸೇಡಿನ ಕಥೆ ಹೇಳಿರುವ ಎ. ಹರ್ಷ ನಿರ್ದೇಶಕರಾಗಿ ಮತ್ತೊಮ್ಮೆ ಗೆದಿದ್ದಾರೆ. ಶಿವರಾಜ್​ಕುಮಾರ್​ ಮತ್ತು ಎ. ಹರ್ಷ ಕಾಂಬಿನೇಷನ್​ನಲ್ಲಿ ಮೂಡಿಬಂದ 4ನೇ ಚಿತ್ರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ‘ವೇದ’ ಚಿತ್ರದಲ್ಲಿ ಶಿವರಾಜ್​ಕುಮಾರ್​ ಜೊತೆಗೆ ಅದಿತಿ ಸಾಗರ್​, ಗಾನವಿ ಲಕ್ಷ್ಮಣ್, ಶ್ವೇತಾ ಚಂಗಪ್ಪ, ಉಮಾಶ್ರೀ ಕೂಡ ನಟಿಸಿದ್ದಾರೆ.

ಇದನ್ನೂ ಓದಿ: ಶಿವರಾತ್ರಿಗೆ ನರ್ತನ್ ಹೊಸ ಸಿನಿಮಾ ಘೋಷಣೆ; ‘ಭೈರತಿ ರಣಗಲ್’ ಆಗಿ ಬಂದ ಶಿವರಾಜ್​ಕುಮಾರ್

ಚಿತ್ರರಂಗಕ್ಕೆ ಬಂದು 37 ವರ್ಷ ಪೂರ್ಣಗೊಳಿಸಿದ ಶಿವಣ್ಣ 

ನಟ ಶಿವರಾಜ್​ಕುಮಾರ್ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 37 ವರ್ಷಗಳು ಕಳೆದಿವೆ. ಇಂದಿಗೂ ಅವರು ಬಹುಬೇಡಿಕೆಯ ನಟನಾಗಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಬಗೆಯ ಪಾತ್ರಗಳ ಮೂಲಕ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಇಷ್ಟು ವರ್ಷಗಳು ಉರುಳಿದರೂ ಅವರ ಎನರ್ಜಿ ಕಡಿಮೆ ಆಗಿಲ್ಲ. ಹದಿಹರೆಯದ ಹುಡುಗರನ್ನೂ ನಾಚಿಸುವಂತೆ ಅವರು ಡ್ಯಾನ್ಸ್​ ಮತ್ತು ಫೈಟಿಂಗ್​ ಮಾಡುತ್ತಾರೆ. ಶಿವರಾಜ್​ಕುಮಾರ್ ಅವರು ಚಂದನವನದಲ್ಲಿ 37 ವರ್ಷಗಳನ್ನು ಪೂರೈಸಿರುವುದಕ್ಕೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಅವರ ಸಿನಿಮಾ ಜರ್ನಿಯನ್ನು ಫ್ಯಾನ್ಸ್​ ಮೆಲುಕು ಹಾಕುತ್ತಿದ್ದಾರೆ. ಪ್ರಸ್ತುತ ಶಿವರಾಜ್​ಕುಮಾರ್​ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:06 pm, Sun, 19 February 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ