ತೀವ್ರ ಬರಗಾಲದಿಂದ ಕಂಗೇಟ್ಟಿರುವ ಆ ಜಿಲ್ಲೆಯ ರೈತರು, ಮಳೆ ಬೆಳೆ ಇಲ್ಲದೆ ಜೀವನ ನಿರ್ವಹಣೆಗೆ ಕಷ್ಟಪಡ್ತಿದ್ದು… ಕೃಷಿಯಿಂದ ವಿಮುಖರಾಗಿ ಈಗ ಪ್ಯಾಟೆಯತ್ತ ಮುಖ ಮಾಡಿದ್ದು ಗಾರೆ ಕೆಲಸಕ್ಕೆ ಜೈ ಎನ್ನುತ್ತಿದ್ದಾರೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ? ಈ ವರದಿ ನೋಡಿ. ಇದು ಚಿಕ್ಕಬಳ್ಳಾಪುರ ಜಿಲ್ಲೆ. ಜಿಲ್ಲೆಯ ರೈತರು (Chikkaballapur Peasants) ಸಂಪೂರ್ಣ ಮಳೆಯಾಶ್ರಿತ ಕೃಷಿ ಕಾಯಕ (Chikkaballapur Drought) ಮಾಡಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ರು. ಆದ್ರೆ ಈ ಬಾರಿ ಮಳೆರಾಯ ಮುನಿಸಿಕೊಂಡ ಕಾರಣ ಬಿತ್ತಿದ ಬೆಳೆ ಕೈಗೆ ಬರಲಿಲ್ಲ. ಮಾಡಿದ ಸಾಲ ತೀರಿಸಲಾಗದೆ ರೈತರು ಪರದಾಡ್ತಿದ್ದಾರೆ (Chikkaballapur Agriculture).
ಇನ್ನು ಮನೆ ಸಂಸಾರ ಮಕ್ಕಳ ನಿರ್ವಹಣೆಗೆ ತೀವ್ರ ತೊಂದರೆಯಾಗಿದೆ. ಇದ್ರಿಂದ ಸಾಲ ಎನ್ನುವ ಶೂಲದಿಂದ ಹೊರ ಬರಲು ಕೆಲವು ರೈತರು ಹಳ್ಳಿ ತೊರೆದು ಪ್ಯಾಟೆಯತ್ತ ಮುಖ ಮಾಡಿದ್ದಾರೆ. ಕಟ್ಟಡ ಕಾರ್ಮಿಕರಾಗಿ ಗಾರೆ ಕೆಲಸ ಮಾಡುವುದರ ಮೂಲಕ ಹೊಟ್ಟೆ ತುಂಬಿಸಿಕೊಳ್ತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಡಿ ಪಾಳ್ಯ ಗ್ರಾಮದ ಮೂರ್ತಿ ಎನ್ನುವ ರೈತ, ಆರು ಎಕರೆ ಒಣ ಭೂಮಿ ಹೊಂದಿದ್ದಾನೆ. ಆದ್ರೆ ಮಳೆ ಕೈಕೊಟ್ಟ ಕಾರಣ ಬೆಳೆ ಕೈಗೆ ಬರಲಿಲ್ಲ, ಇರೊಬರೊ ದನ ಕರುಗಳನ್ನು ಮಾರಾಟ ಮಾಡಿದ್ದು… ಜಮೀನಿಗೆ ಹಾಕಿರುವ ಬಂಡವಾಳದ ಸಾಲ ತೀರಿಸಲು ಗಾರೆ ಕೆಲಸ ಮಾಡುತ್ತಿದ್ದಾನೆ.
Also Read: ಮಳೆಯಿಲ್ಲದೆ ಸಮುದ್ರಕ್ಕೆ ಬಂದಿಲ್ಲ ನೀರು! ಕಡಿಮೆಯಾಗಿದೆ ಮೀನುಗಳ ಸಂತಾನೋತ್ಪತ್ತಿ, ಕೈಕಟ್ಟಿ ಕುಳಿತ ಮೀನುಗಾರರು
ಪ್ರತಿದಿನ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಹಳ್ಳಿಯ ರೈತರು ನಗರಕ್ಕೆ ಆಗಮಿಸಿ ಏಳು ನೂರು ರೂಪಾಯಿ ಕೂಲಿ ಹಣಕ್ಕೆ ಕೆಲಸ ಮಾಡುವುದರ ಮೂಲಕ ಬರದಿಂದ ಆಚೆ ಬರಲು ಯತ್ನಿಸುತ್ತಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ