ಮಳೆಯಿಲ್ಲದೆ ಸಮುದ್ರಕ್ಕೆ ಬಂದಿಲ್ಲ ನೀರು! ಕಡಿಮೆಯಾಗಿದೆ ಮೀನುಗಳ ಸಂತಾನೋತ್ಪತ್ತಿ, ಕೈಕಟ್ಟಿ ಕುಳಿತ ಮೀನುಗಾರರು

ಪ್ರಸಕ್ತ ಮುಂಗಾರು-ಹಿಂಗಾರು ಋತುವಿನಲ್ಲಿ ಸರಿಯಾಗಿ ಮಳೆ ಆಗದ ಹಿನ್ನೆಲೆ ಹಳ್ಳಕೊಳ್ಳ ತುಂಬಿ ನದಿ ನೀರು ಸಮುದ್ರಕ್ಕೆ ಬಂದಿಲ್ಲ. ಇದರಿಂದ ಮೀನುಗಳ ಸಂತಾನೊತ್ಪತ್ತಿ ಪ್ರಮಾಣ ಕಡಿಮೆ ಆಗಿದೆ. ಮೀನುಗಾರರು ಎಷ್ಟೆ ಆಳಕ್ಕೆ ಹೊದ್ರು, ಮೀನು ಸಿಗುವ ಪ್ರಮಾಣ ಭಾರಿ ಕಡಿಮೆ ಆಗಿದೆ.

ಮಳೆಯಿಲ್ಲದೆ ಸಮುದ್ರಕ್ಕೆ ಬಂದಿಲ್ಲ ನೀರು! ಕಡಿಮೆಯಾಗಿದೆ ಮೀನುಗಳ ಸಂತಾನೋತ್ಪತ್ತಿ, ಕೈಕಟ್ಟಿ ಕುಳಿತ ಮೀನುಗಾರರು
ಕಡಿಮೆಯಾಗಿದೆ ಮೀನುಗಳ ಸಂತಾನೋತ್ಪತ್ತಿ, ಕೈಕಟ್ಟಿ ಕುಳಿತ ಮೀನುಗಾರರು
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: ಸಾಧು ಶ್ರೀನಾಥ್​

Updated on:Mar 05, 2024 | 3:00 PM

ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದ ಬೆನ್ನಲ್ಲೆ, ಕೊಟ್ಯಾಂತರ ರೂಪಾಯಿ ವೆಚ್ಚದ ಬೆಳೆ ಹಾನಿ ಆಗಿ, ಮುಂದೇನು ಎಂಬ ಆತಂಕದಲ್ಲಿ ಅನ್ನದಾತ ಕಾಲ ಕಳೆಯುತ್ತಿದ್ದಾನೆ. ಇನ್ನೂ ಕೆಲವೆಡೆ ಕುಡಿಯುವ ನೀರಿಗಾಗಿ ಹಾಹಾಕಾರ ಆರಂಭ ಆಗಿದ್ದೂ, ಜೀವ ಪಣಕ್ಕಿಟ್ಟು ಕುಡಿಯುವ ನೀರಿಗಾಗಿ ಹರಸಾಹಸ ಮಾಡುವ ಪ್ರಸಂಗಗಳು ಕಾಣ ಸಿಗುತ್ತಿವೆ. ಈ ಬರಗಾಲದ ಬಿಸಿ ಸದ್ಯ ಕಡಲತೀರಕ್ಕೂ ತಟ್ಟಿದ್ದೂ, ಮೀನುಗಾರರು ಕೈ ಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಹೌದು ಪ್ರಸಕ್ತ ಸಾಲಿನಲ್ಲಿ ಸರಿಯಾಗಿ ಮಳೆ ಆಗದ ಹಿನ್ನೆಲೆ ಹಳ್ಳಕೊಳ್ಳ ತುಂಬಿ ನದಿ ನೀರು ಸಮುದ್ರಕ್ಕೆ ಬಂದಿಲ್ಲ. ಇದರಿಂದ ಮೀನುಗಳ ಸಂತಾನೊತ್ಪತ್ತಿ ಪ್ರಮಾಣ ಕಡಿಮೆ ಆಗಿದೆ.

ಮೀನುಗಾರರು ಎಷ್ಟೆ ಆಳಕ್ಕೆ ಹೊದ್ರು, ಮೀನು ಸಿಗುವ ಪ್ರಮಾಣ ಭಾರಿ ಕಡಿಮೆ ಆಗಿದೆ. ಹೀಗಾಗಿ ಆತಂಕದಲ್ಲಿ ಕಾಲ ಕಳೆಯುವ ಪರಿಸ್ಥಿತಿ ಉಂಟಾಗಿದೆ. ಕಳೆದ ಬಾರಿಗಿಂತ ಈ ಬಾರಿ ಅರ್ಧದಷ್ಟು ಮಾತ್ರ ಮೀನುಗಳು ದೊರಕಿದ್ದು ಉತ್ತಮ ಮಾರುಕಟ್ಟೆ ಬೆಲೆ ಇದ್ದರೂ ಮೀನುಗಳು ಸಿಗದೇ ಮೀನುಗಾರ ಕೈಕಟ್ಟಿ ಕೂರುವಂತಾಗಿದೆ. ಮೀನುಗಾರಿಕೆ ಪ್ರಾರಂಭದ ದಿನದಲ್ಲಿ ಜಲ್ಲಿ ಫಿಷ್ ಗಳು ಹೇರಳವಾಗಿ ದೊರೆತು ನಷ್ಟ ಹೊಂದಿದರೇ ,ಇದೀಗ ಹವಾಮಾನ ಬದಲಾವಣೆ ಮೀನುಗಳು ಬೇರಡೆ ತೆರಳುವಂತಾಗಿದ್ದು ಮೀನುಗಾರರು ಮತ್ಸ್ಯ ಬೇಟೆಗೆ ತೆರಳದೇ ಬಂದರಿನಲ್ಲಿ ಬೋಟುಗಳನ್ನು ಲಂಗುರು ಹಾಕಿದ್ದಾರೆ.

Also Read: ಈಶಾ ಫೌಂಡೇಶನ್​ಗೆ ಹೋಗುವ ಪ್ರವಾಸಿಗರಿಗೆ ಗುಡ್ ನ್ಯೂಸ್; ಬಿಎಂಟಿಸಿಯಿಂದ ವಿಶೇಷ ಪ್ಯಾಕೇಜ್

ಇನ್ನು ಹವಾಮಾನ ಬದಲಾವಣೆ ಜೊತೆ ಉತ್ತಮ ಮಳೆಯಾಗದ ಕಾರಣ ಮೀನುಗಳಿಗೆ ಬೇಕಾಗುವ ವಾತಾವರಣ ನಿರ್ಮಾಣವಾಗಿಲ್ಲ, ಆದ್ರೂ ಕಳೆದ ಬಾರಿಗಿಂತ ಈ ಬಾರಿ ಒಂದೂವರೆ ಸಾವಿರ ಟನ್ ಮಾತ್ರ ನಷ್ಟವಾಗಿದೆ. ಜನವರಿ ನಂತರ ಉತ್ತಮ ಮೀನುಗಳು ಸಿಗುವ ನಂಬಿಕೆ ಇದೆ ಎಂಬುದು ಮೀನುಗಾರಿಕಾ ಇಲಾಖೆ ಆಶಾಭಾವನೆಯಲ್ಲಿತ್ತು. ಆದ್ರೆ ಮಾರ್ಚ್ ತಿಂಗಳು ಆರಂಭವಾಗಿದ್ರೂ ಮೀನುಗಳ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆ ಆಗಿದ್ದರಿಂದ ಮೀನುಗಾರರು ಕೈ ಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾಗಿದೆ.

ಒಟ್ಟಿನಲ್ಲಿ ಇತ್ತ ರೈತರು ಬೆಳೆ ಹಾನಿ ಆಗಿದೆ ಎಂದು ನಷ್ಟ ಅನುಭವಿಸಿದ್ರೆ. ಕಡಲತೀರದಲ್ಲಿ ಮೀನುಗಾರರು ಸಹ ಮತ್ಸ್ಯ ಕ್ಷಾಮದಿಂದ ನಲುಗಿ ಹೋಗಿದ್ದು, ಕಡಲಲ್ಲಿ ಬಲೆ ಬೀಸಿ ಮೀನಿನ ಬೇಟೆ ಮಾಡಬೇಕಾದವರು ಖಾಲಿ ಕೈನಲ್ಲಿ ಕೂರುವಂತೆ ಆಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:58 pm, Tue, 5 March 24

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್