ಚಿಕ್ಕಬಳ್ಳಾಪುರ: ಈಶಾ ಫೌಂಡೇಶನ್‌ನ ಸದ್ಗುರು ಸನ್ನಿಧಿಯಲ್ಲಿ ನಾಳೆ ವಿಶೇಷ ನಾಗಾರಾಧನೆ! ಇಲ್ಲಿದೆ ಕಂಪ್ಲೀಟ್​ ಡೀಟೆಲ್ಸ್​

ನಾಳೆ (ಆ.21) ನಾಗಚತುರ್ಥಿ ಹಿನ್ನೆಲೆ ಚಿಕ್ಕಬಳ್ಳಾಪುರ ತಾಲೂಕು ಆವಲಗುರ್ಕಿ ಗ್ರಾಮದ ಬಳಿಯಿರುವ ಆದಿಯೋಗಿ ಹಾಗೂ ನಾಗಮಂಟಪ ಸನ್ನಿಧಿಯಲ್ಲಿ ವಿಜೃಂಭಣೆಯ ನಾಗಾರಾಧನೆ ನಡೆಯಲಿದ್ದು, ಲಕ್ಷಾಂತರ ಜನ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ಚಿಕ್ಕಬಳ್ಳಾಪುರ: ಈಶಾ ಫೌಂಡೇಶನ್‌ನ ಸದ್ಗುರು ಸನ್ನಿಧಿಯಲ್ಲಿ ನಾಳೆ ವಿಶೇಷ ನಾಗಾರಾಧನೆ! ಇಲ್ಲಿದೆ ಕಂಪ್ಲೀಟ್​ ಡೀಟೆಲ್ಸ್​
ಸದ್ಗುರು ಸನ್ನಿಧಿಯಲ್ಲಿ ನಾಳೆ ವಿಶೇಷ ನಾಗಾರಾಧನೆ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 20, 2023 | 4:10 PM

ಚಿಕ್ಕಬಳ್ಳಾಪುರ, ಆ.20: ರಾಜ್ಯಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿ 112 ಅಡಿಗಳ ಆದಿಯೋಗಿ ವಿಗ್ರಹವಿರುವ ಪವಿತ್ರ ಸನ್ನಿಧಿಯೊಂದಿದೆ. ಅಲ್ಲಿಯ ಆದಿಯೋಗಿ (Adiyogi) ನೋಡಲು ಪ್ರತಿದಿನ ಸಾವಿರಾರು ಭಕ್ತರು ಹೋಗುತ್ತಾರೆ. ಇನ್ನೂ ಅಲ್ಲಿಯೇ ಬೃಹತ್ ನಾಗಮಂಟಪ ಕೂಡ ಇದೆ. ನಾಳೆ (ಆ.21) ನಾಗಚತುರ್ಥಿ ಹಿನ್ನೆಲೆ ಆದಿಯೋಗಿ ಹಾಗೂ ನಾಗಮಂಟಪ ಸನ್ನಿಧಿಯಲ್ಲಿ ವಿಜೃಂಭಣೆಯ ನಾಗಾರಾಧನೆ ನಡೆಯಲಿದ್ದು, ಲಕ್ಷಾಂತರ ಜನ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ಏಕಶಿಲೆಯಲ್ಲಿ ನಾಗವಿಗ್ರಹ

ಚಿಕ್ಕಬಳ್ಳಾಪುರ ತಾಲೂಕು ಆವಲಗುರ್ಕಿ ಗ್ರಾಮದ ಬಳಿ 112 ಅಡಿಗಳ ಆದಿಯೋಗಿಯ ಶಿವನ ವಿಗ್ರಹ ಇದೆ. ಇದನ್ನು ಈಶಾ ಫೌಂಡೇಶ್​ನ್ನಿನ ಸಂಸ್ಥಾಪಕರಾದ ಜಗ್ಗಿ ವಾಸುದೇವ್​ರವರು ಪ್ರತಿಷ್ಠಾಪನೆ ಮಾಡಿದ್ದಾರೆ. ಇನ್ನು ಆದಿಯೋಗಿಯ ಸನ್ನಿಧಿ ಸುತ್ತಲೂ ಸುಂದರವಾದ ಗಿರಿ ಸಾಲುಗಳಿದ್ದು, ಎತ್ತ ನೋಡಿದರೂ ಸುಂದರವಾದ ಪ್ರಕೃತಿ ಸೊಬಗು ಕಾಣಸಿಗುತ್ತೆ. ಇದೇ ಸದ್ಗುರು ಸನ್ನಿಧಿ ಆವರಣದಲ್ಲಿ ಬೃಹತ್ ಆದ ನಾಗಮಂಟಪ ನಿರ್ಮಾಣ ಮಾಡಿದ್ದು, ಏಕಶಿಲೆಯಲ್ಲಿ ನಾಗವಿಗ್ರಹವಿದೆ. ಈ ಹಿನ್ನಲೆ ಆಗಸ್ಟ್ 21 ಸೋಮವಾರ ಸಂಜೆ 5 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ವಿಜೃಂಭಣೆಯ ನಾಗಾರಾಧನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ:Nag Panchami 2023: ನಾಗರ ಪಂಚಮಿ ದಿನದಂದು ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳಾವವು? ಇಲ್ಲಿದೆ ನೋಡಿ

ಖ್ಯಾತನಾಮ ಪುರೋಹಿತರಿಂದ ನಾಗಮಂಡಲ ನಾಗಾರಾಧನೆ!

ನಾಳೆ ಸಂಜೆ ನಡೆಯುವ ಅದ್ದೂರಿ ನಾಗಾರಾಧನೆ ಕಾರ್ಯಕ್ರಮದಲ್ಲಿ ಉಡುಪಿ ಮೂಲದ ನಾಗಪಾದ್ರಿಗಳು ಹಾಗೂ ನಾಗಮಂಡಲ ಪರಿಣಿತ ಪುರೋಹಿತರಿಬ್ಬರು ಆಗಮಿಸಲಿದ್ದಾರೆ. ಗಂಡು ಹಾಗೂ ಹೆಣ್ಣಿನ ನಾಗರ ವೇಶ ಧರಿಸಿ ನಾಗದೇವತೆಗಳನ್ನೇ ಧರೆಗಿಳಿಸಲಿದ್ದಾರೆ.

ಆಶ್ಲೇಷ ಬಲಿ

ನಾಗರಪಂಚಮಿ, ನಾಗಾರಾಧನೆ ಹಾಗೂ ನಾಗಮಂಡಲ ಪ್ರಯುಕ್ತ ನಾಗಮಂಟಪದಲ್ಲಿ ವಿಶೇಷ ಪೂಜೆಗಳು ಆವಾಹನೆಗಳು ನಡೆಯಲಿವೆ. ಇದೇ ಸಂದಭದಲ್ಲಿ ಆಶ್ಲೇಷ ಬಲಿ ಪೂಜೆಯೂ ನಡೆಯಲಿದೆ. ಆಗಸ್ಟ್ 21 ಸೋಮವಾರ ರಂದು ಬೆಳಿಗ್ಗೆ 11 ರಿಂದ ಮದ್ಯಾಹ್ನ 12ರವರೆಗೂ ಪೂಜೆಯಲ್ಲಿ ಭಾಗವಹಿಸಬಹುದು. ಸರ್ಪದೋಶ, ಸರ್ಪಸುತ್ತು ಇರುವವರು ತಮ್ಮ ಕೋರಿಕೆಯನ್ನು ಪೂಜೆಯಲ್ಲಿ ಈಡೇರಿಸಿಕೊಳ್ಳಬಹುದು.

ಇದನ್ನೂ ಓದಿ:ಮಲೆನಾಡಿನ ಹಾಲ್ಬಾಯಿ ಎಂದಾದರು ಸವಿದಿದ್ದಿರಾ? ನಾಗರ ಪಂಚಮಿಗೆ ಈ ರುಚಿಯಾದ ಸಿಹಿ ತಿಂಡಿ ಮಾಡುವುದು ಹೇಗೆ ಎಂದು ತಿಳಿಯಿರಿ

ಸನ್ನಿಧಿಯಲ್ಲಿಯೇ ಬೀಡುಬಿಟ್ಟಿರುವ ಸದ್ಗುರು ಜಗ್ಗಿ ವಾಸುದೇವ್

ಆಧ್ಯಾತ್ಮ, ಯೋಗ ಗುರು ಹಾಗೂ ಈಶಾ ಫೌಂಡೇಶ್​ನ್ನಿನ ಸಂಸ್ಥಾಪಕರೂ ಹಾಗಿರುವ ಜಗ್ಗಿ ವಾಸುದೇವ್ ಚಿಕ್ಕಬಳ್ಳಾಪುರದ ಸದ್ಗುರು ಸನ್ನಧಿಯಲ್ಲಿಯೇ ಬೀಡುಬಿಟ್ಟಿದ್ದು, ನಾಗರಪಂಚಮಿ ಹಾಗೂ ನಾಗಾರಾಧನೆ ಪ್ರಯುಕ್ತ ಪೂಜೆಯಲ್ಲಿ ಪಾಲ್ಗೊಂಡು ಅಭಿಮಾನಿಗಳಿಗೆ ದರ್ಶನ ನೀಡಲಿದ್ದಾರೆ.

ನಾಗಾರಾಧನೆಯಿಂದ ಏನು ಪ್ರಯೋಜನ

ಸರ್ಪದೋಷ ಹಾಗೂ ಸರ್ಪಸುತ್ತು ಸೇರಿದಂತೆ ನಾಗನ ಕಾಟ ಇರುವವರು ಪೂಜೆಯಲ್ಲಿ ಪಾಲ್ಗೊಳ್ಳುವುದರಿಂದ ಶಾಂತಿ ನೆಲೆಸಿ ಸಮಸ್ಯೆ ಬಗೆಹರಿಯುತ್ತದೆ ಎನ್ನುವ ಪ್ರತೀತಿ ಇದೆ. ಜೀವನದಲ್ಲಿ ಸುಖ, ಶಾಂತಿ ಸಮೃದ್ಧಿ ಉಂಟಾಗಿ ಆಧ್ಯಾತ್ಮಿಕ ಯಶಸ್ಸು ದೊರೆಯುತ್ತದೆ ಎನ್ನಲಾಗಿದೆ.

ಪೇಯ್ಡ್ ಸೀಟಿಂಗ್ ಹಾಗೂ ಉಚಿತ ಸೀಟಿಂಗ್ ವ್ಯವಸ್ಥೆ

ಇನ್ನೂ ನಾಗಾರಾಧನೆ ಹಾಗೂ ನಾಗಮಂಡಲ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗೆ ಪೇಯ್ಡ್ ಸೀಟಿಂಗ್ ಹಾಗೂ ಉಚಿತ ಸೀಟಿಂಗ್ ವ್ಯವಸ್ಥೆ ಕೂಡ ಮಾಡಲಾಗಿದ್ದು, ಶೇಷ- ಸೀಟಿಂಗ್-1000 ರೂಪಾಯಿ, ಅನಂತ ಪ್ರಯಾರಿಟಿ ಸೀಟಿಂಗ್-2500, ವಾಸುಕಿ-ಪ್ರೀಮಿಯಂ ಸೀಟಿಂಗ್ 5000 ರೂ ನಿಗದಿ ಮಾಡಲಾಗಿದೆ. ವಿಐಪಿ ಭಕ್ತರುಗಳಿಂದ ದೇಣಿಗೆ ಹಾಗೂ ಸೀಟಿಂಗ್​ ಶುಲ್ಕದಿಂದ ಕಾರ್ಯಕ್ರಮದ ವೆಚ್ಚ ಸರಿದೂಗಿಸಿಕೊಳ್ಳಲು ಹೀಗೆ ಮಾಡಲಾಗಿದೆ. ಇನ್ನುಳಿದಂತೆ ಪ್ರವೇಶ ಮೀಸಲಾತಿ ಹೊರತುಪಡಿಸಿ ಇತರ ಜಾಗಗಳಲ್ಲಿ ಸಾರ್ವಜನಿಕರು ಉಚಿತವಾಗಿ ಕಾರ್ಯಕ್ರಮಕ್ಕೆ ಆಗಮಿಸಬಹುದಾಗಿದೆ ಎಂದು ಕಾರ್ಯಕ್ರಮ ಆಯೋಜಕರು ಟಿವಿ9ಗೆ ತಿಳಿಸಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ