ಈಶಾ ಫೌಂಡೇಶನ್​ಗೆ ಹೋಗುವ ಪ್ರವಾಸಿಗರಿಗೆ ಗುಡ್ ನ್ಯೂಸ್; ಬಿಎಂಟಿಸಿಯಿಂದ ವಿಶೇಷ ಪ್ಯಾಕೇಜ್

ಶಿವರಾತ್ರಿ, ಬೇಸಿಗೆ ರಜೆಗಳು ಆರಂಭವಾಗುವ ಹಿನ್ನೆಲೆ ಬಿಎಂಟಿಸಿ ವಿಶೇಷ ಪ್ಯಾಕೇಜ್ ಬಿಡುಗಡೆಗೆ ಮುಂದಾಗಿದೆ. ಅದರಲ್ಲೂ ಚಿಕ್ಕಬಳ್ಳಾಪುರದ ಈಶಾ ಫೌಂಡೇಶನ್​ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಬಿಎಂಟಿಸಿ ವಿಶೇಷ ಪ್ಯಾಕೇಜ್ ಬಿಡುಗಡೆಗೆ ಮುಂದಾಗಿದ್ದು ಈ ಪ್ಯಾಕೇಜ್​ ಮೂಲಕ 500 ರೂಗೆ ನಾಲ್ಕು ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು,

ಈಶಾ ಫೌಂಡೇಶನ್​ಗೆ ಹೋಗುವ ಪ್ರವಾಸಿಗರಿಗೆ ಗುಡ್ ನ್ಯೂಸ್; ಬಿಎಂಟಿಸಿಯಿಂದ ವಿಶೇಷ ಪ್ಯಾಕೇಜ್
ಬಿಎಂಟಿಸಿಯಿಂದ ವಿಶೇಷ ಪ್ಯಾಕೇಜ್
Follow us
Kiran Surya
| Updated By: ಆಯೇಷಾ ಬಾನು

Updated on: Mar 05, 2024 | 2:19 PM

ಬೆಂಗಳೂರು, ಮಾರ್ಚ್​.05: ಚಿಕ್ಕಬಳ್ಳಾಪುರದ ಹೊರವಲಯದಲ್ಲಿರುವ ಸುಂದರ ಬೆಟ್ಟಗಳು, ಹಸಿರ ತಪ್ಪಲಿನಲ್ಲಿ ಎದ್ದು ಕಾಣುವ ಬೃಹತ್ ಶಿವನ ಮೂರ್ತಿ ಇರುವ ಇಶಾ ಫೌಂಡೇಶನ್‌ (Isha Foundation) ನೋಡಲು ಪ್ರತಿ ದಿನ ನೂರಾರು ಭಕ್ತರು ಭೇಟಿ ನೀಡುತ್ತಾರೆ. ಅದರಲ್ಲೂ ವಾರಾಂತ್ಯ, ರಜಾ ದಿನಗಳು ಬಂತೆಂದರೆ ಜನ ಸಾಗರವೇ ಕಂಡು ಬರುತ್ತೆ. ಸದ್ಯ ಈಶಾ ಫೌಂಡೇಶನ್​ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಬಿಎಂಟಿಸಿ (BMTC) ವಿಶೇಷ ಟೂರ್ ಪ್ಯಾಕೆಜ್ ವ್ಯವಸ್ಥೆ ಮಾಡಿದೆ. ನಾಳೆಯಿಂದ (ಮಾರ್ಚ್​.06) ಈಶಾ ಫೌಂಡೇಶನ್ ಟೂರ್ ಪ್ಯಾಕೇಜ್ ಆರಂಭವಾಗಲಿದೆ.

ಈಶಾ ಫೌಂಡೇಶನ್ ಹೆಸರಿನ ಟೂರ್ ಪ್ಯಾಕೇಜ್ ಸೇವೆಯನ್ನು ಬಿಎಂಟಿಸಿ ನೀಡಲು ಮುಂದಾಗಿದೆ. ಈ ವಿಶೇಷ ಟೂರ್ ಪ್ಯಾಕೇಜ್ ಅಡಿ ಕೆಂಪೇಗೌಡ ಬಸ್ ನಿಲ್ದಾಣದಿಂದ ಮಧ್ಯಾಹ್ನ 12 ಗಂಟೆಗೆ ಬಸ್ ಸೇವೆ ಶುರುವಾಗಲಿದ್ದು ರಾತ್ರಿ 9.30ಕ್ಕೆ ಮೆಜೆಸ್ಟಿಕ್​ಗೆ ವಾಪಸ್ ಕರೆದುಕೊಂಡು ಬರಲಾಗುತ್ತೆ. ಒಂದು ಸೀಟಿಗೆ 500 ರೂಪಾಯಿ ದರ ನಿಗದಿ ಮಾಡಲಾಗಿದೆ. ಈಶಾ ಫೌಂಡೇಶನ್ ಸೇರಿದಂತೆ ಚಿಕ್ಕಬಳ್ಳಾಪುರ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೂ ಭೇಟಿ ನೀಡಲು ಅವಕಾಶವಿದೆ. ನಾಳೆಯಿಂದ ಎಲ್ಲ ಸಾರ್ವತ್ರಿಕ ರಜೆ ದಿನಗಳಲ್ಲಿ ಈ ಸೇವೆ ಲಭ್ಯವಿರಲಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಈಶಾ ಫೌಂಡೇಶನ್‌ನ ಸದ್ಗುರು ಸನ್ನಿಧಿಯಲ್ಲಿ ನಾಳೆ ವಿಶೇಷ ನಾಗಾರಾಧನೆ! ಇಲ್ಲಿದೆ ಕಂಪ್ಲೀಟ್​ ಡೀಟೆಲ್ಸ್​

ಈಶಾ ಟೂರ್ ಪ್ಯಾಕೇಜ್ ಅಡಿ ಎಲ್ಲೆಲ್ಲಿ ಹೋಗಬಹುದು?

  • ಭೋಗ ನಂದೀಶ್ವರ ದೇವಸ್ಥಾನ (ಕಣಿವೆ ಬಸವಣ್ಣ ದೇವಸ್ಥಾನ)
  • ಸರ್.ಎಂ.ವಿಶ್ವೇಶ್ವರಯ್ಯ ಮ್ಯೂಸಿಯಂ ಮತ್ತು ಸಮಾಧಿ
  • ರಂಗಸ್ಥಳ ರಂಗನಾಥ ಸ್ವಾಮಿ ದೇವಸ್ಥಾನ
  • ಈಶಾ ಫೌಂಡೇಶನ್ ಸೇರಿ ಒಟ್ಟು 4 ಪ್ರವಾಸಿ ತಾಣಗಳನ್ನ ಈ ವಿಶೇಷ ಪ್ಯಾಕೇಜ್ ಒಳಗೊಂಡಿದೆ.

ಈಶಾ ಫೌಂಡೇಶನ್​ನ ಆದಿಯೋಗಿ ಪ್ರತಿಮೆಯು 112 ಅಡಿ ಇದ್ದು ಉಕ್ಕಿನಿಂದ ಮಾಡಲಾಗಿದೆ. ಸುಮಾರು 500 ಟನ್ ತೂಕವಿದೆ. ಇದು 34 ಮೀಟರ್ ಎತ್ತರ, 45 ಮೀಟರ್ ಉದ್ದ ಮತ್ತು 25 ಮೀಟರ್ ಅಗಲವಿದೆ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಬಳಿಯ ಇಶಾ ಫೌಂಡೇಶನ್‌ಗೆ ತೆರಳಲು ಟ್ರಾಫಿಕ್‌ಗೆ ಅನುಗುಣವಾಗಿ ಸುಮಾರು 1 ಗಂಟೆ 30 ನಿಮಿಷ ಬೇಕಾಗುತ್ತೆ. ಇದೆ ಸಂದರ್ಭದಲ್ಲಿ ಹತ್ತಿರದಲ್ಲಿರುವ ನಂದಿ ಗಿರಿಧಾಮ ಹಾಗೂ ಭೋಗ ನಂದೀಶ್ವರ ದೇವಾಲಯಕ್ಕೂ ಜನ ಹೆಚ್ಚಾಗಿ ಭೇಟಿ ನೀಡುತ್ತಾರೆ. ಬಿಎಂಟಿಸಿಯ ವಿಶೇಷ ಟೂರ್ ಪ್ಯಾಕೇಜ್​ ಮೂಲಕ ಪ್ರವಾಸಿಗರು ಕೇವಲ 500 ರೂಗೆ ನಾಲ್ಕು ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ