ಬೆಂಗಳೂರಿನಲ್ಲಿ ಮತ್ತೊಂದು ಬಾಂಬ್ ಬೆದರಿಕೆ, ಬಸ್​ ಸ್ಟ್ಯಾಂಡ್, ರೈಲ್ವೆ ಬ್ಲಾಸ್ಟ್ ಮಾಡುವುದಾಗಿ ಇಮೇಲ್

Bomb Threat Email: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಬೆನ್ನಲ್ಲೇ ಇದೀಗ ಮತ್ತೊಂದು ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ರಾಮೇಶ್ವರಂ ಕೆಫೆ ರೀತಿ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಸಿಎಂ, ಗೃಹ ಸಚಿವ, ಡಿಸಿಎಂ ಸೇರಿದಂತೆ ಇತರರಿಗ ಇಮೇಲ್​ ಸಂದೇಶ ಬಂದಿದೆ.

ಬೆಂಗಳೂರಿನಲ್ಲಿ ಮತ್ತೊಂದು ಬಾಂಬ್ ಬೆದರಿಕೆ, ಬಸ್​ ಸ್ಟ್ಯಾಂಡ್, ರೈಲ್ವೆ ಬ್ಲಾಸ್ಟ್ ಮಾಡುವುದಾಗಿ ಇಮೇಲ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Mar 05, 2024 | 2:32 PM

ಬೆಂಗಳೂರು, (ಮಾರ್ಚ್ 05): 2.5 ಮಿಲಿಯನ್ ಡಾಲರ್ ಕೊಟ್ಟಿಲ್ಲ ಅಂದ್ರೆ ಬಸ್ , ರೈಲು, ಬಸ್ ಸ್ಟಾಂಡ್ ಸೇರಿ ಹಲವಾರು ಕಡೆ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಇಮೇಲ್ (Bomb Threat Email) ಮೂಲಕ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ. ಸಿಎಂ, ಗೃಹ ಮಂತ್ರಿ, ಡಿಸಿಎಂ, ಮತ್ತು ಬೆಂಗಳೂರು (Bengaluru) ನಗರ ಪೊಲೀಸ್ ಕಮಿಷನರ್​ಗೆ ಬೆದರಿಕೆ ಇ ಮೇಲ್  ಬಂದಿದ್ದು, ರಾಮೇಶ್ವರಂ ಕೆಫೆ ರೀತಿಯಲ್ಲೇ ಬಾಂಬ್ ಸ್ಫೋಟಿರುವುದಾಗಿ (Bomb Blast)  ಇಮೇಲ್​ನಲ್ಲಿ ಬೆದರಿಕೆ ಹಾಕಲಾಗಿದೆ.

ಈ ಇಮೇಲ್​ ಬೆದರಿಕೆ ಸಂಬಂಧ ಸಿಸಿಬಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.  10786progongmail.com ಎನ್ನುವ ಮೇಲ್ ಐಡಿಯಿಂದ ಬೆದರಿಕೆ ಬಂದಿದ್ದು, ಸದ್ಯ ಸಿಸಿಬಿ ಪೊಲೀಸರು ಈ ಇಮೇಲ್ ಬಗ್ಗೆ ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪರಿಣಾಮ: ಬೆಂಗಳೂರಿನ ಹೋಟೆಲ್​​ಗಳಲ್ಲಿ ಜಾರಿಯಾಗಲಿವೆ ಕಠಿಣ ಭದ್ರತಾ ನಿಯಮಗಳು, ಇಲ್ಲಿದೆ ವಿವರ

ಮಾರ್ಚ್​ 1ರಂದು ಬೆಂಗಳೂರಿನ ಹೆಚ್​ಎಎಲ್​​ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಿದ್ದು, ನಾಲ್ಕು ದಿನ ಕಳೆದರೂ ಸಹ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಉಗ್ರನ ಸಣ್ಣ ಸುಳಿವು ಸಿಗುತ್ತಿಲ್ಲ. ಸಿಸಿ ಟಿವಿ ದೃಶ್ಯಗಳು ಸಿಗುತ್ತಿವೆಯೇ ಹೊರತು, ಬಾಂಬರ್ ಎಲ್ಲಿದ್ದಾನೆ ಎನ್ನುವುದು ಖಾಕಿಗೆ ಗೊತ್ತಾಗುತ್ತಿಲ್ಲ. ಒಂದ್ಕಡೆ ಎಫ್‌ಎಸ್‌ಎಲ್ ತಂಡ, ಮತ್ತೊಂದೆಡೆ ಸಿಸಿಬಿ ಪೊಲೀಸರು, ಇನ್ನೊಂದೆಡೆ NIA ಅಧಿಕಾರಿಗಳೂ ಫೀಲ್ಡ್‌ಗಳಿಂದು ಶಂಕಿತ ಉಗ್ರನ ಬೆನ್ನತ್ತಿದ್ದಾರೆ. ಇದರ ಮಧ್ಯೆ ಮತ್ತೊಂದು ಬಾಂಬ್ ಬೆದರಿಕೆ ಇಮೇಲ್ ಬಂದಿದೆ.

ಈ ಹಿಂದೆ ಬೆಂಗಳೂರಿನ ಹಲವು ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಇಮೇಲ್ ಬೆದರಿಕೆಗಳು ಬಂದಿರುವ ಉದಾಹರಣೆಗಳಿವೆ. ಆದ್ರೆ,  ಅವುಗಳ ಪೈಕಿ ಕೆಲವು ಹುಸಿ ಬಾಂಬ್​ ಬೆದರಿಕೆ ಎನ್ನುವುದು ದೃಢಟ್ಟೊಇದೆ. ಆದ್ರೆ, ಇದೀಗ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ರೀತಿಯಲ್ಲೇ  ಬಸ್, ರೈಲ್ವೇ ಸ್ಟೇಷನ್​ಗಳಲ್ಲಿ ಸ್ಪೋಟಿಸುವುದಾಗಿ ಬೆದರಿಕೆ ಇಮೇಲ್ ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:10 pm, Tue, 5 March 24