AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ಬಗ್ಗೆ ಯಾಕೆ ಮಾತನಾಡುತ್ತೀರಿ, ನೀವು ಹಣಕಾಸು ಸಚಿವರಾಗಿದ್ದಾಗ ಏನು ಮಾಡಿದ್ರಿ: ಸಿದ್ದರಾಮಯ್ಯಗೆ ದೇವೇಗೌಡ ಪ್ರಶ್ನೆ

ಸಿದ್ದರಾಮಯ್ಯ ಏಕೆ ಪ್ರಧಾನಿ ಮೋದಿ ಬಗ್ಗೆ ಮಾತಾಡುತ್ತಾರೆ? ನೀವು ಹಣಕಾಸು ಮಂತ್ರಿ ಆಗಿದ್ದಾಗ ಏನ್ಮಾಡಿದ್ರಿ ಹೇಳಿ? ಬೆಳಿಗ್ಗೆಯಿಂದ ನೀವು ಬರೀ ಮೋದಿ ಮೋದಿ ಅಂತೀರಾ. ಪ್ರಧಾನಿ ಮೋದಿಯವರನ್ನ ಇಡಿ ವಿಶ್ವವೇ ಒಪ್ಪಿದೆ. ನೀವು ಮಾತ್ರ ಬರೀ ಮೋದಿ ಕುರಿತು ಮಾತನಾಡುತ್ತೀರಿ. ಸಿದ್ದರಾಮಯ್ಯ ಯಾಕೆ ಪ್ರಧಾನಿ ಮೋದಿ ಬಗ್ಗೆ ಮತನಾಡುತ್ತಿರಾ? ಎಂದು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಪ್ರಶ್ನಿಸಿದರು.

ಮೋದಿ ಬಗ್ಗೆ ಯಾಕೆ ಮಾತನಾಡುತ್ತೀರಿ, ನೀವು ಹಣಕಾಸು ಸಚಿವರಾಗಿದ್ದಾಗ ಏನು ಮಾಡಿದ್ರಿ: ಸಿದ್ದರಾಮಯ್ಯಗೆ ದೇವೇಗೌಡ ಪ್ರಶ್ನೆ
ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ
TV9 Web
| Edited By: |

Updated on:Mar 05, 2024 | 1:52 PM

Share

ಬೆಂಗಳೂರು, ಮಾರ್ಚ್​ 05: ನಮಗೆ ಬರಬೇಕಾದ ತೆರಿಗೆ ಹಣ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ. ಈ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ (HD Deve Gowda) ಮಾತನಾಡಿ, ಸಿದ್ದರಾಮಯ್ಯ ಏಕೆ ಪ್ರಧಾನಿ ಮೋದಿ ಬಗ್ಗೆ ಮಾತಾಡುತ್ತಾರೆ? ನೀವು ಹಣಕಾಸು ಮಂತ್ರಿ ಆಗಿದ್ದಾಗ ಏನ್ಮಾಡಿದ್ರಿ ಹೇಳಿ? ಬೆಳಿಗ್ಗೆಯಿಂದ ನೀವು ಬರೀ ಮೋದಿ ಮೋದಿ ಅಂತೀರಾ. ಪ್ರಧಾನಿ ಮೋದಿಯವರನ್ನ ಇಡಿ ವಿಶ್ವವೇ ಒಪ್ಪಿದೆ. ನೀವು ಮಾತ್ರ ಬರೀ ಮೋದಿ ಕುರಿತು ಮಾತನಾಡುತ್ತೀರಿ. ಸಿದ್ದರಾಮಯ್ಯ ಯಾಕೆ ಪ್ರಧಾನಿ ಮೋದಿ ಬಗ್ಗೆ ಮತನಾಡುತ್ತಿರಾ? ಫೈನಾನ್ಸ್​​ ಕಮೀಟಿ ಸೂಚಿಸಿದ ಹಣ ಬಿಟ್ಟು ಮನಮೋಹನ್ ಸಿಂಗ್ ಅವರು ರಾಜ್ಯಕ್ಕೆ ಬೇರೆ ಏನು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ನೀರಿ ಸಮಸ್ಯೆ ಸಾಕಷ್ಟು ಇದೆ. ಒಂದು ಟ್ಯಾಂಕರ್​ಗೆ ಎರಡುವರೆ ಸಾವಿರ ಕೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ನಿನ್ನೆ (ಮಾ.04) ರಂದು ಉಪ ಮುಖ್ಯಮಂತ್ರಿಗಳು ಸಭೆ ಮಾಡಿದ್ದಾರೆ. ಈಗ ನೀವು ಸಭೆ ಮಾಡಿದ್ದಿರಾ, ಇಷ್ಟು ದಿನ ಏನೂ ಮಾಡಿದಿರಿ. ನೀರಿನ ಬಗ್ಗೆ ಎಷ್ಟೆಲ್ಲ ಸಮಸ್ಯೆ ಇದೆ. ಇದರ ಬಗ್ಗೆ ಕೇಳಲು ನಾನು ನೀರಾವರಿ ಇಲಾಖೆಯ ಕಾರ್ಯದರ್ಶಿಗೆ ಕರೆ ಮಾಡಿದ್ದೆ. ಆದರೆ ನನ್ನ ಕರೆ ಸ್ವೀಕರಿಸಲಿಲ್ಲ. ನಾನೇನು ನನ್ನ ಸ್ವಂತ ಕೆಲಸಕ್ಕೆ ಕರೆ ಮಾಡಿದ್ನಾ.? ಆತ ಯಾರು ಅಂತ ವಿಚಾರಿಸಿದೆ. ಸಿದ್ದರಾಮಯ್ಯ ನವರ ದೂರದ ಸಂಬಂಧಿ ಇರಬೇಕು. ಆಡಳಿತ ಹೇಗೆ ನಡಿತಿದೆ ಎಂಬುವುದಕ್ಕೆ ಇದು ಉದಾಹರಣೆ ಎಂದರು.

ಹೇಮಾವತಿ, ಹಾರಂಗಿ ಜಲಾಯಶಗಳನ್ನು ಕಟ್ಟಿದವನೇ ನಿಮ್ಮ ಮುಂದೆ ಕುತಿದ್ದಿನಿ. ನೆಲಮಂಗಲದವರೆಗೂ ಹೇಮಾವತಿ ನೀರು ಕೊಡಲು ಸಿದ್ದರಾಮಯ್ಯನವರೇ ಟೆಂಡರ್ ಕರೆದಿದ್ದಿರಾ? ನಿಮ್ಮ ಗ್ಯಾರಂಟಿ ತಲುಪಿದಿಯಾ ಅಂತ ನಾವೇನೂ ಕೇಳಿಲ್ಲ. 95 ಜನರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನ ಮಾನ ಕೊಟ್ಟಿದ್ದಿರಿ. ನಾನು ಕೂಗಿದರೆ ಹಾಸನ‌‌ ಮಂಡ್ಯ ಚಿಕ್ಕಮಗಳೂರು, ಮೈಸೂರಿನಲ್ಲಿ ಸೌಂಡ್ ಆಗಬೇಕು ಅಂತ‌ ಸಿಎಂ ಹೇಳಿದ್ದಾರೆ. ಕೂಗಿ ಯಾರು ಬೇಡ ಅಂತಾರೆ. ನಿಮಗೆ ನಾಚಿಕೆ ಆಗಬೇಕು. ಜನ ನಿಮ್ಮನ್ನ ನಂಬುತ್ತಾರಾ? ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ:  ಕಾಂಗ್ರೆಸ್​ಗೆ ನನ್ನ ಒಂದು ಸಣ್ಣ ತಪ್ಪು ಕಂಡು ಹಿಡಿಯಲು ಆಗಲಿಲ್ಲ: ಜೆಡಿಎಸ್​​ ವರಿಷ್ಠ ಹೆಚ್​ಡಿ ದೇವೇಗೌಡ

ಸಿದ್ದರಾಮಯ್ಯ ನವರೇ ನೀವು ಜ್ಯಾತ್ಯಾತೀತೆ ಬಗ್ಗೆ ಮತನಾಡುತ್ತಿರಾ, ನಾನು ಮುಸ್ಲಿಂಮರಿಗೆ ನಾಲ್ಕು ಪರ್ಸೆಂಟ್ ಮೀಸಲಾತಿ ಕೊಟ್ಟೆ. ನಮ್ಮ ಪಕ್ಷ ಮುಗಿಯುತ್ತದೆ ಅನ್ನೋ ಸಿದ್ದರಾಮಯ್ಯನವರ ಕಲ್ಪನೆಗೆ ತಾಳ್ಮೆ ಇರಲಿ. ಯಾರು ಮುಗಿಯುತ್ತಾರೆ ನೋಡೋಣ. ನಾನು ಬದುಕಿರುತ್ತೆನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀರಿಗಾಗಿ ಮನಮೋಹನ್ ಸಿಂಗ್ ‌ಮುಂದೆ ಕಣ್ಣೀರು ಹಾಕಿದೆ

ನೀರಿಗಾಗಿ ಮನಮೋಹನ್ ಸಿಂಗ್ ‌ಮುಂದೆ ಕಣ್ಣೀರು ಹಾಕಿದ್ದೆ, ತಮಿಳುನಾಡಿನಲ್ಲಿ 40 ಜನ ಸಂಸದರಿದ್ದಾರೆ, ನಾನೇನು ಮಾಡಲಿ ಅಂದರು. ಆದ್ದರಿಂದ ನಾನು ನೀರಿಗಾಗಿ ಕಣ್ಣೀರು ಹಾಕಿದ್ದನೆ.

ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಬಿಜೆಪಿ ಜೊತೆ ಮೊದಲ ಬಾರಿಗೆ ಮೈತ್ರಿ ಮಾಡಿಕೊಂಡಾಗ, ನೀವು ಸಾರಿಗೆ ಸಚಿವರು ಆಗಿದ್ದು ಮರೆತು ಹೊಯ್ತಾ ಎಂದು ಪರೋಕ್ಷವಾಗಿ ಸಚಿವ ಚಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ಮಾಡಿದರು.

ಬಿಜೆಪಿಯವರು ಎಷ್ಟು ಕ್ಷೇತ್ರ ಬಿಟ್ಟು ಕೊಡುತ್ತಾರೆ, ಅಷ್ಟೂ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇವೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:32 pm, Tue, 5 March 24

ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ