ಚಿಕ್ಕಬಳ್ಳಾಪುರ: ಅಕ್ರಮವಾಗಿ ನಿವೇಶನ ಮಾರಾಟ; ಎಚ್ಚೆತ್ತ ಜನ, ಖಾಲಿ ಜಾಗದಲ್ಲಿ ಗುಡಿಸಲು ಹಾಕಿ ಧರಣಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 25, 2023 | 5:59 PM

ಜನ ವಸತಿ ಇಲ್ಲದ ಗ್ರಾಮವೊಂದಕ್ಕೆ ಅಕ್ರಮ ಖಾತೆಗಳನ್ನು ಸೃಷ್ಟಿಸಿ ಮಾರಾಟ ಮಾಡಿರುವುದನ್ನು ಮನಗಂಡ ಸ್ಥಳಿಯ ನಿವಾಸಿಗಳು, ತಮ್ಮೂರಿನ ಪಕ್ಕದಲ್ಲೆ ಇರುವ ಮತ್ತೊಂದು ಗ್ರಾಮ ಠಾಣೆ ಸರ್ಕಾರಿ ಜಾಗದಲ್ಲಿ ನಿವೇಶನಗಳನ್ನು ವಿತರಣೆ ಮಾಡುವಂತೆ ಆಗ್ರಹಿಸಿ, ರಾತ್ರೊ ರಾತ್ರಿ ಖಾಲಿ ಜಾಗದಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ಧರಣಿ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಆವಲಗುರ್ಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ. 

ಚಿಕ್ಕಬಳ್ಳಾಪುರ: ಅಕ್ರಮವಾಗಿ ನಿವೇಶನ ಮಾರಾಟ; ಎಚ್ಚೆತ್ತ ಜನ, ಖಾಲಿ ಜಾಗದಲ್ಲಿ ಗುಡಿಸಲು ಹಾಕಿ ಧರಣಿ
ಚಿಕ್ಕಬಳ್ಳಾಪುರ
Follow us on

ಚಿಕ್ಕಬಳ್ಳಾಪುರ, ನ.25: ತಾಲ್ಲೂಕಿನ ಆವಲಗುರ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಜರಾ ಬಾರ್ಲಹಳ್ಳಿ ಎನ್ನುವ ಜನವಸತಿ ಇಲ್ಲದ ಗ್ರಾಮವನ್ನು, ಸ್ವತಃ ಪಂಚಾಯತಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿಕೊಂಡು, ಅಕ್ರಮವಾಗಿ ಖಾತೆಗಳನ್ನು ಸೃಷ್ಟಿಸಿ ಮಾರಾಟ ಮಾಡಿರುವುದನ್ನ ಮನಗಂಡ ಸ್ಥಳಿಯ ನಿವಾಸಿಗಳು. ಈಗ ಮತ್ತೊಂದು ಜನವಸತಿ ಇಲ್ಲದ ಪ್ರದೇಶ ಸೀಗಹಳ್ಳಿ ಎಂಬ ಗ್ರಾಮವನ್ನು ಮಾರಾಟ ಮಾಡುವುದಕ್ಕೂ ಮುನ್ನ ಅಲರ್ಟ್ ಆಗಿದ್ದು, ಖಾಲಿ ಇರುವ ಸರ್ಕಾರಿ ಗ್ರಾಮ ಠಾಣೆ ಜಾಗದಲ್ಲಿ ರಾತ್ರೊ ರಾತ್ರಿ 80ಕ್ಕೂ ಹೆಚ್ಚು ಗುಡಿಸಲುಗಳನ್ನು ನಿರ್ಮಾಣ ಮಾಡಿಕೊಂಡು ನಿವೇಶನಗಳನ್ನಾಗಿ ವಿತರಣೆ ಮಾಡುವಂತೆ ಒತ್ತಾಯ ಮಾಡಿದ್ದಾರೆ.

ಇನ್ನು ಆವಲಗುರ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೂಸೆಪಾಳ್ಯಾ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳಿಗೆ ಮನೆಗಳಿಲ್ಲ, ನಿವೇಶನಗಳು ಇಲ್ಲ. ಬಹುತೇಕರು ದಲಿತರು ಹಾಗೂ ಕ್ರೈಸ್ಥರಾಗಿದ್ದಾರೆ. ಇರುವ ಸರ್ಕಾರಿ ಗ್ರಾಮ ಠಾಣೆ ಜಾಗವನ್ನು ಎಲ್ಲಿ ಅಕ್ರಮವಾಗಿ ಮಾರಿ ಬೀಡುತ್ತಾರೆ ಎಂದು ಆಕ್ರೋಶಗೊಂಡು, ಕಳೆದ ಎರಡು ದಿನಗಳಿಂದ ಖಾಲಿ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಹಗಲು ರಾತ್ರಿ ಅಲ್ಲೆ ಧರಣಿ ಮಾಡುತ್ತಿದ್ದಾರೆ.

ಇದನ್ನೂ ಓದಿ:BUDA Scam: ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ಅಕ್ರಮ; ಸರ್ಕಾರಕ್ಕೆ ಕೋಟ್ಯಂತರ ನಷ್ಟ

ತಾತ್ಕಾಲಿಕ ಗುಡಿಸಲುಗಳಲ್ಲಿ ಅಡುಗೆ, ಸ್ನಾನ ಮಾಡಿಕೊಂಡು ಕೊರೆಯುವ ಚಳಿಯಲ್ಲಿ ನಡಗುತ್ತಿದ್ದಾರೆ. ಇದರಿಂದ ಬಲಾಡ್ಯರಿಗೆ ಸರ್ಕಾರಿ ಜಮೀನು ಮಾರುವುದರ ಬದಲು, ಕಡು ಬಡವ ನಿರ್ಗತಿಕರಿಗೆ ನಿವೇಶನಗಳನ್ನು ನೀಡುವಂತೆ ಸ್ಥಳಿಯರು ಒತ್ತಾಯ ಮಾಡಿದ್ದಾರೆ. ಒಟ್ಟಿನಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಗ್ರಾಮದ ಬಳಿ ಈಶಾ ಫೌಂಡೇಶನ್ ನಿರ್ಮಾಣ ಆಗಿದ್ದೆ ತಡ, ಸುತ್ತಮುತ್ತಲ ಪ್ರದೇಶಗಳ ಜಮೀನು ಹಾಗೂ ನಿವೇಶನಗಳಿಗೆ ಚಿನ್ನದ ಬೆಲೆ ಬಂದಿದೆ. ಇದರಿಂದ ನನಗೊಂದು, ತನಗೊಂದು ನಿವೇಶನಗಳನ್ನು ನೀಡುವಂತೆ ಜನ ಆಗ್ರಹ ಮಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:59 pm, Sat, 25 November 23