ಮಾಂಡೌಸ್ ರಣಚಂಡಿ ಮಳೆಗೆ ಚಿಕ್ಕಬಳ್ಳಾಪುರ ಸರ್ಕಾರಿ ಶಾಲಾ ಕಾಲೇಜು ಕೊಠಡಿಗಳು ತತ್ತರ, ಶಿಕ್ಷಣ ಇಲಾಖೆ ನಿರುತ್ತರ

| Updated By: ಸಾಧು ಶ್ರೀನಾಥ್​

Updated on: Dec 14, 2022 | 5:43 PM

ಗ್ರಾಮದಲ್ಲೆ ಸರ್ಕಾರಿ ಶಾಲೆಗಳಿದ್ದು, ಬಡವರು ತಮ್ಮ ಮಕ್ಕಳನ್ನು ಅಲ್ಲಿಗೇ ಕಳುಹಿಸಿ ವಿದ್ಯಾಭ್ಯಾಸ ಕೊಡಿಸೋಣ ಅಂತ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿಯೇ ಓದಿಸುತ್ತಿದ್ದಾರೆ. ಆದ್ರೆ ಸರ್ಕಾರ ಎಚ್ಚೆತ್ತು ಸೋರುತ್ತಿರುವ ಶಾಲೆಯ ಮಾಳಿಗೆಗಳನ್ನು ದುರಸ್ಥಿಗೊಳಿಸಿ ಸುಸ್ಥಿತಿಯಲ್ಲಿಡಬೇಕಾಗಿದೆ.

ಮಾಂಡೌಸ್ ರಣಚಂಡಿ ಮಳೆಗೆ ಚಿಕ್ಕಬಳ್ಳಾಪುರ ಸರ್ಕಾರಿ ಶಾಲಾ ಕಾಲೇಜು ಕೊಠಡಿಗಳು ತತ್ತರ, ಶಿಕ್ಷಣ ಇಲಾಖೆ ನಿರುತ್ತರ
ಮಾಂಡೌಸ್ ರಣಚಂಡಿ ಮಳೆಗೆ ಚಿಕ್ಕಬಳ್ಳಾಪುರ ಸರ್ಕಾರಿ ಶಾಲಾ ಕಾಲೇಜು ಕೊಠಡಿಗಳು ತತ್ತರ
Follow us on

ಮಾಂಡೌಸ್ ಚಂಡಮಾರುತದ (Mandous Cyclone) ಪರಿಣಾಮ ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ತುಂತುರು ಮಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಸರ್ಕಾರಿ ಶಾಲಾ ಕಾಲೇಜು ಕೊಠಡಿಗಳು ಮಳೆ ನೀರಿನಿಂದ (Chikkaballapur Rains) ಸೋರುತ್ತಿದ್ದು, ಸೊರುವ ನೀರಿನಲ್ಲಿ ವಿದ್ಯಾರ್ಥಿಗಳು ಪಾಠ ಪ್ರವಚನ ಕೇಳುವಂತಾಗಿದೆ. ಈ ವರದಿ ನೋಡಿ. ಮಳೆಯಿಂದ ಸೋರುತ್ತಿರುವ ಸರ್ಕಾರಿ ಶಾಲಾ ಕೊಠಡಿಗಳ ಮೇಲ್ಛಾವಣಿಗಳು, ತೊಟ್ಟಿಕ್ಕಿತ್ತಿರುವ ಗೋಡೆಗಳು (school buildings damaged), ಮಳೆ ನೀರಿನಲ್ಲಿ ಒದ್ದೆಯಾಗಿ, ತಲೆಮ್ಯಾಲೊಂದು ಪ್ಲಾಸ್ಟಿಕ್ ಚೀಲ ಧರಿಸಿ ನಿಂತಿರುವ ವಿದ್ಯಾರ್ಥಿಗಳು, ಮತ್ತೊಂದೆಡೆ ಸೋರಿರುವ ಮಳೆ ನೀರನ್ನು ಎತ್ತಿ ಆಚೆ ಹಾಕ್ತಿರುವ ವಿದ್ಯಾರ್ಥಿಗಳು ಇಂಥ ದೃಶ್ಯ ಕಂಡು ಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ.

ಹೌದು! ಮಾಂಡೌಸ್ ಚಂಡಮಾರುತದ ಪರಿಣಾಮ, ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ತುಂತುರು ಮಳೆಗೆ ಜಿಲ್ಲೆಯ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಚಿಕ್ಕಬಳ್ಳಾಪುರ ಚಿಂತಾಮಣಿ ಬಾಗೇಪಲ್ಲಿ ತಾಲೂಕುಗಳಲ್ಲಿ ಕೆಲವು ಸರ್ಕಾರಿ ಪ್ರಾಥಮಿಕ ಶಾಲೆಗಳ ಕೊಠಡಿಗಳು ಸೋರುತಿವೆ.

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಬತ್ತಪಲ್ಲಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಯ ಮೇಲ್ಛಾವಣಿ ಸೋರುತ್ತಿದ್ದು ವಿದ್ಯಾರ್ಥಿಗಳು ಅದರಲ್ಲಿ ಕುಳಿತು ಪಾಠ ಕೇಳುವಂತಾಗಿದೆ. ಚಿಂತಾಮಣಿ ತಾಲೂಕಿನ ಕುರುಬೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಮಳೆ ನೀರಿನಿಂದ ಸೋರುತ್ತಿವೆ. ಗೌರಿಬಿದನೂರು ತಾಲೂಕಿನ ಕಾದಲವೇಣಿ ಗ್ರಾಮದ ಶಾಲೆ ಹಾಗೂ ಪಿ.ಯು. ಕಾಲೇಜಿಗೆ ನೀರು ನುಗ್ಗಿ ವಿದ್ಯಾರ್ಥಿಗಳು ಪರದಾಡ್ತಿದ್ದಾರೆ.

Also Read:  ‘ಮಾಂಡೌಸ್‌’ನ ಮಾರ್ದನಿಗೆ ನಂದಿ ಬೆಟ್ಟದಲ್ಲಿ ಚೆಲುವಿನ ಚಿತ್ತಾರ, ಸೊಬಗನ್ನ ಕಣ್ತುಂಬಿಕೊಳ್ಳಲು ಪ್ರವಾಸಿಗರ ಆಗಮನ

ಚಿಕ್ಕಬಳ್ಳಾಪುರ ತಾಲೂಕಿನ ಯಲುವಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಹುತೇಕ ಕೊಠಡಿಗಳು ಸಹ ಸೋರುತ್ತಿದ್ದು ಇದುವರೆಗೂ ರಿಪೇರಿ ಮಾಡಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಡಿ.ಡಿ.ಪಿ.ಐ ಜಯರಾಮರೆಡ್ಡಿ ಅವರನ್ನು ಕೇಳಿದ್ರೆ… ಅನುದಾನ ಬಂದಿದೆ, ರಿಪೇರಿ ಮಾಡ್ತೀವಿ ಎಂದು ತೇಪೆ ಹಚ್ಚುತ್ತಾರೆ.

ಗ್ರಾಮದಲ್ಲೆ ಸರ್ಕಾರಿ ಶಾಲೆಗಳಿದ್ದು, ಬಡವರು ತಮ್ಮ ಮಕ್ಕಳನ್ನು ಅಲ್ಲಿಗೇ ಕಳುಹಿಸಿ ವಿದ್ಯಾಭ್ಯಾಸ ಕೊಡಿಸೋಣ ಅಂತ ಸರ್ಕಾರಿ ಶಾಲೆಗಳಲ್ಲಿಯೇ ಓದಿಸುತ್ತಿದ್ದಾರೆ. ಆದ್ರೆ ಸರ್ಕಾರ ಎಚ್ಚೆತ್ತು ಸೋರುತ್ತಿರುವ ಶಾಲೆಯ ಮಾಳಿಗೆಗಳನ್ನು ದುರಸ್ಥಿಗೊಳಿಸಿ ಸುಸ್ಥಿತಿಯಲ್ಲಿಡಬೇಕಾಗಿದೆ.

ವರದಿ: ಭೀಮಪ್ಪ ಪಾಟೀಲ್, ಟಿವಿ 9, ಚಿಕ್ಕಬಳ್ಳಾಪುರ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ