ವಿವಿಧ ಯೋಜನೆಗಳ ಹಣವನ್ನು ಅಕೌಂಟ್​ಗೆ ಹಾಕದ ಆರೋಪ: ಪೋಸ್ಟ್ ಮಾಸ್ಟರ್ ಕಚೇರಿಗೆ ನುಗ್ಗಿ ಧಾಂದಲೆ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 07, 2023 | 5:16 PM

Chikkaballapur News: ಅಂಚೆ ಇಲಾಖೆಯ ವಿವಿಧ ಯೋಜನೆಗಳ ಹಣವನ್ನು ಸಾರ್ವಜನಿಕರು ಪ್ರತಿತಿಂಗಳು, ತಮ್ಮೂರಿನ ಪೋಸ್ಟ್ ಮಾಸ್ಟರ್ ಕೈಗೆ ಕೊಡುತ್ತಿದ್ದರು. ಆದರೆ ಪೋಸ್ಟ್ ಮಾಸ್ಟರ್, ಸಾರ್ವಜನಿಕರ ಹಣವನ್ನು ಇಲಾಖೆಯ ಅಕೌಂಟ್​​ಗೆ ಹಾಕದೆ ಅದನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ನೂರಾರು ಜನ ಫಲಾನುಭವಿಗಳು ಅಂಚೆ ಕಚೇರಿಗೆ ನುಗ್ಗಿ ಪೋಸ್ಟ್ ಮಾಸ್ಟರ್​ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿವಿಧ ಯೋಜನೆಗಳ ಹಣವನ್ನು ಅಕೌಂಟ್​ಗೆ ಹಾಕದ ಆರೋಪ: ಪೋಸ್ಟ್ ಮಾಸ್ಟರ್ ಕಚೇರಿಗೆ ನುಗ್ಗಿ ಧಾಂದಲೆ
ಪೋಸ್ಟ್ ಮಾಸ್ಟರ್ ಕಚೇರಿಗೆ ನುಗ್ಗಿ ಗಲಾಟೆ
Follow us on

ಚಿಕ್ಕಬಳ್ಳಾಪುರ, ಆಗಸ್ಟ್​ 07: ಅಂಚೆ ಕಚೇರಿಯ (post office) ವಿವಿಧ ಯೋಜನೆಗಳ ಹಣ ಖಾತೆಗೆ ಹಾಕದ ಆರೋಪ ಕೇಳಿಬಂದಿದ್ದು, ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು ಬ್ರ್ಯಾಂಚ್​ ಪೋಸ್ಟ್ ಮಾಸ್ಟರ್ ಕಚೇರಿಗೆ ನುಗ್ಗಿ ಧಾಂದಲೆ ಮಾಡಲಾಗಿದೆ. ಆಕ್ರೋಶಗೊಂಡ ವಿವಿಧ ಯೋಜನೆಗಳ ಫಲಾನುಭವಿಗಳು ಅಂಚೆ ಕಚೇರಿಗೆ ನುಗ್ಗಿ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಬ್ರಾಂಚ್ ಪೋಸ್ಟ್ ಮಾಸ್ಟರ್ ಎಂ.ವೈಷ್ಣವಿ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ.

ರಕ್ಷಣೆಗೆ ಬಂದ ಪೊಲೀಸರ ಜೊತೆಯೂ ವಾಗ್ವಾದ ಮಾಡಲಾಗಿದೆ. ಪೋಸ್ಟ್​ ಮಾಸ್ಟರ್ ಕೂತಿದ್ದ ಪೊಲೀಸ್ ಜೀಪ್ ತಡೆದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಂಚೆ ಕಚೇರಿಯ ಕೆಲವು ಪಾಸ್​ಬುಕ್​ಗಳಲ್ಲಿ ಲೋಪದೋಷ ಕಂಡುಬಂದಿದೆ.

ಇದನ್ನೂ ಓದಿ: ಹೆಸ್ಕಾಂನ ವಿದ್ಯುತ್ ಗ್ರಿಡ್ ವಿವಾದ: ಧಾರವಾಡದ ಪಾರಂಪರಿಕಾ ಕಟ್ಟಡಗಳಿಗೆ ಧಕ್ಕೆ ಆತಂಕ

ಗ್ರಾಮದಲ್ಲಿ ಅಂಚೆ ಇಲಾಖೆಯ ಬ್ರಾಂಚ್ ಪೋಸ್ಟ್ ಮಾಸ್ಟರ್ ಕಚೇರಿ ಇದೆ. ಉಳಿತಾಯ ಯೋಜನೆ ಖಾತೆ, ಗ್ರಾಮೀಣ ಅಂಚೆ ಜೀವ ವೀಮೆ, ಸುಕನ್ಯ ಸಮೃದ್ದಿ ಅಕೌಂಟ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಿಗಾಗಿ ಸಾರ್ವಜನಿಕರು ಖಾತೆ ತೆರೆದು ಪ್ರತಿ ತಿಂಗಳು ಹಣವನ್ನು ತಮ್ಮೂರಿನ ಪೋಸ್ಟ್ ಮಾಸ್ಟರ್ ವೈಷ್ಣವಿ ಎಂ ಗೆ ನೀಡಿದ್ದಾರೆ. ಆದರೆ ಕೆಲವರು ಪಾಸ್ ಪುಸ್ತಕದಲ್ಲಿ ಹಣ ಸ್ವೀಕಾರ ಮಾಡಿದ ಬಗ್ಗೆ ಬರೆದುಕೊಟ್ಟಿದ್ದರು. ಇಲಾಖೆಯ ಅಕೌಂಟ್​ನಲ್ಲಿ ಹಣ ಇಲ್ಲ, ಇದರಿಂದ ಆಕ್ರೋಶಗೊಂಡ ಸ್ಥಳಿಯ ಫಲಾನುಭವಿಗಳು ಇಂದು ಕಚೇರಿಗೆ ನುಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಕೋರ್ಟ್ ಆದೇಶವಿದ್ದರೂ ನಿವೃತ್ತ ಯೋಧನಿಗೆ ಸರ್ಕಾರಿ ಜಮೀನು ನೀಡಲು ಅಧಿಕಾರಿಗಳ ಹಿಂದೇಟು

ದಿಬ್ಬೂರು ಗ್ರಾಮವೊಂದರಲ್ಲಿ ನೂರಾರು ಜನ ಅಮಾಯಕರು, ಉಳಿತಾಯ ಯೋಜನೆ ಖಾತೆ, ಗ್ರಾಮೀಣ ಅಂಚೆ ಜೀವ ವೀಮೆ, ಸುಕನ್ಯ ಸಮೃದ್ದಿ ಅಕೌಂಟ್ ಯೋಜನೆಗೆ ಲಕ್ಷಾಂತರ ರೂಪಾಯಿ ಹಣ ಕಟ್ಟಿದ್ದಾರೆ. ಆದರೆ ಪಾಸ್​ ಪುಸ್ತಕದಲ್ಲಿ ಹಣ ಇರುವ ಬಗ್ಗೆ ಬರೆಯಲಾಗಿದೆ. ಆದರೆ ಆನ್ ಲೈನ್ ಖಾತೆಯಲ್ಲಿ ಪರಿಶೀಲನೆ ನಡೆಸಿದರೆ ಹಣ ಕಟ್ಟಿರುವ ಬಗ್ಗೆ ಮಾಹಿತಿ ಇಲ್ಲ, ಇದರಿಂದ ಪೋಸ್ಟ್ ಮಾಸ್ಟರ್ ವೈಷ್ಣವಿ ಮೋಸ ಮಾಡಿದ್ದಾರೆ ಎಂದು ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರ ಆಕ್ರೋಶದಿಂದ ಗಾಬರಿಗೊಂಡ ಪೋಸ್ಟ್ ಮಾಸ್ಟರ್ ವೈಷ್ಣವಿ, ಸಮರ್ಪಕ ಉತ್ತರ ನಿಡಲು ಸಾಧ್ಯವಾಗಿಲ್ಲ, ಇಲಾಖೆಯ ಹಿರಿಯ ಅಧಿಕಾರಿಗಳು ಪರಿಶೀಲನೆ ಬಂದಿದ್ರು, ಇದ್ರಿಂದ ಫಲಾನುಭವಿಗಳ ಪಾಸ್ ಪುಸ್ತಕಗಳನ್ನು ಪಡೆದು ಪರಿಶೀಲನೆ ಇಡಲಾಗಿದೆ, ಆದ್ರೆ ಕೆಲವರ ಹಣವನ್ನು ಬೈ ಮಿಸ್ಟೆಕ್​ ಸರ್ವರ್ ಸಮಸ್ಯೆಯಿಂದ ಸಂದಾಯ ಮಾಡಲು ಆಗಿಲ್ಲ, ಇದ್ರಿಂದ ಅಕೌಟ್​ಗೆ ಹಣ ಹೋಗಿಲ್ಲ ಎಂದು ಸಮಜಾಹಿಸಿ ನೀಡಿದ್ರು. ಸದ್ಯ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ವೈಷ್ಣವಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.