Sign In

By signing in or creating an account, you agree with Associated Broadcasting Company's Terms & Conditions and Privacy Policy.

ATM ಗಳಲ್ಲಿ ಮುಗ್ಧ ಜನರಿಗೆ ಸಹಾಯ ಮಾಡುವ ನೆಪದಲ್ಲಿ ವಂಚನೆ ಮಾಡುವ ಮನುಷ್ಯ ಇಲ್ಲಿದ್ದಾನೆ!

ಆರೋಪಿ ಎನ್‌. ಸಾಗರ್ ದಿನಕ್ಕೊಂದು ಊರು ದಿನಕ್ಕೊಂದು ಜಿಲ್ಲೆಯಂತೆ ವಿವಿಧೆಡೆ ವಂಚನೆ ಮಾಡಿರುವುದು ಬಯಲಾಗಿದೆ. ಶಿವಮೊಗ್ಗ, ಯಾದಗಿರಿ, ಕೆ.ಆರ್. ನಗರ, ಕುಣಿಗಲ್, ಗೌರಿಬಿದನೂರು ನಗರ, ಗುಬ್ಬಿ, ಶಿರಾ, ಐಜೂರು ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈತ ವಂಚನೆ ಮಾಡಿರುವುದು ಬಯಲಾಗಿದೆ.

ATM ಗಳಲ್ಲಿ ಮುಗ್ಧ ಜನರಿಗೆ ಸಹಾಯ ಮಾಡುವ ನೆಪದಲ್ಲಿ ವಂಚನೆ ಮಾಡುವ ಮನುಷ್ಯ ಇಲ್ಲಿದ್ದಾನೆ!
ATM ಗಳಲ್ಲಿ ಸಹಾಯ ಮಾಡುವ ನೆಪದಲ್ಲಿ ವಂಚನೆ ಮಾಡುವ ಮನುಷ್ಯ ಇಲ್ಲಿದ್ದಾನೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Oct 18, 2022 | 4:51 PM

ಗ್ರಾಮಾಂತರ ಭಾಗದಲ್ಲಿರುವ ATM ಗಳ ಬಳಿ ಬರುವ ರೈತರು ಕೂಲಿಕಾರ್ಮಿಕರು ಅಂತಹ ಮುಗ್ಧ ಜನರನ್ನೇ ಟಾರ್ಗೆಟ್ ಮಾಡಿಕೊಂಡು, ಅವರಿಗೆ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ, ಅವರ ATM ಕಾರ್ಡಗಳನ್ನು ಬದಲಾಯಿಸಿ ಅವರ ATM ಪಿನ್ ತಿಳಿದುಕೊಂಡು, ATM ಗ್ರಾಹಕರಿಗೆ ಯಾಮಾರಿಸುತ್ತಿದ್ದ ಖತರ್ನಾಕ್ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಯಾವುದಕ್ಕೂ ಅವನ ಮುಖವನ್ನೊಮ್ಮೆ ನೀವು ನೋಡಿ ಬಿಡಿ!

ಮೇಲಿನ ಸಿಸಿಟಿವಿ ದೃಶ್ಯವನ್ನೊಮ್ಮೆ ನೋಡಿ. ATM ನಲ್ಲಿ ಹಣ ಡ್ರಾ ಮಾಡಲು ಬಂದವನಂತೆ… ಹಣ ಡ್ರಾ ಮಾಡುವ ರೀತಿ ಪೋಸ್ ನೀಡುತ್ತಾ ಅಕ್ಕಪಕ್ಕ ATM ನಲ್ಲಿ ನಿಂತಿರುವವರನ್ನು ಗಮನಿಸಿರುತ್ತಿವ ಈ ದಢೂತಿ ವ್ಯಕ್ತಿಯನ್ನು ಗಮನಿಸಿ. ಭದ್ರಾವತಿ ನಗರದ ಹುಡೊ ಕಾಲೋನಿ ನಿವಾಸಿಯಾಗಿರುವ ಇವನ ಹೆಸರು ಎನ್‌. ಸಾಗರ್. ಇನ್ನೂ ಈಗಷ್ಟೇ 29 ವರ್ಷ ವಯಸ್ಸು. ಆದ್ರೆ ದುಡಿದು ತಿನ್ನುವುದರ ಬದಲು ಕದ್ದು ತಿನ್ನುವುದೇ ಈತ ತನ್ನ ಕಾಯಕ ಮಾಡಿಕೊಂಡಿದ್ದಾನೆ.

ಅದರಲ್ಲೂ ಗ್ರಾಮಾಂತರ ಭಾಗದಲ್ಲಿರುವ ATM ಗಳ ಬಳಿ ಬರುವ ರೈತರು, ಕೂಲಿಕಾರ್ಮಿಕರು ಅಂತಹ ಅಮಾಯಕರನ್ನೆ ಟಾರ್ಗೆಟ್ ಮಾಡಿಕೊಂಡು, ಅವರಿಗೆ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ, ಅವರ ATM ಕಾರ್ಡಗಳನ್ನು ಬದಲಾಯಿಸಿ ಅವರ ATM ಪಿನ್ ತಿಳಿದುಕೊಂಡು ನಂತರ ಹಣ ಡ್ರಾ ಮಾಡಿಕೊಂಡು ವಂಚನೆ ಮಾಡ್ತಿದ್ದ. ಈಗ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಆರೋಪಿ ಎನ್‌. ಸಾಗರ್ ದಿನಕ್ಕೊಂದು ಊರು ದಿನಕ್ಕೊಂದು ಜಿಲ್ಲೆಯಂತೆ ವಿವಿಧೆಡೆ ವಂಚನೆ ಮಾಡಿರುವುದು ಬಯಲಾಗಿದೆ. ಶಿವಮೊಗ್ಗ, ಯಾದಗಿರಿ, ಕೆ.ಆರ್. ನಗರ, ಕುಣಿಗಲ್, ಗೌರಿಬಿದನೂರು ನಗರ, ಗುಬ್ಬಿ, ಶಿರಾ, ಐಜೂರು ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈತ ವಂಚನೆ ಮಾಡಿರುವುದು ಬಯಲಾಗಿದೆ. ATM ಗೆ ಬರುವ ಗ್ರಾಹಕರು ಅಪರಿಚಿತರಿಂದ ಹುಷಾರು ಆಗಿ ಇರುವಂತೆ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್.ನಾಗೇಶ್ ಮನವಿ ಮಾಡಿದ್ದಾರೆ. ಅಪರಿಚಿತರ ಬಳಿ ಸಹಾಯ ಕೇಳುವ ಮುನ್ನ ಎ.ಟಿ.ಎಂ. ಗ್ರಾಹಕರು ಎಚ್ಚರದಿಂದ ಇರುವಂತೆ ಪೊಲೀಸರು ಮನವಿ ಮಾಡಿದ್ದಾರೆ – ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ

Published On - 4:49 pm, Tue, 18 October 22