ಗೌರಿಬಿದನೂರು -ನಿರಂತರ ಮಳೆಗೆ ಕುಸಿದ ಮನೆ, ಮುಳಬಾಗಿಲಿನಲ್ಲಿ ಮನೆ ಕುಸಿದು ವ್ಯಕ್ತಿ ಸಾವು, ಗ್ರಾಮ ಬಿಡುತ್ತಿರುವ ಗೌನಿಪಲ್ಲಿ ಜನ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಜನ ನಾನಾ ಸಂಕಷ್ಟಪಡುವಂತಾಗಿದೆ. ಒಂದೆಡೆ ಬರದ ನಾಡು ಎಂದೇ ಖ್ಯಾತವಾದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಜನ ಮಳೆ ಬರುತ್ತಿರುವುದನ್ನು ನೋಡಿ ಸಂತಸಗೊಂಡಿದ್ದಾರಾದರೂ ಅಷ್ಟೇ ಕಷ್ಟಕೋಲೆ ನಿರ್ಮಾಣ ವಾಗುತ್ತಿರುವುದಕ್ಕೆ ಕಂಗಟ್ಟು ಕುಳಿತಿದ್ದಾರೆ. ಭೂಮನಹಳ್ಳಿ ಗ್ರಾಮದಲ್ಲಿ ರತ್ನಮ್ಮ ಎಂಬುವವರಿಗೆ ಸೇರಿದ ಮನೆಯೊಂದು ನೆಲಸಮಗೊಂಡಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಭೂಮನಹಳ್ಳಿ ಗ್ರಾಮದಲ್ಲಿ (chikkaballapur rain) ಮನೆ ಕಳೆದುಕೊಂಡ ರತ್ನಮ್ಮ ಅವರ ಪಡಿಪಾಟಲು ಹೇಳತೀರದಾಗಿದೆ. ಮಂಚೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಈ […]

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಜನ ನಾನಾ ಸಂಕಷ್ಟಪಡುವಂತಾಗಿದೆ. ಒಂದೆಡೆ ಬರದ ನಾಡು ಎಂದೇ ಖ್ಯಾತವಾದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಜನ ಮಳೆ ಬರುತ್ತಿರುವುದನ್ನು ನೋಡಿ ಸಂತಸಗೊಂಡಿದ್ದಾರಾದರೂ ಅಷ್ಟೇ ಕಷ್ಟಕೋಲೆ ನಿರ್ಮಾಣ ವಾಗುತ್ತಿರುವುದಕ್ಕೆ ಕಂಗಟ್ಟು ಕುಳಿತಿದ್ದಾರೆ. ಭೂಮನಹಳ್ಳಿ ಗ್ರಾಮದಲ್ಲಿ ರತ್ನಮ್ಮ ಎಂಬುವವರಿಗೆ ಸೇರಿದ ಮನೆಯೊಂದು ನೆಲಸಮಗೊಂಡಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಭೂಮನಹಳ್ಳಿ ಗ್ರಾಮದಲ್ಲಿ (chikkaballapur rain) ಮನೆ ಕಳೆದುಕೊಂಡ ರತ್ನಮ್ಮ ಅವರ ಪಡಿಪಾಟಲು ಹೇಳತೀರದಾಗಿದೆ. ಮಂಚೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇನ್ನು ಚಿಕ್ಕಬಳ್ಳಾಪುರ ತಾಲೂಕಿನ ಕಳವಾರ ಗ್ರಾಮದಲ್ಲಿ ಧಾರಾಕರ ಮಳೆಗೆ ದನದ ಕೊಟ್ಟಿಗೆ ಕುಸಿದಿದ್ದು ರೈತ ಕೆ.ವಿ. ನಾರಾಯಣಸ್ವಾಮಿಗೆ ಸೇರಿದ ಹಸು ಸ್ಥಳದಲ್ಲೇ ಸಾವಿಗೀಡಾಗಿದೆ. ಇನ್ನೊಂದು ಹಸುವಿಗೆ ಗಂಭೀರವಾಗಿ ಗಾಯಗೊಂಡಿದೆ. ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೆಂದಟ್ಟಿ ಗ್ರಾಮದಲ್ಲಿ ನಿರಂತರ ಮಳೆಗೆ (kolar rains) ಮನೆ ಗೋಡೆ ಕುಸಿದು ವ್ಯಕ್ತಿಯೊಬ್ಬರು ದುರ್ಮರಣಕ್ಕೀಡಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮೇಳ್ಯಾದಲ್ಲಿ ಧಾರಾಕರ ಮಳೆಗೆ ಮೇಳ್ಯಾ ಕೆರೆಯ ಕೋಡಿ ಕಟ್ಟೆ ಒಡೆದು ಅವಾಂತರ ಸೃಷ್ಟಿಯಾಗಿದೆ. ರೈತರ ಜಮೀನುಗಳಿಗೆ ಕೆರೆಯ ನೀರು ನುಗ್ಗಿದೆ. ನೀರಿನ ರಭಸಕ್ಕೆ ಬೆಳೆಗಳು ಕೊಚ್ಚಿ ಹೋಗಿವೆ. ಇನ್ನೂ ಕೆಲವು ಕಡೆ ಇರೊ ಬರೊ ಬೆಳೆಗಳು ಸಹ ಜಲಾವೃತಗೊಂಡಿವೆ.
ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೆಂದಟ್ಟಿ ಗ್ರಾಮದಲ್ಲಿ ನಿರಂತರ ಮಳೆಗೆ ಮನೆ ಗೋಡೆ ಕುಸಿದು ವ್ಯಕ್ತಿಯೊಬ್ಬರು ದುರ್ಮರಣಕ್ಕೀಡಾಗಿದ್ದಾರೆ. ತಾಲೂಕಿನ ಪೆಮ್ಮಶೆಟ್ಟಿಹಳ್ಳಿ ಗ್ರಾಮದ 50 ವರ್ಷದ ಪ್ರಭಾಕರ್ ಮೃತ ದುರ್ದೈವಿ. ಕಳೆದ ರಾತ್ರಿ ಸುರಿದ ಮಳೆಗೆ ಗೋಡೆ ಕುಸಿದು ಅವಘಡ ಸಂಭವಿಸಿದೆ. ಪತ್ನಿಯ ಊರು ಕೆಂದಟ್ಟಿ ಗ್ರಾಮದಲ್ಲಿ ವಾಸವಾಗಿದ್ದ ಪ್ರಭಾಕರ್ ವಾಸವಾಗಿದ್ದರು.
ಕೋಲಾರ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಜೋರಾಗಿದ್ದು, ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಾದ್ಯಂತ ಅಬ್ಬರಿಸುತ್ತಿದೆ. ಗೌನಿಪಲ್ಲಿ ಗ್ರಾಮದಲ್ಲಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಗ್ರಾಮದಲ್ಲಿ ನೀರು ಆವರಿಸುತ್ತಿರುವ ಕಾರಣ ಗ್ರಾಮಸ್ಥರು ಮನೆಗಳನ್ನ ಖಾಲಿ ಮಾಡುತ್ತಿದ್ದಾರೆ. ಮನೆಗಳ ಸುತ್ತ 3 ರಿಂದ 4 ಅಡಿಗಳಷ್ಟು ನೀರು ನಿಂತಿದ್ದು, ಗೌನಿಪಲ್ಲಿ ಗ್ರಾಮದಲ್ಲಿ ಮಳೆಯಿಂದಾಗಿ ಜನ ಪರದಾಡುತ್ತಿದ್ದಾರೆ. ಶ್ರೀನಿವಾಸಪುರ ತಾಲೂಕಿನಾದ್ಯಂತ ಕೆರೆ ಕಟ್ಟೆ ಕಾಲುವೆಗಳು ಉಕ್ಕಿ ಹರಿಯುತ್ತಿವೆ.




