ಚಿಕ್ಕಬಳ್ಳಾಪುರ: ಆಹಾರ ನಾಗರಿಕ ಸರಬರಾಜು ಇಲಾಖೆಯಲ್ಲಿ ಸರ್ವರ್ ಸಮಸ್ಯೆ, ಅನ್ನಬಾಗ್ಯ ಫಲಾನುಭವಿಗಳ ಪರದಾಟ
ಆಯುಧ ಪೂಜೆ ದಸರಾ ಸಂಭ್ರಮಕ್ಕೆ ನೆಮ್ಮದಿಯಾಗಿ ಅನ್ನಮಾಡಿ ಊಣಬಡಿಸೋಣ ಅಂತ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ರೇಷನ್ ಕಾರ್ಡ ಹಿಡಿದು, ಚಿಕ್ಕಬಳ್ಳಾಪುರದ ಸ್ಥಳೀಯ ನ್ಯಾಯಬೆಲೆಯತ್ತ ಹೆಜ್ಜೆ ಹಾಕಿದ್ರೆ, ಸರ್ವರ್ ಸಮಸ್ಯೆ!
ಚಿಕ್ಕಬಳ್ಳಾಪುರ, ಅಕ್ಟೋಬರ್ 23: ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯಲ್ಲಿ ಮೊದಲೇ ತೀವ್ರ ಬರಗಾಲ, ಮಳೆ ಬೆಳೆ ಇರಲಿ ಧವಸ ದಾನ್ಯಗಳಿಗೆ ಪರದಾಡುವ ಪರಿಸ್ಥಿತಿ. ಇಂಥದ್ದರಲ್ಲಿ ಆಹಾರ ನಾಗರಿಕ ಸರಬರಾಜು ಇಲಾಖೆಯಿಂದ ವಿತರಿಸುವ ಅನ್ನಬಾಗ್ಯ (Anna Bhagya Scheme) ಪಡಿತರ (Ration) ಧವಸದಾನ್ಯಗಳು ಅಲ್ಲಿಯ ಜನರ ನೆಮ್ಮದಿಗೆ ಕಾರಣವಾಗಿತ್ತು. ಆದ್ರೆ ಕಳೆದ ಒಂದು ವಾರದಿಂದ ಇಲಾಖೆಯ ಸರ್ವರ್ ಸಮಸ್ಯೆ ಆಗಿದ್ದರಿಂದ ಸ್ಥಳೀಯ ನ್ಯಾಯ ಬೆಲೆ ಅಂಗಡಿಗಳ ಮಾಲೀಕರು ಪಡಿತರದಾನ್ಯಗಳ ವಿತರಣೆ ಮಾಡಲಾಗದೆ ಪರದಾಡುತ್ತಿದ್ದಾರೆ.
ಆಯುಧ ಪೂಜೆ ದಸರಾ ಸಂಭ್ರಮಕ್ಕೆ ನೆಮ್ಮದಿಯಾಗಿ ಅನ್ನಮಾಡಿ ಊಣಬಡಿಸೋಣ ಅಂತ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ರೇಷನ್ ಕಾರ್ಡ ಹಿಡಿದು, ಚಿಕ್ಕಬಳ್ಳಾಪುರದ ಸ್ಥಳೀಯ ನ್ಯಾಯಬೆಲೆಯತ್ತ ಹೆಜ್ಜೆ ಹಾಕಿದ್ರೆ, ಸರ್ವರ್ ಸಮಸ್ಯೆ. ನ್ಯಾಯಬೆಲೆಯ ಲಾಗಿನ್ ಆಗಲ್ಲ, ಆದ್ರೂ ಸ್ಥಿರವಿರಲ್ಲ, ದಿನವಿಡಿ ಕಾದು ಕುಳಿತರೂ ಸಮರ್ಪಕವಾಗಿ ಸರ್ವರ್ ಕೆಲಸ ಮಾಡ್ತಿಲ್ಲವಂತೆ. ಇದ್ರಿಂದ ಸರ್ವರ್ ಸಮಸ್ಯೆ ಸರಿ ಹೋಗುವ ವರೆಗೂ ಪಡಿತರ ದಾನ್ಯ ವಿತರಣೆ ಮಾಡಲು ಆಗಲ್ಲ, ಏನು ಮಾಡೋದು ಅಂತ ಸ್ವತಃ ನ್ಯಾಯಬೆಲೆ ಅಂಗಡಿಗಳ ಮಾಲಿಕರುಗಳು ಪರದಾಡ್ತಿದ್ದಾರೆ.
ಇನ್ನು ಈ ತಿಂಗಳ ಪಡಿತರ ಪಡೆಯಲು ಅನ್ನಬಾಗ್ಯ ಯೋಜನೆಯ ಫಲಾನುಭವಿಗಳು, ನ್ಯಾಯಬೆಲೆ ಅಂಗಡಿಗೆ ಆಗಮಿಸಿ ಪಡಿತರ ಪಡೆಯಲಾಗದೆ ಪರದಾಡ್ತಿದ್ದಾರೆ. ಇದೆ ವೇಳೆ ‘ಟಿವಿ9’ ರಿಯಾಲಿಟಿ ಚೆಕ್ ಮಾಡಲು ಚಿಕ್ಕಬಳ್ಳಾಪುರದ ಮುಷ್ಟೂರು ಬಡಾವಣೆಯ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿತ್ತು. ಅಂಗಡಿಯರ ಲಾಗಿನ್ ಆಗ್ತಿಲ್ಲ, ಲಾಗಿನ್ ಆದ್ರೂ ಸ್ಥಿರವಾಗ್ತಿಲ್ಲ, ಇದ್ರಿಂದ ಕಾರ್ಡದಾರರ ಬಯೊಮೆಟ್ರಿಕ್ ಪಡೆದು ಓಟಿಪಿ ಬರುವಷ್ಟರಲ್ಲಿ ಸರ್ವರ್ ಕೈಕೊಡುವ ದೃಶ್ಯಗಳು ಕಂಡು ಬಂದವು. ಇದ್ರಿಂದ ಬಡ ಕೂಲಿಕಾರ್ಮಿಕರು ಕಳೆದ ನಾಲ್ಕು ದಿನಗಳಿಂದ ಅಂಗಡಿಗೆ ಬಂದು ಹೋಗುತ್ತಿದ್ರೂ ರೇಷನ್ ದೊರೆಯುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಆತ್ಮಹತ್ಯೆಗೆ ಶರಣಾದ ಯುವಕ; ಕಾರಣವೇನು ಗೊತ್ತಾ?
ಚಿಕ್ಕಬಳ್ಳಾಪುರ ತಾಲೂಕು ಒಂದರಲ್ಲೇ ಬರೋಬ್ಬರಿ 92 ನ್ಯಾಯಬೆಲೆ ಅಂಗಡಿಗಳಿದ್ದು, ಬಹುತೇಕ ಅಂಗಡಿಗಳಲ್ಲಿ ಲಾಗಿನ್ ಆಗ್ತಿಲ್ಲ, ಆದ್ರೂ ಸ್ಥಿರವಾಗ್ತಿಲ್ಲ. ಸರ್ವರ್ ಸಮಸ್ಯೆಯಿಂದ ಪಡಿತರ ಧವಸ ದಾನ್ಯಗಳನ್ನು ವಿತರಣೆ ಮಾಡಲು ಆಗ್ತಿಲ್ಲ. ಸರ್ವರ್ ಸಮಸ್ಯೆಗೆ ಇಲಾಖೆಯ ಅಧಿಕಾರಿಗಳು ಅಸಹಾಯಕರಾಗಿದ್ದು ಎನ್ಐಸಿ ಅಧಿಕಾರಿಗಳಿಗೆ ಪತ್ರ ಬರೆದು ಸರ್ವರ್ ಸಮಸ್ಯೆ ಬಗೆಯರಿಸುವಂತೆ ಮನವಿ ಮಾಡಿದ್ದಾರೆ. ಆದ್ರೆ ಇಲಾಖೆಯ ಸರ್ವರ್ ಸಮಸ್ಯೆಯಿಂದ ಬರಗಾಲದ ಮೇಲೆ ಬರೆ ಎಳೆದಂತಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ