ಮಹಿಳೆಯರ ಸಾಧನೆ ಇದು ಟ್ರೇಲರ್ ಅಷ್ಟೇ, ಪಿಕ್ಚರ್ ಇನ್ನೂ ಬಾಕಿ ಇದೆ: ರಾಷ್ಟ್ರಪತಿ ದ್ರೌಪದಿ ಮುರ್ಮು
ಚಿಕ್ಕಬಳ್ಳಾಪುರದ ಖಾಸಗಿ ವಿವಿ ಘಟೀಕೋತ್ಸವದಲ್ಲಿ ಬಾಗಿಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು, ಪದವಿ ಪ್ರದಾನ ಹಾಗೂ ಗೋಲ್ಡ್ ಮೇಡಲ್ ಪ್ರದಾನ ಮಾಡಿದರು.
ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಉತ್ತಮ ಸಾಧನೆಗಳನ್ನು ತೋರುತ್ತಿರುವುದು ಸಂತೋಷದ ವಿಷಯವಾಗಿದೆ. ಎಲ್ಲಾ ರಂಗಗಳಲ್ಲಿಯೂ ಮಹಿಳೆಯರು ಮುಂದೆ ಬರುತ್ತಿದ್ದಾರೆ. ಮಹಿಳೆಯರ ಸಾಧನೆ ವಿಚಾರದಲ್ಲಿ ಇದು ಟ್ರೇಲರ್ ಅಷ್ಟೇ ಪಿಕ್ಚರ್ ಇನ್ನೂ ಬಾಕಿ ಇದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಹೇಳಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿವಿ ಪದವಿ ಪ್ರದಾನ ಸಮಾರಂಭದಲ್ಲಿ ಭಾಷಣದ ಆರಂಭದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಶುಭಾಶಯ ಕೋರಿದರು. ಶಿಕ್ಷಕರು, ಆಧಾತ್ಮಿಕ ಮಾರ್ಗದರ್ಶನದ ಕೃತಜ್ಞತೆಗೆ ಈ ದಿನ ಮಿಸಲು ಎಂದು ಹೇಳಿದರು.
ಮುಂದುವರಿದ ಮಾತನಾಡಿದ ರಾಷ್ಟ್ರಪತಿ, ಭಾರತದ ಶ್ರೀಮಂತ ಸಂಪ್ರದಾಯಗಳು ನಮ್ಮ ಹೆಮ್ಮೆಯಾಗಿದೆ. ಸಂಪ್ರದಾಯಗಳ ಜೊತೆ ಆಧುನಿಕತೆಯನ್ನು ಅಳವಡಿಸಿಕೊಂಡರೆ ಲಾಭವಾಗಲಿದೆ. ಸ್ಪರ್ಧಾತ್ಮಕ ಯುಗದಲ್ಲಿ ಮಾನಸಿಕ, ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಪರೀಕ್ಷೆಗಳು ಮತ್ತು ಫಲಿತಾಂಶ ಉತ್ತುಂಗದ ಒಂದು ಆಯಾಮ ಅಷ್ಟೆ. ಪರೀಕ್ಷೆಯ ಯಶಸ್ಸು ನಿಮ್ಮ ಸಾಮಾರ್ಥ್ಯದ ಅಳತೆಯಲ್ಲ. ನಿಮ್ಮ ವ್ಯಕ್ತಿತ್ವ ಮತ್ತು ಚಾರಿತ್ರ್ಯ, ಶೈಕ್ಷಣಿಕ ಬದುಕು, ಸಾಧನೆಗಳಿಗಿಂತ ಮಿಗಿಲು ಎಂದರು.
ಇದನ್ನೂ ಓದಿ: Tumakuru; ಅಕ್ಕಿ ಕೊಡಲಾಗದೆ ಪ್ರಧಾನಿ ಮೋದಿಯವರನ್ನು ದೂಷಿಸುವ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು: ಜೆಸಿ ಮಾಧುಸ್ವಾಮಿ
ಪದವಿ, ಗೋಲ್ಡ್ ಮೇಡಲ್ ಮತ್ತು ಡಾಕ್ಟರೇಟ್ ಪದವಿ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದವಿ ಮತ್ತು ಗೋಲ್ಡ್ ಮೇಡಲ್ ಪ್ರದಾನ ಮಾಡಿದರು. ನಂತರ ಆರು ಮಂದಿ ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಸಂಗೀತ ಮತ್ತು ಕಲೆ ವಿಭಾಗದಲ್ಲಿ ಸಾಧನೆ ಮಾಡಿದ ಡಾ ಆರ್ ಕೆ ಪದ್ಮನಾಭ, ಕ್ರೀಡೆ ಮತ್ತು ದಾರ್ಢ್ಯತೆ ವಿಭಾಗದಲ್ಲಿ ಸಾಧನೆ ಮಾಡಿದ ಪುಲ್ಲೆಲ ಗೋಪಿಚಂದ್, ಆರೋಗ್ಯ ವಿಭಾಗದಲ್ಲಿ ಸಾಧನೆ ಮಾಡಿದ ಡಾ. ಪ್ರತಿಮಾ ಮೂರ್ತಿ, ಶಿಕ್ಷಣ ವಿಭಾಗದಲ್ಲಿ ಸಾಧನೆ ಮಾಡಿದ ಪ್ರೊ. ವಿಜಯ್ ಶಂಕರ್ ಶುಕ್ಲಾ, ಸಮಾಜ ಸೇವೆ ವಿಭಾಗದಲ್ಲಿ ಸಾಧನೆ ಮಾಡಿದ ಪದ್ಮಶ್ರೀ ಪುರಸ್ಕೃತ ಶ್ರೀಮತಿ ತುಳಸಿ ಗೌಡ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ