Tumakuru; ಅಕ್ಕಿ ಕೊಡಲಾಗದೆ ಪ್ರಧಾನಿ ಮೋದಿಯವರನ್ನು ದೂಷಿಸುವ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು: ಜೆಸಿ ಮಾಧುಸ್ವಾಮಿ
ನೀವು ಜನರಿಗೆ ಗ್ಯಾರಂಟಿ ನೀಡಿ, ನಾನು ಅಕ್ಕಿ ಪೂರೈಸುತ್ತೇನೆ ಅಂತ ಪ್ರಧಾನಿ ಹೇಳಿದ್ರಾ ಅಂತ ಮಾಧುಸ್ವಾಮಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯರನ್ನು ತರಾಟೆಗೆ ತೆಗೆದುಕೊಂಡರು.
ತುಮಕೂರು: ವಿಧಾನ ಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲು ಅನುಭವಿಸಿದ ಬಳಿಕ ನೇಪಥ್ಯಕ್ಕೆ ಸರಿದವರಂತಿದ್ದ ಮಾಜಿ ಕಾನೂನು ಸಚಿವ ಜೆಸಿ ಮಾಧುಸ್ವಾಮಿ (JC Madhu Swamy) ಇಂದು ಸಾರ್ವಜನಿಕವಾಗಿ ಕಾಣಿಸಿಕೊಂಡು ಚಿಕ್ಕನಾಯಕನಹಳ್ಳಿಯಲ್ಲಿ ಪಕ್ಷದ ಕಾರ್ಯಕರ್ತರ ಸಬೆಯನ್ನುದ್ದೇಶಿಸಿ ಮಾತಾಡಿದರು. ಚುನಾವಣೆ ಸಂದರ್ಭದಲ್ಲಿ 10 ಕೆಜಿ ಅಕ್ಕಿ ನೀಡುವ ಭರವಸೆ ನೀಡಿದ್ದ ಕಾಂಗ್ರೆಸ್, ಅಕ್ಕಿ ಹೊಂದಿಸಲಾಗದೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ಮೇಲೆ ಗೂಬೆ ಕೂರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಧುಸ್ವಾಮಿ ಹೇಳಿದರು. ಕೇಂದ್ರ ಸರ್ಕಾರದ ಪ್ರತಿ ತಿಂಗಳು ನೀಡುತ್ತಿರುವ 5 ಕೆಜಿ ಗೂ ಮಿಗಿಲಾಗಿ ಅಕ್ಕಿಗೆ ಕೊಡಲು ಸಾಧ್ಯವಿದ್ದರೆ ತಮ್ಮ ಸರ್ಕಾರವೇ ಹತ್ತ್ತತ್ತು ಕೆಜಿ ನೀಡುತ್ತಿತ್ತು ಎಂದ ಮಾಧುಸ್ವಾಮಿ, ಕಾಂಗ್ರೆಸ್ ಸರ್ಕಾರ ಯಾವ ಆಧಾರದ ಮೇಲೆ ಪ್ರಧಾನಿ ಮೋದಿಯನ್ನು ದೂಷಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು. ನೀವು ಜನರಿಗೆ ಗ್ಯಾರಂಟಿ ನೀಡಿ, ನಾನು ಅಕ್ಕಿ ಪೂರೈಸುತ್ತೇನೆ ಅಂತ ಪ್ರಧಾನಿ ಹೇಳಿದ್ರಾ ಅಂತ ಮಾಧುಸ್ವಾಮಿ ಡಿಕೆ ಶಿವಕುಮಾರ್ (DK Shivakumar) ಮತ್ತು ಸಿದ್ದರಾಮಯ್ಯರನ್ನು (Siddaramaiah) ತರಾಟೆಗೆ ತೆಗೆದುಕೊಂಡರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ