ಜೋಡಿ ಸರಸದಲ್ಲಿದ್ದಾಗಲೇ ಹೋಗಿ ಮಹಿಳೆಯ ಮಂಚಕ್ಕೆ ಕರೆದು ಹೆಣವಾದ! ಚಿಕ್ಕಬಳ್ಳಾಪುರ ಯುವಕನ ಹತ್ಯೆ ರಹಸ್ಯ ಬೇಧಿಸಿದ ಪೊಲೀಸರು

ಜೂನ್ 4 ರಂದು ಚಿಕ್ಕಬಳ್ಳಾಪುರ ನಗರದ ಜನನಿಬಿಡ ಪ್ರದೇಶದಲ್ಲಿ ಕಲ್ಲಿನಿಂದ ಜಜ್ಜಿ, ಮರ್ಮಾಂಗಕ್ಕೆ ಒದ್ದು ಯುವಕ ಶ್ರೀಕಾಂತ್ ಎಂಬವರನ್ನು ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣ ಬೇಧಿಸಿರುವ ಪೊಲೀಸರು, ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂದಿಸಿದ್ದಾರೆ. ಆರೋಪಿಗಳ ವಿಚಾರಣೆ ವೇಳೆ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಆ ಕುರಿತು ವಿವರ ಇಲ್ಲಿದೆ.

ಜೋಡಿ ಸರಸದಲ್ಲಿದ್ದಾಗಲೇ ಹೋಗಿ ಮಹಿಳೆಯ ಮಂಚಕ್ಕೆ ಕರೆದು ಹೆಣವಾದ! ಚಿಕ್ಕಬಳ್ಳಾಪುರ ಯುವಕನ ಹತ್ಯೆ ರಹಸ್ಯ ಬೇಧಿಸಿದ ಪೊಲೀಸರು
ಚಿಕ್ಕಬಳ್ಳಾಪುರ ಪೊಲೀಸರು
Edited By:

Updated on: Jun 07, 2025 | 5:35 PM

ಚಿಕ್ಕಬಳ್ಳಾಪುರ, ಜೂನ್ 6: ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯ ಸುಮಾ ಆಗ್ರೋ ಸೀಡ್ಸ್ ಅಂಗಡಿ ಮುಂಭಾಗ ಜೂನ್ 4 ರಂದು ನಗರದ ಅಂಬೇಡ್ಕರ್ ಕಾಲೋನಿ ನಿವಾಸಿ ಶ್ರೀಕಾಂತ್ ಎಂಬವರನ್ನು ಕೊಲೆ (Murder Case) ಮಾಡಲಾಗಿತ್ತು. ಈಗ ಕೊಲೆ ಪ್ರಕರಣ ಬಯಲಿಗೆಳೆದಿರುವ ಚಿಕ್ಕಬಳ್ಳಾಪುರ (Chikkaballapur) ನಗರ ಠಾಣೆ ಪೋಲಿಸರು, ದೊಡ್ಡಬಳ್ಳಾಪುರ ಮೂಲದ ನರಸಿಂಹಮೂರ್ತಿ ಅಲಿಯಾಸ್ ಕೆಂಪ ಹಾಗೂ ಅವನ ಪ್ರಿಯತಮೆ ತಿಪ್ಪೇನಹಳ್ಳಿ ನಿವಾಸಿ ಲಕ್ಷ್ಮಿದೇವಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಿಜ ಏನೆಂಬುದು ತಿಳಿದುಬಂದಿದೆ.

ಶ್ರೀಕಾಂತ್ ಕೊಲೆ ನಡೆದ ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಾಗಳಿದ್ದು, ಓರ್ವ ಮಹಿಳೆ ಹಾಗೂ ಪುರುಷ ಬಂದು-ಹೋಗಿರುವ ದೃಶ್ಯಗಳು ಸೆರೆಯಾಗಿದ್ದವು. ಇದರ ಆಧಾರದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರು. ನಂತರ ಆರೋಪಿಗಳನ್ನು ಬಂಧಿಸಿದ್ದಾರೆ.

ಮಹಿಳೆಯ ಸರಸಕ್ಕೆ ಕರೆದು, ಬಲಾತ್ಕಾರಕ್ಕೆ ಯತ್ನಿಸಿದ್ದ ಶ್ರೀಕಾಂತ್

ಶ್ರೀಕಾಂತ್ ಜೂನ್ 3 ರಂದು ರಾತ್ರಿ, ಆರೋಪಿಗಳು ಮಲಗಿದ್ದ ಜಾಗಕ್ಕೆ ಹೋಗಿದ್ದ. ಅಷ್ಟೇ ಅಲ್ಲದೆ, ಲಕ್ಷ್ಮಿದೇವಿಗೆ ಹಣದ ಆಮಿಷವೊಡ್ಡಿ, ತನ್ನ ಜೊತೆ ಮಲಗಲು ಕರೆದಿದ್ದ ಎಂದು ಆರೋಪಿಸಲಾಗಿದೆ. ಆಗ ಆಕೆ ತನ್ನ ಜೊತೆ ಇದ್ದ ಕೆಂಪನನ್ನು ಎಚ್ಚರಗೋಳಿಸಿದ್ದಳು. ಆದರೂ ಮಾತು ಕೇಳದ ಶ್ರೀಕಾಂತ್ ಲಕ್ಷ್ಮಿದೇವಿ ಮೇಲೆ ಬಲಾತ್ಕಾರಕ್ಕೆ ಯತ್ನಿಸಿದ್ದಾನೆ. ಇದರಿಂದ ಕೆರಳಿದ ಆಕೆಯ ಪ್ರಿಯಕರ , ಶ್ರೀಕಾಂತ್ ಮೇಲೆ ಕಲ್ಲಿನಿಂದ ಜಜ್ಜಿ ಮರ್ಮಾಂಗಕ್ಕೆ ಒದ್ದು ಅಲ್ಲಿಂದ ಪರಾರಿಯಾಗಿದ್ದ.

ಇದನ್ನೂ ಓದಿ
ಕರ್ನಾಟಕದಾದ್ಯಂತ ಒಣಹವೆ, ಕೆಲವೇ ಕೆಲವು ಕಡೆ ಮಳೆ, ಜೂನ್ 10ರ ಬಳಿಕ ಹೆಚ್ಚಳ
ಎಡಿಜಿಪಿ ದರ್ಜೆ ಅಧಿಕಾರಿ ಸಸ್ಪೆಂಡ್, ಕರ್ನಾಟಕ ಪೊಲೀಸ್ ಇತಿಹಾಸದಲ್ಲೇ ಮೊದಲು
ಬೆಂಗಳೂರಿಗೆ ನೂತನ ಪೊಲೀಸ್​ ಕಮಿಷನರ್​ ಆಗಿ ಸೀಮಂತ್​ ಕುಮಾರ್ ಸಿಂಗ್ ನೇಮಕ
ಯುವಕನ ಭೀಕರ ಕೊಲೆ: ಕಲ್ಲಿನಿಂದ ಮುಖ ಜಜ್ಜಿ, ಮರ್ಮಾಂಗಕ್ಕೆ ಒದ್ದು ಹತ್ಯೆ

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಯುವಕನ ಭೀಕರ ಕೊಲೆ: ಕಲ್ಲಿನಿಂದ ಮುಖ ಜಜ್ಜಿ, ಮರ್ಮಾಂಗಕ್ಕೆ ಒದ್ದು ಹತ್ಯೆ

ಮನೆಯಲ್ಲಿ ಸುಂದರಿ ಪತ್ನಿ ಇದ್ದರೂ ಶ್ರೀಕಾಂತ್ ಎಂಬ ವ್ಯಕ್ತಿ, ಪತ್ನಿ ಜೊತೆ ಜಗಳ ಮಾಡಿಕೊಂಡು ಬೀದಿಗೆ ಬಂದಿದ್ದು, ಬೀದಿಯಲ್ಲಿ ಕಂಡ ಬೇರೊಬ್ಬ ಮಹಿಳೆಯ ಮೇಲೆ ಕಣ್ಣು ಹಾಕಿದ್ದಾನೆ. ಅದುವೇ ಆತನನ್ನು ಸಾವಿನ ಮನೆ ಸೇರುವಂತೆ ಮಾಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:32 am, Fri, 6 June 25