AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ಮನೆ ಕಾಂಪೌಂಡ್‌ಗೆ ಧ್ವಜಸ್ತಂಭ ನಿರ್ಮಿಸಿ ಹಸಿರು ಬಾವುಟ ಹಾರಾಟ

ಮಂಡ್ಯದ ಕೆರಗೋಡಿನ ಧ್ವಜ ವಿವಾದ ಇದೀಗ ರಾಜ್ಯದೆಲ್ಲೆಡೆ ಪಸರಿಸಿದೆ. ಎಲ್ಲೆಲ್ಲಿ ಹಸಿರು ಬಣ್ಣದ ಧ್ವಜಗಳು ಕಾಣಿಸುತ್ತಿವೆಯೋ ಅದನ್ನು ಹಿಂದೂ ಕಾರ್ಯಕರ್ತರು ಫೋಟೋ ತಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಇದರ ಮಧ್ಯೆ ಚಿಕ್ಕಬಳ್ಳಾಪುರದಲ್ಲಿ ಮನೆಯೊಂದರ ಕಾಂಪೌಂಡ್​ಗೆ ಧ್ವಜಸ್ತಂಭ ನಿರ್ಮಿಸಿ ಹಸಿರು ಬಾವುಟ ಹಾರಿಸಲಾಗಿದೆ.

ಚಿಕ್ಕಬಳ್ಳಾಪುರ: ಮನೆ ಕಾಂಪೌಂಡ್‌ಗೆ ಧ್ವಜಸ್ತಂಭ ನಿರ್ಮಿಸಿ ಹಸಿರು ಬಾವುಟ ಹಾರಾಟ
ಚಿಕ್ಕಬಳ್ಳಾಪುರದಲ್ಲಿ ಹಸಿರು ಬಾವುಟ ಹಾರಾಟ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jan 31, 2024 | 6:26 PM

Share

ಚಿಕ್ಕಬಳ್ಳಾಪುರ, ಜ.31: ಮಂಡ್ಯದ ಕೆರಗೋಡಿನ ಧ್ವಜ ವಿವಾದ ಇದೀಗ ರಾಜ್ಯದೆಲ್ಲೆಡೆ ಪಸರಿಸಿದೆ. ಎಲ್ಲೆಲ್ಲಿ ಹಸಿರು ಬಣ್ಣದ ಧ್ವಜಗಳು ಕಾಣಿಸುತ್ತಿವೆಯೋ ಅದನ್ನು ಹಿಂದೂ ಕಾರ್ಯಕರ್ತರು ಫೋಟೋ ತಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಅದರಂತೆ ಇದೀಗ ಚಿಕ್ಕಬಳ್ಳಾಪುರ(Chikkaballapur) ನಗರದ ದೊಡ್ಡಭಜನೆ ಮನೆ ರಸ್ತೆಯಲ್ಲಿ ಮನೆಯ ಕಾಂಪೌಂಡ್​ಗೆ ಧ್ವಜಸ್ತಂಭ ನಿರ್ಮಿಸಿ ಹಸಿರು ಬಾವುಟ ಹಾರಿಸಿದ ಘಟನೆ ನಡೆದಿದೆ.

ಬಾವುಟ ತೆರವುಗೊಳಿಸುವಂತೆ ಸ್ಥಳೀಯರಿಂದ ದೂರು

ಈ ಹಿನ್ನಲೆ ಹಸಿರು ಬಾವುಟ ತೆರವುಗೊಳಿಸುವಂತೆ ಸ್ಥಳೀಯರು ದೂರು ನೀಡಿದ್ದು. ಸ್ಥಳಕ್ಕೆ ನಗರಠಾಣೆ ಪೊಲೀಸರು ಹಾಗೂ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೂಡಲೇ ಬಾವುಟ ತೆರವುಗೊಳಿಸುವಂತೆ ಮನೆಯ ಮಾಲೀಕರಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನ ಮತ್ತೊಂದು ಕಡೆ ಹಸಿರು ಧ್ವಜ ಹಾರಾಟ, ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ

ಶಿವಾಜಿನಗರದಲ್ಲಿ ಹಾರಿಸಲಾದ ಹಸಿರು ಬಾವುಟ ತೆರವು ಮಾಡಿ ತ್ರಿವರ್ಣ ಧ್ವಜ ಹಾರಿಸಿದ್ದ ಪೊಲೀಸರು

ಮಂಡ್ಯದ ಘಟನೆ ಬೆನ್ನಲ್ಲೇ ಬೆಂಗಳೂರಿನ ಶಿವಾಜಿನಗರದ ಚಾಂದಿನಿ ಚೌಕ್​ನಲ್ಲಿ ಹಸಿರು ಬಾವುಟ ಹಾರಿಸಲಾಗಿದ್ದು, ಎಲ್ಲೆಡೆ ವೈರಲ್ ಆಗಿತ್ತು. ಇದಕ್ಕೆ ವಿಕಾಸ್ ವಿಕ್ಕಿ ಎನ್ನುವರು  ‘ಹಸಿರು ಬಾವುಟ ತೆಗೆಸುವ ತಾಕತ್ ನಿಮಗೆ ಇಲ್ಲವಾ ಎಂದು  ಟ್ವೀಟ್‌ ಮಾಡಿ ಸವಾಲು ಹಾಕಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸರು, ಬಿಬಿಎಂಪಿ ಧ್ವಜಸ್ತಂಭದಲ್ಲಿದ್ದ ಹಸಿರು ಬಾವುಟವನ್ನು ತೆರವು ಮಾಡಿ ತ್ರಿವರ್ಣ ಧ್ವಜ ಹಾರಿಸಿದ್ದರು.

ಇದಾದ ಬೆನ್ನಲ್ಲೇ ಇದೀಗ ಚಿಕ್ಕಬಳ್ಳಾಪುರದಲ್ಲಿ ಇಂತಹ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದು, ಮನೆಯ ಮಾಲೀಕರಿಗೆ ತಕ್ಷಣವೇ ಬಾವುಟವನ್ನು ತೆರವುಗೊಳಿಸಲು ಸೂಚಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ