ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ(Gudibande) ತಾಲೂಕು ಬೀಜಗಾನಹಳ್ಳಿ ಕಸ್ ಬಳಿ ಕಸ್ತೂರಿಬಾ ವಸತಿ ಶಾಲೆಯಿದೆ. ರಾಷ್ಟ್ರೀಯ ಹೆದ್ದಾರಿ 44ಕ್ಕೆ ಹೊಂದಿಕೊಂಡಿರುವ ಈ ವಸತಿ ಶಾಲೆ(School), ವಿದ್ಯಾಭ್ಯಾಸಕ್ಕೆ ಹೆಸರುವಾಸಿಯಾಗುವುದರ ಬದಲು, ಅನೈತಿಕ ಚಟುವಟಿಕೆ, ಅವ್ಯವಹಾರ, ಮೂಲಭೂತ ಸೌಕರ್ಯಗಳ ಕೊರತೆ ಸೇರಿ ಪುಂಡ ಪೊಕರಿಗಳ ಹಾವಳಿಗೆ ಕುಖ್ಯಾತಿಯಾಗಿದೆ. ಕೆಲವು ದಿನಗಳ ಹಿಂದೆ ಕೆಲವು ಯುವಕರು ಇಲ್ಲಿರುವ ಲೇಡಿಸ್ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯ ರಾಸಲೀಲೆ ಮಾಡಿರುವ ವಿಡಿಯೊಗಳು ಹರಿದಾಡಿ, ಪೋಷಕರಲ್ಲಿ ದೊಡ್ಡ ಆತಂಕ ಹುಟ್ಟು ಹಾಕುವಂತೆ ಮಾಡಿತ್ತು. ಆದರೂ ಕೂಡ ಕಸ್ತೂರಿಬಾ ವಸತಿ ಶಾಲೆಯಲ್ಲಿ ಯಾವುದೇ ಸಮಸ್ಯೆ ಬಗೆಹರಿದಿಲ್ಲ. ಇದರಿಂದ ಸ್ಥಳೀಯರು, ಶಿಕ್ಷಣ ಇಲಾಖೆ ಅಧಿಕಾರಿಗಳು, ಶಾಲೆಯ ಶಿಕ್ಷಕರು ಹಾಗೂ ವಾರ್ಡನ್ ವಿರುದ್ದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಕಸ್ತೂರಿಬಾ ವಸತಿ ಶಾಲೆ ನೇರವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಕರು ವಾರ್ಡನ್ಗಳು ರಾತ್ರಿಯಾದರೆ, ವಸತಿ ಶಾಲೆಯಲ್ಲಿ ಇರಲ್ಲ. ಶಾಲೆ ಹಾಗೂ ಹಾಸ್ಟೆಲ್ ಸುತ್ತ ಸ್ಮಶಾನ, ಅರಣ್ಯ ಇದೆ. ಸೂಕ್ತ ಕಂಪೌಂಡ್ ವ್ಯವಸ್ಥೆಯಿಲ್ಲ. ಯಾರು ಬೇಕಾದರೂ ಬರಬಹುದು. ಇಲ್ಲಿ ಹೇಳುವವರು, ಕೇಳುವವರು ಯಾರು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಶಾಲೆಯ ಮುಖ್ಯಶಿಕ್ಷಕಿ ಮಂಜುಳಾ ಅವರನ್ನು ಕೇಳಿದರೆ, ಎಲ್ಲವೂ ಸರಿಯಾಗಿಯೇ ಇದೆ ಎನ್ನುತ್ತಿದ್ದಾರೆ.
ಒಟ್ಟಿನಲ್ಲಿ ಕಡು ಬಡವರ ಮಕ್ಕಳ ವಿದ್ಯಾಬ್ಯಾಸಕ್ಕೆ ಅನುಕೂಲವಾಗಲಿ ಎಂದು ರಾಜ್ಯ ಸರ್ಕಾರ ಸರ್ವ ಶಿಕ್ಷಣ ಅಭಿಯಾನದಡಿ ನೇರವಾಗಿ ವಸತಿ ಶಾಲೆ ಆರಂಭಿಸಿದರೆ. ನಿಲಯ ಪಾಲಕರು, ಶಿಕ್ಷಕರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಲಕ್ಷ್ಯದಿಂದ ಪ್ರತಿಷ್ಠಿತ ಸರ್ಕಾರಿ ಕಸ್ತೂರಿಬಾ ವಸತಿ ಶಾಲೆ ಬೇರೆ ಬೇರೆ ಕಾರಣಗಳಿಗೆ ಕುಖ್ಯಾತಿಯಾಗುತ್ತಿರುವುದು ಮಾತ್ರ ವಿಪರ್ಯಾಸವಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ