ನಗರಸಭೆ ನಿರ್ಲಕ್ಷ್ಯದಿಂದ ಅನೈತಿಕ ಚಟುವಟಿಕೆಗಳ ತಾಣವಾದ ರಾಮನಗರದ ಹೃದಯಭಾಗದಲ್ಲಿನ ಮಹಾತ್ಮಗಾಂಧಿ ಪಾರ್ಕ್​​

ರಾಮನಗರದ ಹೃದಯಭಾಗದಲ್ಲಿರೋ ಏಕೈಕ ಉದ್ಯಾನವನ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೂಕ್ತ ನಿರ್ವಾಹಣೆ ಇಲ್ಲದೇ ಅನೈತಿಕ ಚಟುವಟಿಕೆ ತಾಣವಾಗಿದೆ.

ನಗರಸಭೆ ನಿರ್ಲಕ್ಷ್ಯದಿಂದ ಅನೈತಿಕ ಚಟುವಟಿಕೆಗಳ ತಾಣವಾದ ರಾಮನಗರದ ಹೃದಯಭಾಗದಲ್ಲಿನ ಮಹಾತ್ಮಗಾಂಧಿ ಪಾರ್ಕ್​​
ರಾಮನಗರ ಮಹಾತ್ಮಗಾಂಧಿ ಉದ್ಯಾನವನ
Follow us
TV9 Web
| Updated By: ವಿವೇಕ ಬಿರಾದಾರ

Updated on: Dec 02, 2022 | 9:46 PM

ರಾಮನಗರ: ರೇಷ್ಮೆನಗರಿ ರಾಮನಗರದ ಹೃದಯಭಾಗದಲ್ಲಿರೋ ಏಕೈಕ ಉದ್ಯಾನವನ ಅದು. ನಗರಕ್ಕೆ ವಿವಿಧ ಕೆಲಸಗಳ ನಿಮಿತ್ತ ಬರುವ ಜನರಿಗೆ ವಿಶ್ರಾಂತಿ ತಾಣ. ಆದರೆ, ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೂಕ್ತ ನಿರ್ವಾಹಣೆ ಇಲ್ಲದೇ ಆ ಪಾರ್ಕ್ ಅನಾಥವಾಗಿದೆ. ವಾಯುವಿಹಾರಿಗಳಿಗೆ ಅನುಕೂಲವಾಗಲಿ ಅಂತ ಲಕ್ಷಾಂತರ ರೂ ಖರ್ಚು ಮಾಡಿ ನಿರ್ಮಾಣ ಮಾಡಿರೋ ಜಿಮ್ ಯಂತ್ರಗಳು ತುಕ್ಕು ಹಿಡಿದು ಕಳಚಿ ಬಿದ್ದಿವೆ. ಮತ್ತೊಂದೆಡೆ ಪಾರ್ಕ್ ಸೋಂಬೆರಿಗಳ ಅಡ್ಡವಾಗಿದೆ. ಇಷ್ಟೆಲ್ಲ ಇದ್ದರು ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ.

ರಾಮನಗರದ ಕೋರ್ಟ್ ಹಾಗೂ ತಾಲೂಕು ಕಚೇರಿ ಪಕ್ಕದಲ್ಲೇ ನಗರದ ಹೃದಯ ಭಾಗದಲ್ಲಿರುವ ಮಹಾತ್ಮಗಾಂಧಿ ಉದ್ಯಾನವನ ಸೂಕ್ತ ನಿರ್ವಹಣೆ ಇಲ್ಲದೇ ಅನಾಥವಾಗಿದೆ. ಅವ್ಯವಸ್ಥೆಗಳೇ ತುಂಬಿ ತುಳುಕುತ್ತಿರುವ ಈ ಉದ್ಯಾನವನದಲ್ಲಿ ಮಧ್ಯಾಹ್ನದ ವೇಳೆ ಕಾಲೇಜು ವಿದ್ಯಾರ್ಥಿಗಳ ಅನೈತಿಕ ತಾಣವಾದರೇ, ಸಂಜೆಯಾಗುತ್ತಿದ್ದಂತೆ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ. ಇದರಿಂದಾಗಿ ಕೆಲವು ವಿಶ್ರಾಂತಿ ಪಡೆಯಲು ಬರುವ ಜನರು ಮುಜುಗರ ಪಡುವಂತಾಗಿದೆ. ಇಷ್ಟೇ ಅಲ್ಲದೆ ಸಂಬಂಧಪಟ್ಟ ಅಧಿಕಾರಿಗಳು ಪಾರ್ಕ್ ನಿರ್ವಹಣೆ ಸಹ ಮಾಡಿಲ್ಲ. ಇನ್ನು ಕೆಲವೇ ದಿನಗಳ ಕೆಳಗೆ ಸ್ಥಾಪನೆ ಮಾಡಲಾದ ಗಾಂಧೀಜಿ ಪ್ರತಿಮೆ ಕೂಡ ನಾಪತ್ತೆಯಾಗಿದೆ. ಇಷ್ಟೆಲ್ಲಾದರು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ಪ್ರತಿನಿತ್ಯ ನೂರಾರು ಜನರು ನ್ಯಾಯಾಲಯ ಹಾಗೂ ತಾಲೂಕು ಕಚೇರಿಗೆ ಬರುವ ಜನರು ಹೆಚ್ಚಿರುತ್ತಾರೆ. ಕೆಲಸ ವಿಳಂಬವಾದರೆ, ವಿಶ್ರಾಂತಿ ಪಡೆಯಲು ಈ ಮಹಾತ್ಮಗಾಂಧಿ ಉದ್ಯಾನವನಕ್ಕೆ ಬಂದು ಕೂರುತ್ತಾರೆ. ಇನ್ನು ಮಳೆ ಬಂದಾಗ ಪಾರ್ಕ್ ಹಚ್ಚಹಸಿರಿನಿಂದ ಕೂಡಿರುತ್ತದೆ. ಮಳೆ ಬಾರದಿದ್ದರೇ ನೀರು ಹಾಕುವವರೇ ಇಲ್ಲದೇ ಉದ್ಯಾನವನ ಸಪ್ಪೆಯಾಗಿರುತ್ತದೆ.

ಇನ್ನು ವಾಯುವಿಹಾರಿಗಳಿಗೆ ಅನುಕೂಲವಾಗಲಿ ಎಂದು ಲಕ್ಷಾಂತರ ರೂ ಖರ್ಚು ಮಾಡಿ ಜಿಮ್ ಯಂತ್ರಗಳನ್ನ ಅಳವಡಿಸಲಾಗಿದೆ. ಆದರೆ ಇವು ಸಹ ಬಳಕೆಗೆ ಬಾರದಂತೆ ಆಗಿವೆ. ಸೈಕಲ್, ಫನ್ವಾಕರ್, ಶೋಲ್ಡರ್, ಪ್ರೆಸ್ ಸೇರಿದಂತೆ ವ್ಯಾಯಾಮ ಸಾಧನಗಳು ತುಕ್ಕು ಹಿಡಿದಿವೆ. ಕೆಲವು ಕಳಚಿ ಬಿದ್ದಿವೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಒಟ್ಟಾರೆಯಾಗಿ ನಿರ್ವಹಣೆ ಇಲ್ಲದೇ ಅನಾಥವಾಗಿರುವ ಮಹಾತ್ಮಗಾಂಧಿ ಉದ್ಯಾನವನದ ನಿರ್ವಾಹಣೆ ಮಾಡಬೇಕಿದೆ. ಇನ್ನಾದರು ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಿದೆ.

ಪ್ರಶಾಂತ್ ಹುಲಿಕೆರೆ, ಟಿವಿ9 ರಾಮನಗರ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್