10 ವರ್ಷ ಹಿಂದೆಯೇ ಶಿಕ್ಷಕರಿಗಾಗಿ ಹೈಟೆಕ್ ಗುರು ಭವನ ನಿರ್ಮಿಸಿದರು! ಆದರೆ ಅಲ್ಲಿ ಯಾರೂ ವಾಸಿಸುತ್ತಿಲ್ಲ, ಶಿಕ್ಷಣಾಧಿಕಾರಿಗಳು ಮಾತ್ರ ನಿದ್ರಿಸುತ್ತಿದ್ದಾರೆ!

Bidar: ಜಿಲ್ಲೆಯ ವಿವಿಧ ಕಡೆಗಳಲ್ಲಿ ಸುಮಾರು 9 ಸುಸಜ್ಜಿತ ಗುರುಭವನ ಕಟ್ಟಡಗಳನ್ನ ಕಟ್ಟಲಾಗಿದೆ. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಕಟ್ಟಿದ ಕಟ್ಟಡಗಳು ಬಳಕೆಯಾಗುತ್ತಿಲ್ಲ ಅನ್ನೋ ನೋವು ಇಲ್ಲಿನ ಜನರನ್ನ ಕಾಡುತ್ತಿದೆ.

10 ವರ್ಷ ಹಿಂದೆಯೇ ಶಿಕ್ಷಕರಿಗಾಗಿ ಹೈಟೆಕ್ ಗುರು ಭವನ ನಿರ್ಮಿಸಿದರು! ಆದರೆ ಅಲ್ಲಿ ಯಾರೂ ವಾಸಿಸುತ್ತಿಲ್ಲ, ಶಿಕ್ಷಣಾಧಿಕಾರಿಗಳು ಮಾತ್ರ ನಿದ್ರಿಸುತ್ತಿದ್ದಾರೆ!
ಶಿಕ್ಷಕರಿಗಾಗಿ 10 ವರ್ಷ ಹಿಂದೆಯೇ ಹೈಟೆಕ್ ಗುರು ಭವನ ನಿರ್ಮಿಸಿದರು! ಆದರೆ ಇಲ್ಲಿ ಯಾರೂ ವಾಸಿಸುತ್ತಿಲ್ಲ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 13, 2023 | 12:08 PM

ಶಿಕ್ಷಕರ ವಸತಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹೈಟೆಕ್ ಮಾದರಿಯ ಗುರು ಭವನ (Guru Bhavana) ಕಟ್ಟಲಾಗಿದೆ. ಒಂದು ಕಟ್ಟಡದಲ್ಲಿ 12 ಕುಟುಂಬಗಳು ವಾಸಿಸಲು ಅನುಕೂಲವಾಗುವ ದೃಷ್ಟಿಯಿಂದ ಬಹುಮಹಡಿ ಕಟ್ಟಡ ಕಟ್ಟಲಾಗಿದೆ. ಈ ಕಟ್ಟಡಗಳನ್ನ ನಿರ್ಮಿಸಿ ಒಂದು ದಶಕ ಕಳೆದರೂ ಇಲ್ಲಿ ಶಿಕ್ಷಕರು ವಾಸಿಸುತ್ತಿಲ್ಲ. ಹೀಗಾಗಿ ಇಡೀ ಕಟ್ಟಡಗಳು ಹಾಳುಬಿದ್ದ ಕೊಂಪೆಯಂತಾಗಿದ್ದು (Negligence), ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿವೆ. ದನದ ಕೊಟ್ಟಿಗೆಯಾಗಿದೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಕಟ್ಟಡಗಳು… ಶಿಕ್ಷಣ ಇಲಾಖೆಯ ಬೇಜವಾಬ್ದಾರಿಯಿಂದ ಶಿಕ್ಷಕರು (Teachers) ಹೈರಾಣರಾಗಿದ್ದಾರೆ. ಹೌದು ಹಲ್ಲಿದ್ದೋರಿಗೆ ಕಡಲೆ ಇಲ್ಲಾ, ಕಡಲೆ ಇದ್ದೋರಿಗೆ ಹಲ್ಲಿಲ್ಲ ಅನ್ನೋ ಮಾತು ಬೀದರ್ ಜಿಲ್ಲೆಗೆ (Bidar) ಸರಿಯಾಗಿ ಅನ್ವಯಿಸುತ್ತೆ. ಗ್ರಾಮೀಣ ಭಾಗದಲ್ಲಿ ಪಾಠ ಮಾಡೋ ಶಿಕ್ಷಕರಿಗೆ (Education) ಅನುಕೂಲವಾಗಲಿ ಅಂತಾ ಅದೇ ಗ್ರಾಮಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗುರುಭವನಗಳನ್ನ ಕಟ್ಟಲಾಗಿದೆ.

ಒಂದೇ ಕಟ್ಟಡದಲ್ಲಿ 12 ಕುಟುಂಬಗಳ ವಾಸ ಮಾಡಲಿಕ್ಕೆ ಅನೂಕೂಲವಾಗಲಿ ಅಂತಾ ಸುಸಜ್ಜಿತವಾಗಿ ಪ್ಲಾನ್ ಮಾಡಿ ಕಟ್ಟಡಗಳನ್ನ ಕಟ್ಟಿದ್ದರೂ ಕೂಡಾ ಅವುಗಳನ್ನ ಉದ್ಘಾಟನೆ ಮಾಡಿ ಶಿಕ್ಷಕರ ವಸತಿಗೆ ಅವಕಾಶ ಕಲ್ಪಿಸಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆಯ ಬೇಜವಾಬ್ದಾರಿಯಿಂದ 3 ಕೋಟಿ 60 ಲಕ್ಷ ರೂಪಾಯಿ ಖರ್ಚು ಮಾಡಿ ಕಟ್ಟಿದ ಕಟ್ಟಡಗಳು ಜೂಜುಕೋರರ ಅಡ್ಡೆಯಾಗಿ, ಅನೈತಿಕ ಚಟುವಟಿಕೆ ತಾಣವಾಗಿ ಈ ಕಟ್ಟಡಗಳು ಬಳಕೆಯಾಗುತ್ತಿವೆ. ಲಕ್ಷ ಲಕ್ಷ ಸುರಿದು ಕಟ್ಟಿಸಿದ ಕಟ್ಟಡ ಬಳಕೆ ಮಾಡದಿದ್ದರೆ ಏನು ಪ್ರಯೋಜನ ಎಂದು ಇಲ್ಲಿನ ಜನರು ಪ್ರಶ್ನಿಸುತ್ತಿದ್ದಾರೆ ಕೂಡಲೇ ಕಟ್ಟಡಗಳನ್ನ ಉದ್ಘಾಟನೆ ಮಾಡಿ ಶಿಕ್ಷಕರ ವಸತಿಗೆ ಅನೂಕೂಲ ಕಲ್ಪಿಸಿ ಎಂದು ಇಲ್ಲನ ಜನರು ಸರಕಾರಕ್ಕೆ ಒತ್ತಾಯಿಸುತ್ತಿದ್ದಾರೆ.

ಜಿಲ್ಲೆಯ ವಿವಿಧ ಕಡೆಗಳಲ್ಲಿ ಸರಿ ಸುಮಾರು 9 ಸುಸಜ್ಜಿತ ಗುರುಭವನ ಕಟ್ಟಡಗಳನ್ನ ಕಟ್ಟಲಾಗಿದೆ. ಪ್ರತಿಯೊಂದು ಕಟ್ಟಡಕ್ಕೂ 33.42 ಲಕ್ಷ ರೂಪಾಯಿ ಹಣವನ್ನ ವೆಚ್ಚ ಮಾಡಿ ಎಲ್ಲಾ ರೀತಿಯ ಅನುಕೂಲವಿರುವಂತೆ ಪ್ಲಾನ್ ರೂಪಿಸಿ ಕಟ್ಟಡಗಳನ್ನ ಕಟ್ಟಲಾಗಿದೆ. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಕಟ್ಟಿದ ಕಟ್ಟಡಗಳು ಮಾತ್ರ ಬಳಕೆಯಾಗುತ್ತಿಲ್ಲ ಅನ್ನೋ ನೋವು ಇಲ್ಲಿನ ಜನರನ್ನ ಕಾಡುತ್ತಿದೆ.

ಜೊತೆಗೆ ಕಟ್ಟಡಗಳು ಕಟ್ಟಿ ಐದು ವರ್ಷ ಕಳೆದಿದ್ದರಿಂದ ಕಟ್ಟಿದ ಕಟ್ಟಡಗಳು ಸಂಪೂರ್ಣವಾಗಿ ಹಾಳಾಗುವ ಹಂತ ತಲುಪಿವೆ. ಕಟ್ಟಡಕ್ಕೆ ಹಾಕಿದ ಕಿಟಕಿ ಗಾಜುಗಳನ್ನ ಕಿಡಿಗೇಡಿಗಳು ಒಡೆದು ಹಾಕಿದ್ದು ವಸತಿ ಗೃಹದ ಬಾಗಿಲುಗಳನ್ನ ಕಳ್ಳರು ಕಿತ್ತುಕೊಂಡು ಹೋಗಿದ್ದಾರೆ. ರಾತ್ರಿಯಾದರೆ ಸಾಕು ಜೂಜುಕೋರರು ಕಟ್ಟಡದಲ್ಲಿ ಅಕ್ರಮವಾಗಿ ನುಸುಳಿ ಜೂಜಾಡುತ್ತಿದ್ದಾರೆ.

ಕೆಲವು ಕಡೆಗಳಲ್ಲಿ ಜನರು ದನಗಳನ್ನ ಮೇಕೆಗಳನ್ನ ತಂದು ಕಟ್ಟುತ್ತಿದ್ದಿದ್ದಾರೆ. ಇಲ್ಲಿನ ಸಮಸ್ಯೆಯ ಬಗ್ಗೆ ಸರಕಾರಿ ಅಧಿಕಾರಿಗಳಿಗೆ ಗೊತ್ತಿದ್ದರೂ ಅವರು ಕೂಡಾ ಗೊತ್ತಿಲ್ಲದವರಂತೆ ವರ್ತನೆ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ಬೀದರ್ ಡಿಡಿಪಿಐ ಅವರನ್ನ ಕೇಳಿದರೇ ವಿದ್ಯುತ್ ಹಾಗೂ ನೀರಿನ ಸಮಸ್ಯೆಯಿಂದ ಇನ್ನೂ ಕಟ್ಟಡಗಳನ್ನ ಶಿಕ್ಷಕರ ವಸತಿಗೆ ಕೊಟ್ಟಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಶೀಘ್ರದಲ್ಲಿ ಶಿಕ್ಷಕರ ವಸತಿಗೆ ಅನೂಕೂಲ ಕಲ್ಪಿಸಲಾಗುವುದೆಂದು ಎನ್ನುತ್ತಾರೆ ಸಲೀಂ ಪಾಶಾ, ಡಿಡಿಪಿಐ, ಬೀದರ್.

ವರದಿ: ಸುರೇಶ್ ನಾಯಕ್, ಟಿವಿ 9, ಬೀದರ್ 

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್