AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರದಲ್ಲಿ ಭಕ್ತರನ್ನು ಸೆಳೆಯುತ್ತಿದೆ ಗೋಲ್ಡನ್ ಶಿರಡಿ ಸಾಯಿಬಾಬಾ!

ಮಹಾರಾಷ್ಟ್ರದಲ್ಲಿರುವ ಶಿರಡಿ ಸಾಯಿ ಬಾಬಾರನ್ನು ನೋಡಲು ಹೋಗಬೇಕು ಅಂದ್ರೆ ದಿನಗಟ್ಟಲೆ ಪ್ರಯಾಣ ಮಾಡಬೇಕು. ಆದ್ರೆ, ಅದೇ ಮಾದರಿಯಲ್ಲಿ ಶಿರಡಿ ಸಾಯಿ ಬಾಬಾರ ದೇವಸ್ಥಾನ ನಿರ್ಮಿಸಿ, ಬಾಬಾರ ಒಳಾಂಗಣ ಗೋಪುರಕ್ಕೆ ಬರೋಬ್ಬರಿ ಎಂಟುವರಿ ಕೆ.ಜಿ.ಯ ಚಿನ್ನದ ಲೇಪನ ಮಾಡಿಸಿದ್ದು, ಬಾಬಾರ ಭಕ್ತರನ್ನು ಸೇಳೆಯುತ್ತಿದೆ. ಅಷ್ಟಕ್ಕೂ ಅದೇಲ್ಲಿ ಅಂತೀರಾ? ಈ ಸ್ಟೋರಿ ಓದಿ.

ಚಿಕ್ಕಬಳ್ಳಾಪುರದಲ್ಲಿ ಭಕ್ತರನ್ನು ಸೆಳೆಯುತ್ತಿದೆ ಗೋಲ್ಡನ್ ಶಿರಡಿ ಸಾಯಿಬಾಬಾ!
ಚಿಕ್ಕಬಳ್ಳಾಪುರದಲ್ಲಿ ಭಕ್ತರನ್ನು ಸೆಳೆಯುತ್ತಿದೆ ಗೋಲ್ಡನ್ ಶಿರಡಿ ಸಾಯಿಬಾಬಾ!
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on:Jul 20, 2024 | 6:54 PM

Share

ಚಿಕ್ಕಬಳ್ಳಾಪುರ, ಜು.20: ಚಿನ್ನದ ಗೋಪುರದ ಮಧ್ಯೆ ಪ್ರತಿಷ್ಠಾಪನೆಯಾಗಿರುವ ಅಮೃತ ಶಿಲೆಯ ಶಿರಡಿ ಸಾಯಿ ಬಾಬಾ(Shirdi Sai Baba)ರ ವಿಗ್ರಹವನ್ನು ನೋಡುತ್ತಿದ್ದರೆ ಎಂಥವರಿಗೂ ಭಕ್ತಿ ಭಾವ ಉಕ್ಕಿ ಬರುತ್ತದೆ. ಕೆಲಕಾಲ ಕಣ್ಮುಚ್ಚಿ ಧ್ಯಾನಸ್ಥರಾಗಿ ಬೀಡುತ್ತಾರೆ. ಹೌದು, ಚಿಕ್ಕಬಳ್ಳಾಪುರ(Chikkaballapur) ತಾಲೂಕು ಹಾರೋಬಂಡೆ ಗ್ರಾಮದಲ್ಲಿ, ಶಿರಡಿ ಸಾಯಿ ಬಾಬಾರ ಭಕ್ತರೊಬ್ಬರು, ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ್ದು, ದೇವಸ್ಥಾನದ ಗರ್ಭಗುಡಿಯಲ್ಲಿ ಬರೋಬ್ಬರಿ ಎಂಟುವರೆ ಕೆ.ಜಿ.ಯ ಚಿನ್ನದ ಲೇಪನ ಮಾಡಿಸಿ ಭಕ್ತಿ ಭಾವ ಮೆರೆದಿದ್ದಾರೆ.

ಶಿರಡಿ ಸಾಯಿ ಬಾಬಾರನ್ನು ನೋಡಬೇಕು ಎಂದು ಚಿಕ್ಕಬಳ್ಳಾಪುರದಿಂದ ಶಿರಡಿಗೆ ಹೋಗಿ ಬರಬೇಕು ಅಂದರೆ ಕನಿಷ್ಠ ಮೂರು ದಿನಗಳಾದ್ರೂ ಬೇಕು. ಜೊತೆಗೆ ದರ್ಶನಕ್ಕಾಗಿ ಪ್ರವಾಸ, ಪ್ರಯಾಸದ ಮಧ್ಯೆ ಹರಸಾಹಸ ಪಡಬೇಕು. ಇದೀಗ ಶಿರಡಿಯ ಬಾಬಾರ ಮಾದರಿಯಲ್ಲೆ ದೇವಸ್ಥಾನ ನಿರ್ಮಿಸಿ ಬಾಬಾರ ವಿಗ್ರಹವನ್ನು ಇಲ್ಲೆ ಪ್ರತಿಷ್ಠಾಪನೆ ಮಾಡಿದ್ರೆ ಹೇಗೆ ಎಂದುಕೊಂಡ ಉದ್ಯಮಿ ಜಿ.ಎಚ್.ನಾಗರಾಜ್, ಬಾಬಾ ದೇವಸ್ಥಾನ ನಿರ್ಮಾಣಕ್ಕೆ ಕೈ ಹಾಕಿ ಸೈ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರ: ಪಾಠ-ಪ್ರವಚನದ ಮಧ್ಯೆ ಶಿಕ್ಷಕರಿಗೊಂದು ಸ್ಪರ್ಧೆ; ಮುದ್ದೆ, ಬಾಳೆ ಹಣ್ಣು ತಿಂದು ಸೈ ಎನಿಸಿಕೊಂಡ ಗುರುಗಳು

ಇನ್ನು ನಾಳೆ(ಭಾನುವಾರ) ಗುರು ಪೂರ್ಣಮೆ ಹಿನ್ನಲೆ 20 ಸಾವಿರಕ್ಕೂ ಹೆಚ್ಚು ಜನ ಭಕ್ತರು ದೇವಸ್ಥಾನಕ್ಕೆ ಆಗಮಿಸುವ ನಿರೀಕ್ಷೆ ಇದೆ. ಬೆಳಿಗ್ಗೆಯಿಂದ ರಾತ್ರಿವರೆಗೂ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಶಿರಡಿಗೆ ಹೋಗಿ ಬಾಬಾ ದರ್ಶನ ಪಡೆಯದವರು, ಚಿಕ್ಕಬಳ್ಳಾಪುರದ ಹಾರೋಬಂಡೆ ಗ್ರಾಮಕ್ಕೆ ಆಗಮಿಸಿ ಶಿರಡಿಸಾಯಿ ಬಾಬಾರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:50 pm, Sat, 20 July 24