ಚಿಕ್ಕಬಳ್ಳಾಪುರ: ಪಾಠ-ಪ್ರವಚನದ ಮಧ್ಯೆ ಶಿಕ್ಷಕರಿಗೊಂದು ಸ್ಪರ್ಧೆ; ಮುದ್ದೆ, ಬಾಳೆ ಹಣ್ಣು ತಿಂದು ಸೈ ಎನಿಸಿಕೊಂಡ ಗುರುಗಳು

ಅವರು ಶಿಕ್ಷಕರು, ಪ್ರತಿದಿನ ಮಕ್ಕಳಿಗೆ ಪಾಠ ಪ್ರವಚನ ಮಾಡುವುದರಲ್ಲೇ ತಲ್ಲೀನರಾಗಿರುತ್ತಿದ್ದರು. ಆದ್ರೆ, ಅವರ ಸಂಸ್ಥೆಯ ಆಡಳಿತ ಮಂಡಳಿಯೊಂದು ಶಿಕ್ಷಕರಿಗಾಗಿ ಮುದ್ದೆ ಹಾಗೂ ಬಾಳೆ ಹಣ್ಣು ತಿನ್ನುವ ಸ್ಪರ್ಧೆ ಆಯೋಜಿಸಿತ್ತು. ಇದರಿಂದ ಶಿಕ್ಷಕರು, ವಿದ್ಯಾರ್ಥಿಗಳ ಮುಂದೆ ಮುಗಿಬಿದ್ದು ಮುದ್ದೆ ಹಾಗೂ ಬಾಳೆಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಭಾಗಿಯಾಗಿ ಸೈ ಎನಿಸಿಕೊಂಡರು. ಅಷ್ಟಕ್ಕೂ ಅದೆಲ್ಲಿ ಅಂತೀರಾ? ಈ ಸ್ಟೋರಿ ಓದಿ.

ಚಿಕ್ಕಬಳ್ಳಾಪುರ: ಪಾಠ-ಪ್ರವಚನದ ಮಧ್ಯೆ ಶಿಕ್ಷಕರಿಗೊಂದು ಸ್ಪರ್ಧೆ; ಮುದ್ದೆ, ಬಾಳೆ ಹಣ್ಣು ತಿಂದು ಸೈ ಎನಿಸಿಕೊಂಡ ಗುರುಗಳು
ಚಿಕ್ಕಬಳ್ಳಾಪುರದಲ್ಲಿ ; ಮುದ್ದೆ, ಬಾಳೆ ಹಣ್ಣು ತಿಂದು ಸೈ ಎನಿಸಿಕೊಂಡ ಶಿಕ್ಷಕರು
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 19, 2024 | 4:05 PM

ಚಿಕ್ಕಬಳ್ಳಾಪುರ, ಜು.19: ಪ್ರತಿದಿನ ಮಕ್ಕಳಿಗೆ ಪಾಠ-ಪ್ರವಚನ ಮಾಡುವುದರಲ್ಲೇ ತಲ್ಲೀನರಾಗಿರುತ್ತಿದ್ದ ಶಿಕ್ಷಕರಿಗೆ, ಅವರ ಸಂಸ್ಥೆಯ ಆಡಳಿತ ಮಂಡಳಿಯೊಂದು ಶಿಕ್ಷಕರಿ(Teachers)ಗಾಗಿಯೇ ಮುದ್ದೆ ಹಾಗೂ ಬಾಳೆ ಹಣ್ಣು ತಿನ್ನುವ ಸ್ಪರ್ಧೆಯನ್ನು ಚಿಕ್ಕಬಳ್ಳಾಪುರ(Chikkaballapur) ನಗರದ ಪಂಚಗಿರಿ ಬೋಧನಾ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿತ್ತು. ಇದರಿಂದ ಶಿಕ್ಷಕರು, ವಿದ್ಯಾರ್ಥಿಗಳ ಮುಂದೆ ಮುಗಿಬಿದ್ದು ಮುದ್ದೆ ಹಾಗೂ ಬಾಳೆಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಭಾಗಿಯಾಗಿ ಸೈ ಎನಿಸಿಕೊಂಡರು.

ಹೌದು, ಕೆ.ವಿ. ವೆಂಕಟಪತಪ್ಪ ಶಿಕ್ಷಣ ದತ್ತಿ ಹಾಗೂ ಟ್ರಸ್ಟ್ ಡೇ ಪ್ರಯುಕ್ತ ಆಡಳತಿ ಮಂಡಳಿ, ಶಿಕ್ಷಕರಿಗಾಗಿ ಮುದ್ದೆ ಹಾಗೂ ಬಾಳೆ ಹಣ್ಣು ತಿನ್ನುವ ಸ್ಪರ್ದೆ ಆಯೋಜಿಸಿತ್ತು. ಇದ್ರಿಂದ ಶಿಕ್ಷಕರು ವಿದ್ಯಾರ್ಥಿಗಳ ಮುಂದೆ ಮುಗಿಬಿದ್ದು ಗಬ ಗಬನೆ ಮುದ್ದೆ ತಿಂದು ಸೈ ಎನಿಸಿಕೊಂಡರು. ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಶಿಕ್ಷಕ ಶ್ರೀನಿವಾಸ್ ಎರಡು ಕೆಜಿ ತೂಕದ ಮುದ್ದೆ ತಿಂದು ಬಲೆ ಎನಿಸಿಕೊಂಡರು. ಇನ್ನು ಶಿಕ್ಷಕಿಯರಿಗಾಗಿ ಪಚ್ಚ ಬಾಳೆಹಣ್ಣುಗಳ ತಿನ್ನುವ ಸ್ಪರ್ದೆ ಆಯೋಜನೆ ಮಾಡಲಾಗಿತ್ತು.

ಇದನ್ನೂ ಓದಿ:ಕಾಲೇಜು ಹುಡುಗಿಯರ ಮನಸ್ಸು ಗೆದ್ದ ಬಲೂನ್‌ ಡೆನಿಮ್‌ ಫ್ರಾಕ್ ಡ್ರೆಸ್‌

ತಲಾ ಒಂದೂವರೆ ಕೆಜಿ ತೂಕದ ಬಾಳೆ ಹಣ್ಣುಗಳನ್ನ ಸ್ಪರ್ಧೆಯಲ್ಲಿ ತಿನ್ನಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಶಿಕ್ಷಕಿಯರು ನಾನು ಮೊದಲಾ, ನೀನು ಮೊದಲಾ ಎಂದು ಸ್ಪರ್ಧೆಗಿಳಿದು ಬಾಳೆ ಹಣ್ಣು ಸಿಪ್ಪೆ ತೆಗೆದು ಕ್ಷಣಾರ್ಧದಲ್ಲಿ ಗಬ ಗಬನೆ ಬಾಳೆ ಹಣ್ಣುಗಳನ್ನ ನುಂಗಿದ್ದು ವಿಶೇಷವಾಗಿತ್ತು. ಒಟ್ಟಾರೆ ಸಿಕ್ಕಿದ್ದೇ ಚಾನ್ಸ್ ಎಂದು ಶಿಕ್ಷಕರು ಕೆಲ ಹೊತ್ತು ಎಲ್ಲಾ ಮರೆತು, ಬಾಳೆ ಹಣ್ಣು ಹಾಗೂ ಮುದ್ದೆ ತಿನ್ನುವಲ್ಲಿ ಬ್ಯುಸಿಯಾಗಿದ್ದರು. ಇಂತಹ ಮನರಣಜನಾ ಚಟುವಟಿಕೆ ಕೇವಲ  ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ, ಶಿಕ್ಷಕರಿಗೂ ಏರ್ಪಡಿಸಿದ್ದು ವಿಶೇಷವಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್