ಗೌರಿಬಿದನೂರು: ವಾಹನ ಸಾಲ ವಸೂಲಾತಿಗೆ ಬಂದ ಹೆಚ್‍ಡಿಎಫ್‍ಸಿ ಏಜೆಂಟ್‍ಗೆ ಮಚ್ಚಿನಿಂದ ಹಲ್ಲೆಗೆ ಯತ್ನ!

| Updated By: ಸಾಧು ಶ್ರೀನಾಥ್​

Updated on: Mar 06, 2024 | 1:20 PM

ಫೈನಾನ್ಸ್ ಏಜೆಂಟ್ ಕೈಗೆ ಸಿಗದೇ ದಿಕ್ಕಾಪಾಲಾಗಿ ಓಡಿದ ಕಾರಣ ವ್ಯಘ್ರಗೊಂಡಿದ್ದ ಸಾಲಗಾರ ಶೇಖರ್ ಏಜೆಂಟ್‍ನ ಬೈಕ್‍ಗೆ ಮಚ್ಚು ಬೆಂಡಾಗುವ ಹಾಗೆ ಕುಟ್ಟಿಕುಟ್ಟಿ ಜಖಂಗೊಳಿಸಿದ್ದಾನೆ. ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೌರಿಬಿದನೂರು: ವಾಹನ ಸಾಲ ವಸೂಲಾತಿಗೆ ಬಂದ ಹೆಚ್‍ಡಿಎಫ್‍ಸಿ ಏಜೆಂಟ್‍ಗೆ ಮಚ್ಚಿನಿಂದ ಹಲ್ಲೆಗೆ ಯತ್ನ!
ವಾಹನ ಸಾಲ ವಸೂಲಾತಿಗೆ ಬಂದ ಹೆಚ್‍ಡಿಎಫ್‍ಸಿ ಏಜೆಂಟ್‍ಗೆ ಮಚ್ಚಿನಿಂದ ಹಲ್ಲೆಗೆ
Follow us on

ಚಿಕ್ಕಬಳ್ಳಾಪುರ, ಮಾರ್ಚ್​​ 3 : ಬೈಕ್ ಲೋನ್ ಕಟ್ಟುವಂತೆ (Vehicle Loan) ಬೈಕ್ (Bike) ಮಾಲೀಕರ ಮನೆ ಮುಂದೆ ಹೋಗಿ ಜೋರಾಗಿ ಅವಾಜ್ ಹಾಕಿದ್ದರಿಂದ ಕುಪಿತಗೊಂಡ ಬೈಕ್ ಮಾಲೀಕ ಖಾಸಗೀ ಫೈನಾನ್ಸ್ ಏಜೆಂಟ್ ಮೇಲೆ ಮಚ್ಚಿನಿಂದ (Machete) ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ (Gouribidanur) ಹೆಚ್‍ಡಿಎಫ್‍ಸಿ ಫೈನಾನ್ಸ್​​​ನಲ್ಲಿ ಗೌರಿಬಿದನೂರಿನ ಶಂಭುಕನಗರದ ವಾಸಿ ಶೇಖರ್ ಎನ್ನುವವರು ಲೋನ್​ ಮೂಲಕ ದ್ವಿಚಕ್ರ ವಾಹನವನ್ನು ತೆಗೆದುಕೊಂಡಿದ್ದು, ಇಎಂಐ ಮೂಲಕ ಸಾಲದ ಕಂತು ಕಟ್ಟುತ್ತಿದ್ದರು.

ಇತ್ತೀಚಿಗೆ ಇಎಂಐ ಕಟ್ಟಿರಲಿಲ್ಲವಂತೆ. ಇದರಿಂದ ಫೈನಾನ್ಸ್ ಏಜೆಂಟ್ ಸುಂದರ್ ಎನ್ನುವವರು ಶೇಖರ್ ಮನೆ ಬಳಿ ಹೋಗಿ ಇಎಂಐ ಪಾವತಿಸುವಂತೆ ಅವಾಜ್ ಹಾಕಿದ್ದಾರೆ. ಇದರಿಂದ ಕುಪಿತಗೊಂಡ ಶೇಖರ್ ಮಾರ್ಚ್-2 ರಂದು ರಸ್ತೆಯಲ್ಲಿ ಸುಂದರನನ್ನು ಅಡ್ಡಗಟ್ಟಿ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ್ದಾನೆ.

ಬೈಕ್ ಬಿಟ್ಟು ಎಸ್ಕೇಪ್ ಆದ ಏಜೆಂಟ್: ಶೇಖರ್ ಮಚ್ಚು ತಂದು ಸುಂದರ್‍ನನ್ನು ಅಡ್ಡಗಟ್ಟುತ್ತಿದ್ದಂತೆ ಭಯಭೀತನಾದ ಸುಂದರ್ ಬೈಕ್ ಬಿಟ್ಟು ದಿಕ್ಕಾಪಾಲಾಗಿ ಓಡಿದ್ದಾನೆ.

ಇದನ್ನೂ ಓದಿ: ಚಿಕ್ಕಮಗಳೂರು ಕಾಫಿ ಕ್ಯೂರಿಂಗ್ ಗೋಡೌನ್ ನಲ್ಲಿದೆ ವಿದ್ಯಾರ್ಥಿನಿಯರ ಡಾ. ಅಂಬೇಡ್ಕರ್ ವಸತಿ ಶಾಲೆ!

ಏಜೆಂಟ್ ಬೈಕ್ ನುಜ್ಜು-ಗುಜ್ಜು: ಫೈನಾನ್ಸ್ ಏಜೆಂಟ್ ಕೈಗೆ ಸಿಗದೇ ದಿಕ್ಕಾಪಾಲಾಗಿ ಓಡಿದ ಕಾರಣ ವ್ಯಘ್ರಗೊಂಡಿದ್ದ ಶೇಖರ್ ಏಜೆಂಟ್‍ನ ಬೈಕ್‍ಗೆ ಮಚ್ಚು ಬೆಂಡಾಗುವ ಹಾಗೆ ಕುಟ್ಟಿಕುಟ್ಟಿ ಜಖಂಗೊಳಿಸಿದ್ದಾನೆ. ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡೇಬಿಟ್ ಕಾರ್ಡ್‍ ಹಣದ ಲಿಮಿಟ್ ಹೆಚ್ಚಿಸುವುದಾಗಿ ನಂಬಿಸಿ ಉಪನ್ಯಾಸಕನಿಗೆ ಪಂಗನಾಮ!

ನಿಮ್ಮ ಬಳಿ ಇರುವ ಎಟಿಎಂ ಕಾರ್ಡ್‍ನ ಹಣ ಡ್ರಾ ಲಿಮಿಟ್‍ನ್ನು ಹೆಚ್ಚಿಸಿಕೊಡುವುದಾಗಿ ನಂಬಿಸಿ ಉಪನ್ಯಾಸಕರೊಬ್ಬರಿಗೆ 65,000/- ರೂಪಾಯಿಗಳ ಪಂಗನಾಮ ಹಾಕಿರುವ ಘಟನೆ ನಡೆದಿದೆ. ತಾವು ಚಿಕ್ಕಬಳ್ಳಾಪುರದ ಎಸ್‍ಬಿಐ ಬ್ಯಾಂಕ್‍ನ ಅಧಿಕಾರಿ ವಿಜಯಕುಮಾರ್ ಎಂದು ಹೇಳಿ, ಚಿಕ್ಕಬಳ್ಳಾಪುರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ ಶ್ರೀನಿವಾಸಮೂರ್ತಿ ಎನ್ನುವವರಿಗೆ ಕರೆ ಮಾಡಿ ಅವರಿಂದ ಒಟಿಪಿ ಪಡೆದು ರೂ. 65,000/- ಹಣವನ್ನು ಲಪಟಾಯಿಸಿದ್ದಾರೆ. ಹಣ ಕಳೆದುಕೊಂಡು ಉಪನ್ಯಾಸಕ ಶ್ರೀನಿವಾಸಮೂರ್ತಿ ಬ್ಯಾಂಕ್ ಬಳಿ ಬಂದು ವಿಚಾರಿಸಿದಾಗ ಸೈಬರ್ ವಂಚನೆ ಎಂದು ತಿಳಿದು, ತಲೆ ಮೇಲೆ ಕೈಹೊತ್ತಿದ್ದಾರೆ. ನ್ಯಾಯ ಕೊಡಿಸುವಂತೆ ಮನವಿ ಮಾಡಿ, ಚಿಕ್ಕಬಳ್ಳಾಪುರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:05 pm, Wed, 6 March 24