ಸರ್ಕಾರಿ ಆಸ್ಪತ್ರೆಗೆ ಹೈಟೆಕ್‌ ‘ಚಿಕಿತ್ಸೆ’; ಪಾಳುಬಿದ್ದಂತಿದ್ದ ಸರ್ಕಾರಿ ಆಸ್ಪತ್ರೆ ಇಂದು ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆಯುವಂತಿದೆ!

| Updated By: ಆಯೇಷಾ ಬಾನು

Updated on: Feb 01, 2022 | 9:45 AM

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಗ್ರಾಮದಲ್ಲಿರೋ ಸರ್ಕಾರಿ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಂತೆ ಈ ಸರ್ಕಾರಿ ಆಸ್ಪತ್ರೆ ಕೂಡಾ ಶಿಥಿಲ ಕಟ್ಟಡ ಹೊಂದಿತ್ತು. ಗಲೀಜು ವಾತಾವರಣದಿಂದಲೇ ಕೂಡಿತ್ತು. ಆದ್ರೆ ಇದೇ ಆಸ್ಪತ್ರೆಗೆ ಈಗ ಹೈಟೆಕ್‌ ಸ್ಪರ್ಶ ನೀಡಲಾಗಿದೆ.

ಸರ್ಕಾರಿ ಆಸ್ಪತ್ರೆಗೆ ಹೈಟೆಕ್‌ ‘ಚಿಕಿತ್ಸೆ’; ಪಾಳುಬಿದ್ದಂತಿದ್ದ ಸರ್ಕಾರಿ ಆಸ್ಪತ್ರೆ ಇಂದು ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆಯುವಂತಿದೆ!
ಸರ್ಕಾರಿ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರ
Follow us on

ಚಿಕ್ಕಬಳ್ಳಾಪುರ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಯನ್ನು ಖಾಸಗಿ ಆಸ್ಪತ್ರೆಯಂತೆ ಹೈಟೆಕ್ ಗೊಳಿಸಲಾಗಿದೆ. ಈ ಆಸ್ಪತ್ರೆಯಲ್ಲಿ ಹೈಟೆಕ್ ಪಾರ್ಕ್‌, ಸುಸಜ್ಜಿತವಾದ ಬೆಡ್‌ಗಳಿವೆ. ಇನ್ನೂ ವಿಶೇಷ ಅಂದ್ರೆ ಆ ಆಸ್ಪತ್ರೆ ಆವರಣವೇ ರೋಗಿಯ ಅರ್ಧ ಕಾಯಿಲೆಯನ್ನೇ ವಾಸಿ ಮಾಡುವಂತಿದೆ. ಪಾಳು ಬಿದ್ದಂತಿದ್ದ ಸರ್ಕಾರಿ ಆಸ್ಪತ್ರೆಯೊಂದು ಈಗ ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆಯುವಂತೆ ಬದಲಾಗಿದೆ. ಆಸ್ಪತ್ರೆ ಸುತ್ತಲೂ ಹಚ್ಚ ಹಸಿರಿನ ಹುಲ್ಲು ಹಾಸಿನಿಂದ ನಳನಳಿಸೋ ಪಾರ್ಕ್‌. ಇನ್ನೂ ಆಸ್ಪತ್ರೆ ಒಳಗೆ ಕಾಲಿಡುತ್ತಿದ್ದಂತೆ ಸುಸಜ್ಜಿತವಾದ ಬೆಡ್‌ಗಳಿವೆ. ಈ ಆಸ್ಪತ್ರೆಯನ್ನು ನೋಡಿದ್ರೆ ಇದು ಸರ್ಕಾರಿ ಆಸ್ಪತ್ರೆ ಎಂದು ನಂಬಲೂ ಅಸಾಧ್ಯವಾಗುವ ರೀತಿ ಇದಕ್ಕೆ ಹೈಟೆಕ್ ಟಚ್‌ ನೀಡಲಾಗಿದೆ.

ಉದ್ಯೋಗ ಖಾತ್ರಿ ಅನುದಾನದಲ್ಲೇ ತಲೆ ಎತ್ತಿದ ಪಾರ್ಕ್
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಗ್ರಾಮದಲ್ಲಿರೋ ಸರ್ಕಾರಿ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಂತೆ ಈ ಸರ್ಕಾರಿ ಆಸ್ಪತ್ರೆ ಕೂಡಾ ಶಿಥಿಲ ಕಟ್ಟಡ ಹೊಂದಿತ್ತು. ಗಲೀಜು ವಾತಾವರಣದಿಂದಲೇ ಕೂಡಿತ್ತು. ಆದ್ರೆ ಇದೇ ಆಸ್ಪತ್ರೆಗೆ ಈಗ ಹೈಟೆಕ್‌ ಸ್ಪರ್ಶ ನೀಡಲಾಗಿದೆ. 1 ಕೋಟಿ 12 ಲಕ್ಷ ರೂಪಾಯಿ ಸಿಎಸ್‌ಆರ್ ಅನುದಾನ ಬಳಸಿಕೊಂಡು ಮಾದರಿ ಕಟ್ಟಡ ನಿರ್ಮಿಸಲಾಗಿದೆ. ಆಸ್ಪತ್ರೆಯನ್ನ ಮತ್ತಷ್ಟು ವಿಸ್ತರಿಸಲಾಗಿದೆ. ಜತೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ 32 ಲಕ್ಷ ರೂಪಾಯಿ ಅನುದಾನ ನೀಡಿದೆ. ಅದ್ರಿಂದಲೇ ಆಸ್ಪತ್ರೆ ಸುತ್ತ ಸುಂದರವಾದ ಉದ್ಯಾನವನ ನಿರ್ಮಾಣ ಮಾಡಲಾಗಿದೆ.

ಉದ್ಯೋಗ ಖಾತ್ರಿ ಅನುದಾನದಲ್ಲೇ ತಲೆಎತ್ತಿದ ಪಾರ್ಕ್

ಇನ್ನು ಮಾದರಿ ಆಸ್ಪತ್ರೆ ನಿರ್ಮಾಣಕ್ಕೂ ಮುನ್ನ ಆಸ್ಪತ್ರೆ ಆವರಣದಲ್ಲಿ ಬರೀ ಜಾಲಿ ಗಿಡಗಳೇ ಕಾಣ್ತಿದ್ವು. ಆದ್ರೀಗ ಸುಂದರವಾದ ಕಾಂಕ್ರೀಟ್ ರಸ್ತೆ, ವಿದ್ಯುತ್ ದೀಪ, ಹುಲ್ಲಿನ ಲ್ಯಾನ್, ವಿವಿಧ ಅಲಂಕಾರಿಕ ಗಿಡಗಳನ್ನು ನೆಟ್ಟು ವಾಕಿಂಗ್ ಮಾಡಲು ಸುಂದರವಾದ ಪಾತ್ ಗಳನ್ನು ನಿರ್ಮಾಣ ಮಾಡಲಾಗಿದೆ. ಇದ್ರಿಂದ ಸಾರ್ವಜನಿಕರು, ರೋಗಿಗಳು ವಾಕಿಂಗ್‌ ಮಾಡಿ ರೆಸ್ಟ್‌ ಮಾಡಿದ್ರೆ, ಬಿಡುವು ಸಿಕ್ಕಾಗ ಸ್ವತಃ ಆಸ್ಪತ್ರೆ ಸಿಬ್ಬಂದಿ ವೈದ್ಯರು ಪಾರ್ಕ್ ನಲ್ಲಿ ಕೆಲ ಕಾಲ ವಾಕಿಂಗ್ ಮಾಡಿ ರಿಪ್ರೆಶ್ ಆಗ್ತಿದ್ದಾರೆ.

ಒಟ್ನಲ್ಲಿ ಉದ್ಯೋಗ ಖಾತ್ರಿ ಅನುದಾನವನ್ನೇ ಬಳಸಿಕೊಂಡು ಆಸ್ಪತ್ರೆಯನ್ನ ಸುಂದರಗೊಳಿಸಲಾಗಿದೆ. ಆಸ್ಪತ್ರೆ ಒಳಗೂ ಉತ್ತಮ ಬೆಡ್‌ ವ್ಯವಸ್ಥೆ ಮಾಡಲಾಗಿದ್ದು ಚಿಕಿತ್ಸೆ ಕಡೆಗೂ ಗಮನ ಹರಿಸಲಾಗಿದೆ. ಇದೇ ಆಸ್ಪತ್ರೆ ಈಗ ಇತರೆ ಸರ್ಕಾರಿ ಆಸ್ಪತ್ರೆಗಳಿಗೆ ಮಾದರಿಯಾಗಿದೆ.

ವರದಿ: ಭೀಮಪ್ಪ ಪಾಟೀಲ್‌, ಟಿವಿ9 ಚಿಕ್ಕಬಳ್ಳಾಪುರ

ಉದ್ಯೋಗ ಖಾತ್ರಿ ಅನುದಾನದಲ್ಲೇ ತಲೆಎತ್ತಿದ ಪಾರ್ಕ್

ಆಸ್ಪತ್ರೆಯಲ್ಲಿ ಸುಸಜ್ಜಿತವಾದ ಬೆಡ್‌ಗಳ ವ್ಯವಸ್ಥೆ

ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯಲ್ಲಿ ಕೊವಿಡ್ ಚಿಕಿತ್ಸೆ ಪಡೆಯದಿದ್ದರೆ ಪರಿಹಾರವಿಲ್ಲ: ಸಚಿವ ಜೆಸಿ ಮಾಧುಸ್ವಾಮಿ