ಮಂಗಳೂರು: ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ವಿಡಿಯೋ ಗೇಮ್​ ಆಡುವುದರಲ್ಲಿ ಬ್ಯುಸಿ; ವೈದ್ಯರ ನಿರ್ಲಕ್ಷ್ಯ ಆರೋಪ

ವೈದ್ಯರ ನಿರ್ಲಕ್ಷಕ್ಕೆ ಬೇಸತ್ತು ರೋಗಿ ಬೇರೆ ಆಸ್ಪತ್ರೆ ಸೇರಿದ್ದಾನೆ ಎಂದು ತಿಳಿದುಬಂದಿದೆ. ವೈದ್ಯರ ನಿರ್ಲಕ್ಷವನ್ನು ರೋಗಿ ಕಡೆಯವರು ಮೊಬೈಲ್​ನಲ್ಲಿ ಸರಿಯಾಗಿ ಸೆರೆಹಿಡಿದಿದ್ದಾರೆ. ಕೆಎಂಸಿ ಪಿಜಿ ವೈದ್ಯರ ನಿರ್ಲಕ್ಷಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀರ್ವ ಖಂಡನೆ ವ್ಯಕ್ತವಾಗಿದೆ.

ಮಂಗಳೂರು: ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ವಿಡಿಯೋ ಗೇಮ್​ ಆಡುವುದರಲ್ಲಿ ಬ್ಯುಸಿ; ವೈದ್ಯರ ನಿರ್ಲಕ್ಷ್ಯ ಆರೋಪ
Follow us
TV9 Web
| Updated By: ganapathi bhat

Updated on: Jan 29, 2022 | 4:24 PM

ಮಂಗಳೂರು: ಇಲ್ಲಿನ ಸರ್ಕಾರಿ ಆಸ್ಪತ್ರೆಯ ಕಂಪ್ಯೂಟರ್​ನಲ್ಲಿ ವೈದ್ಯರು ವಿಡಿಯೋ ಗೇಮ್ ಆಡಿದ ಘಟನೆ ನಡೆದಿದೆ. ಪಕ್ಕದಲ್ಲಿ ರೋಗಿಯನ್ನು ಇರಿಸಿಕೊಂಡು ವಿಡಿಯೋ ಗೇಮ್ ಆಡುವುದರಲ್ಲಿ ವೈದ್ಯರು ಬ್ಯುಸಿ ಆಗಿದ್ದಾರೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಘಟನೆ ನಡೆದಿದೆ. ಕೆಎಂಸಿ ಪಿಜಿ ವೈದ್ಯರಿಂದ ನಿರ್ಲಕ್ಷ ಆರೋಪ ಕೇಳಿಬಂದಿದೆ. ಪಕ್ಕದಲ್ಲಿ ರೋಗಿಯನ್ನು ಮಲಗಿಸಿ ವಿಡಿಯೋ ಗೇಮ್ ನಲ್ಲಿ ಬ್ಯುಸಿ ಆಗಿರುವುದು ತಿಳಿದುಬಂದಿದೆ. ಜನವರಿ 23 ರಂದು ನಡೆದ ಘಟನೆ ಬೆಳಕಿಗೆ ಬಂದಿದೆ.

ವೈದ್ಯರ ನಿರ್ಲಕ್ಷಕ್ಕೆ ಬೇಸತ್ತು ರೋಗಿ ಬೇರೆ ಆಸ್ಪತ್ರೆ ಸೇರಿದ್ದಾನೆ ಎಂದು ತಿಳಿದುಬಂದಿದೆ. ವೈದ್ಯರ ನಿರ್ಲಕ್ಷವನ್ನು ರೋಗಿ ಕಡೆಯವರು ಮೊಬೈಲ್​ನಲ್ಲಿ ಸರಿಯಾಗಿ ಸೆರೆಹಿಡಿದಿದ್ದಾರೆ. ಕೆಎಂಸಿ ಪಿಜಿ ವೈದ್ಯರ ನಿರ್ಲಕ್ಷಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀರ್ವ ಖಂಡನೆ ವ್ಯಕ್ತವಾಗಿದೆ.

ಆಸ್ಪತ್ರೆಗೆ ಸೇರಿದಾಗಲು ವೈದ್ಯರಿಂದ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ. ತಲೆಗೆ ಪೆಟ್ಟು ಬಿದ್ದು ವಿಜಯಾ ಆಚಾರ್ಯ ಚಿಕಿತ್ಸೆಗೆ ಬಂದಿದ್ದರು. ಪೇಷೆಂಟ್ ಕಡೆಯವರು ವಿಚಾರಿಸಲು ಬಂದ್ರು ಕೂಡ ವೀಡಿಯೋ ಗೇಮ್ ನಲ್ಲೇ ಬ್ಯುಸಿ ಆಗಿದ್ದರು ಎಂದು ತಿಳಿದುಬಂದಿದೆ. ಸಿಟಿ ಸ್ಕಾನ್ ರಿಪೋರ್ಟ್ ಬಗ್ಗೆ ಕೇಳಲು ಹೋದ್ರೆ ವೈದ್ಯರು ಸರಿಯಾಗಿ ಉತ್ತರಿಸಿಲ್ಲ ಅಂತಾ ಆರೋಪ ಕೇಳಿಬಂದಿದೆ.

ಘಟನೆ ಬಗ್ಗೆ ಟಿವಿ9ಗೆ ವೆನ್ಲಾಕ್ ಡಿಎಂಓ ಸಾದಾಶಿವ ಶಾನಬೋಗ್ ಸ್ಪಷ್ಟನೆ ನೀಡಿದ್ದಾರೆ. ಕರ್ತವ್ಯದ ವೇಳೆ ಕೆಎಂಸಿ ಪಿಜಿ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಕೆಎಂಸಿ ಆಡಳಿತ ಮಂಡಳಿಗೆ ಹೇಳಿದ್ದೇವೆ. ಸಿಟಿ ಸ್ಯಾನಿಂಗ್ ಮಾಡಿ ರಿಪೋರ್ಟ್ ಗೆ ಕಾಯುತ್ತಿದ್ದಾಗ ಘಟನೆ‌ ನಡೆದಿದೆ. ರೋಗಿಗಳಿಗೆ ಅಷ್ಟೊಂದು ಅನಾನುಕೂಲವಾಗಿಲ್ಲ‌ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು: ಫಿಶ್ ಮಿಲ್ ಚಿಮಣಿಯಲ್ಲಿ ಹಾರುತ್ತಿದೆ ಸಣ್ಣ ಬೆಂಕಿ ಉಂಡೆಗಳು; ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ಇದನ್ನೂ ಓದಿ: ಮಂಗಳೂರು: ಖಾಸಗಿ ಆಸ್ಪತ್ರೆಯಲ್ಲಿ ತಾಯಿ, ಮಗು ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪ