ಮಂಗಳೂರು: ಫಿಶ್ ಮಿಲ್ ಚಿಮಣಿಯಲ್ಲಿ ಹಾರುತ್ತಿದೆ ಸಣ್ಣ ಬೆಂಕಿ ಉಂಡೆಗಳು; ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ಸ್ಥಳೀಯ ನಿವಾಸಿಗಳು ಭಯಬೀತಗೊಂಡಿದ್ದು, ಈ ಹಿಂದೆ ಅಪಾಯದ ಮುನ್ಸೂಚನೆ ನೀಡಿದ್ದರು ಮಾಲೀಕರು ಎಚ್ಚೆತ್ತುಕೊಳ್ಳದ ಪರಿಣಾಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮಂಗಳೂರು: ಫಿಶ್ ಮಿಲ್ ಚಿಮಣಿಯಲ್ಲಿ ಸಣ್ಣ ಬೆಂಕಿ (Fire) ಉಂಡೆಗಳು ಹಾರುತ್ತಿದ್ದು, ಮನೆ ಪಕ್ಕದ ಟಾರ್ಪಲ್ ಮೇಲೆ ಕಿಡಿ ಹಾರಿ ಬೆಂಕಿ ಹೊತ್ತಿಕೊಂಡಿದೆ. ಮಂಗಳೂರಿನ ಮುಕ್ಕ ಬಳಿಯ ಫಿಶ್ ಮಿಲ್ (Fish mill) ಬಳಿ ಘಟನೆ ನಡೆದಿದೆ. ಮುಕ್ಕ ಸೀಫುಡ್ ಇಂಡಸ್ಟ್ರೀಸ್ ಫ್ಯಾಕ್ಟರಿಯಲ್ಲಿ ಸಣ್ಣ ಬೆಂಕಿ ಉಂಡೆಗಳು ಆಗಾಗ ಕಾಣಿಸಿಕೊಳ್ಳುತ್ತಿರುತ್ತದೆ. ಸದ್ಯ ಸ್ಥಳೀಯ ನಿವಾಸಿಗಳು ಭಯಬೀತಗೊಂಡಿದ್ದು, ಈ ಹಿಂದೆ ಅಪಾಯದ ಮುನ್ಸೂಚನೆ ನೀಡಿದ್ದರು ಮಾಲೀಕರು (Owner) ಎಚ್ಚೆತ್ತುಕೊಳ್ಳದ ಪರಿಣಾಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿಜಯನಗರ: ಸೆಕ್ಯೂರಿಟಿ ಗಾರ್ಡ್ ಕೊಲೆ ಪ್ರಕರಣದ ಆರೋಪಿ ಸೆರೆ
ಜ.10 ರಂದು ಹೊಸಪೇಟೆ ಪಟ್ಟಣದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೆಲಸ ಸರಿಯಾಗಿ ಮಾಡು ಎಂದು ಹೇಳಿದ್ದಕ್ಕೆ ಕಾಲೇಜು ಸೆಕ್ಯೂರಿಟಿ ಗಾರ್ಡ್ನನ್ನು ಹತ್ಯೆ ಮಾಡಿದ್ದ. ಬಿಹಾರ ಮೂಲದ ಆರೋಪಿ ಸಂಜೀವ್ ಕುಮಾರ್ ಸಹನಿಯನ್ನು ಹೊಸಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಂಕರ್ ಆನಂದಸಿಂಗ್ ಕಾಲೇಜು ಕಾವಲುಗಾರನಾಗಿದ್ದ ಗೌಸಸಾನ್ನನ್ನು ಕೊಲೆ ಮಾಡಿದ್ದ ಬಿಹಾರ ಮೂಲದ ಕಾರ್ಮಿಕ ಸದ್ಯ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ.
ಬೆಂಗಳೂರು: ಮದ್ಯದ ಅಮಲಿನಲ್ಲಿ ಯುವಕನಿಗೆ ಚಾಕು ಇರಿದ ಸ್ನೇಹಿತರು
ಎಣ್ಣೆ ಪಾರ್ಟಿ ವೇಳೆ ಜಗಳವಾಗಿ ಮದ್ಯದ ಅಮಲಿನಲ್ಲಿದ್ದ ಸ್ನೇಹಿತರು ಯುವಕನಿಗೆ ಚಾಕು ಇರಿದ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಮುತ್ತಗಟ್ಟಿ ಬಳಿ ನಡೆದಿದೆ. ಬನ್ನೇರುಘಟ್ಟದ ಕಲ್ಕೆರೆ ನಿವಾಸಿ ವಿಜಯ್ ಹಲ್ಲೆಗೊಳಗಾದ ಯುವಕ. ಸ್ನೇಹಿತರ ಜತೆ ಎಣ್ಣೆ ಪಾರ್ಟಿ ಮಾಡಲು ಬಂದಿದ್ದ ವಿಜಯ್ ಜತೆ ಗಲಾಟೆ ಮಾಡಿಕೊಂಡೆ ಸ್ನೇಹಿತರು ಚಾಕುವಿನಿಂದ ಚುಚ್ಚಿದ್ದಾರೆ. ಸದ್ಯ ಗಾಯಾಳು ವಿಜಯ್ನನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ: ಬಸ್ ಚಲಾಯಿಸುವಾಗ ಚಾಲಕನಿಗೆ ಮೂರ್ಛೆ ರೋಗ; ನಿಯಂತ್ರಣ ತಪ್ಪಿ ಫುಟ್ಪಾತ್ಗೆ ನುಗ್ಗಿ ಬೈಕ್ಗಳಿಗೆ ಡಿಕ್ಕಿ
ಬಸ್ ಚಲಾಯಿಸುವಾಗ ಚಾಲಕನಿಗೆ ಮೂರ್ಛೆ ರೋಗ ಬಂದ ಪರಿಣಾಮ ನಿಯಂತ್ರಣ ತಪ್ಪಿ ಫುಟ್ಪಾತ್ಗೆ ನುಗ್ಗಿ ಬೈಕ್ಗಳಿಗೆ ಡಿಕ್ಕಿ ಹೊಡೆದ ಘಟನೆ ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿ ನಡೆದಿದೆ. ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಘಟನೆ ವೇಳೆ ಯಾವುದೇ ಪ್ರಾಣಾಪಾಯವಿಲ್ಲ. ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ನವನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Crime News: ಸುಪ್ರೀಂ ಕೋರ್ಟ್ ಹೊರಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಕೋಲಾರಕ್ಕೆ ಹೊಂದಿಕೊಂಡಿರುವ ಅಂತರಗಂಗೆ ಬೆಟ್ಟದಲ್ಲಿ ಬೆಂಕಿ; ಹತ್ತಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿ
Published On - 8:19 pm, Sun, 23 January 22