AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಪತ್ರೆಯಲ್ಲಿ ಬಾಲಕನ ಸಾವು, ಆಸ್ಪತ್ರೆ ವಿರುದ್ಧ ಪೋಷಕರ ಆಕ್ರೋಶ: ಬಾಲಕನಿಗೆ ಮೆದುಳು ಜ್ವರ ಇತ್ತು ಎಂದ ಆಸ್ಪತ್ರೆಯ ವೈದ್ಯ!

ಜ್ವರ ಬಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಸಾವಿಗೀಡಾಗಿದ್ದು, ಆಸ್ಪತ್ರೆಯ ನಿರ್ಲಕ್ಷ್ಯದಿಂದ ಬಾಲಕ ಸಾವನ್ನಪ್ಪಿದ ಆರೋಪ ಕೇಳಿಬಂದಿದೆ.

ಆಸ್ಪತ್ರೆಯಲ್ಲಿ ಬಾಲಕನ ಸಾವು, ಆಸ್ಪತ್ರೆ ವಿರುದ್ಧ ಪೋಷಕರ ಆಕ್ರೋಶ: ಬಾಲಕನಿಗೆ ಮೆದುಳು ಜ್ವರ ಇತ್ತು ಎಂದ ಆಸ್ಪತ್ರೆಯ ವೈದ್ಯ!
ಜ್ವರ ಬಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಸಾವು, ಬೆಂಗಳೂರಿನ ಆಸ್ಪತ್ರೆ ವಿರುದ್ಧ ಪೋಷಕರ ಆಕ್ರೋಶ
TV9 Web
| Updated By: ಸಾಧು ಶ್ರೀನಾಥ್​|

Updated on:Jan 19, 2022 | 1:03 PM

Share

ಬೆಂಗಳೂರು: ಜ್ವರ ಬಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಸಾವಿಗೀಡಾಗಿದ್ದು, ಆಸ್ಪತ್ರೆಯ ನಿರ್ಲಕ್ಷ್ಯದಿಂದ ಬಾಲಕ ಸಾವನ್ನಪ್ಪಿದ ಆರೋಪ ಕೇಳಿಬಂದಿದೆ. ಬೆಂಗಳೂರಿನ ಮಾತೃ ಆಸ್ಪತ್ರೆ ವಿರುದ್ಧ ಪೋಷಕರ ಆಕ್ರೋಶ ವ್ಯಕ್ತವಾಗಿದೆ. ವಿವರ್ಧನ್(12) ಎಂಬ ಬಾಲಕ ನಿನ್ನೆ ಬೆಳಗ್ಗೆ10 ಗಂಟೆಗೆ ಆಸ್ಪತ್ರೆಗೆ ದಾಖಲಾಗಿದ್ದ. ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಮೃತಪಟ್ಟಿದ್ದಾನೆ. ಬೇರೆ ಆಸ್ಪತ್ರೆಗೆ ಸೇರಿಸ್ತೇವೆ ಎಂದು ಕೇಳಿದರೂ ಬಾಲಕನನ್ನು ಡಿಸ್ಚಾರ್ಜ್ ಮಾಡಿಲ್ಲ ಎಂದಿರುವ ಪೋಷಕರು ನ್ಯಾಯ ಸಿಗುವವರೆಗೂ ಮೃತದೇಹವನ್ನ ಪಡೆಯೋದಿಲ್ಲ ಎಂದು ಮಾತೃ ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ಬಾಲಕನಿಗೆ ಬ್ರೈನ್ ಫೀವರ್ ಇತ್ತು- ಮಾತೃ ಆಸ್ಪತ್ರೆ ಎಂಡಿ ಡಾ. ಮದನ್ ಜ್ವರದಿಂದ ಬಳಲುತ್ತಿದ್ದ ಬಾಲಕ ಆಸ್ಪತ್ರೆಯಲ್ಲಿ ಸಾವು ಪ್ರಕರಣ ಸಂಬಂಧ ಬೆಂಗಳೂರಿನ ಕೂಡ್ಲುನಲ್ಲಿರುವ ಮಾತೃ ಆಸ್ಪತ್ರೆ ಎಂಡಿ ಡಾ. ಮದನ್ ಪ್ರತಿಕ್ರಿಯೆ ನೀಡಿದ್ದಾರೆ. ಮಗುವಿಗೆ ಮೊದಲೇ ಆರೋಗ್ಯ ಸಮಸ್ಯೆಯಿತ್ತು. ಇಲ್ಲಿಗೆ ಬಂದಾಗಲೇ ಮಗು ಸಿರಿಯಸ್ ಕಂಡಿಷನ್ ನಲ್ಲಿತ್ತು. ಮಗುವಿಗೆ ಜ್ಞಾನ ಕೂಡ ಇರಲಿಲ್ಲ. ನಾವು ಎಲ್ಲಾ ಚಿಕಿತ್ಸೆ ನೀಡಿದ್ದಿವಿ. ಎಂಆರ್​ಐ ಸ್ಕ್ಯಾನ್ ಮತ್ತು ತುರ್ತು ಚಿಕಿತ್ಸೆಗಳನ್ನು ನೀಡಿದ್ದಿವಿ. ಸಂಬಂಧಿಕರಿಗೆ ಮಗುವಿನ ‌ಪರಿಸ್ಥಿತಿಯ ಬಗ್ಗೆ ತಿಳಿಯ ಹೇಳಿದ್ದಿವಿ.

ಇದನ್ನು ಬ್ರೈನ್ ಫೀವರ್ ಅಂತ ಹೇಳ್ತೀವಿ. ಇದರಿಂದ ಮಗುವು ಸಾವನಪ್ಪುವ ಚಾನ್ಸ್ ಇದೆ ಅಂತಾ ಹೇಳಿದ್ದಿವಿ. ನಮ್ಮ ಪ್ರಯತ್ನ ಮಾಡ್ತಿವಿ ಅಂತಾನೇ ಹೇಳಿದ್ದಿವಿ. ಕುಟುಂಬಸ್ಥರು ಏನಾದರೂ ಪ್ರಯತ್ನ ಮಾಡಿ ಅಂದ ಮೇಲೆ ಅವರ ಸಹಿ ಪಡೆದು ಚಿಕಿತ್ಸೆ ನೀಡಿದ್ದಿವಿ. ಬೆಳಿಗ್ಗೆ 6 ಗಂಟೆಗೆ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ‌ಕೊಟ್ಟಿದ್ವಿ. ಆದರೂ ಮಗುವಿನ ಹೃದಯ ನಿಂತು ಹೋಗಿದೆ. ಸಾಕಷ್ಟು ಪ್ರಯತ್ನ ಮಾಡಿದ್ವಿ, ನಾವೇನೂ ಕೈಕಟ್ಟಿ ಕುಳಿತಿರಲಿಲ್ಲ. ನಮ್ಮಿಂದ ಯಾವುದೇ ನಿರ್ಲಕ್ಷ್ಯವಾಗಿಲ್ಲ. ಎಲ್ಲಾ ಚಿಕಿತ್ಸೆ ಕೊಟ್ಟಿದ್ದಿವಿ. ದುರದೃಷ್ಟವಶಾತ್ ಮಗು ತೀರಿಕೊಂಡಿದೆ ಎಂದು ವಿಷಾದದ ದನಿಯಲ್ಲಿ ಮಾತೃ ಆಸ್ಪತ್ರೆಯ ಡಾ. ಮದನ್ ಟಿವಿ9 ಗೆ ತಿಳಿಸಿದ್ದಾರೆ.

Boy Death: ಜ್ವರದಿಂದ ಬಳಲುತ್ತಿದ್ದ ಮಗ ವಿವರ್ಧನ್​ ಕಳೆದುಕೊಂಡು ತಂದೆ ಕಣ್ಣೀರು

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೂದಲಳತೆ ಅಂತರದಲ್ಲಿ ತಪ್ಪಿದ ಭಾರಿ‌ ಅನಾಹುತ ಬೆಂಗಳೂರು: ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (kempegowda international airport) ಕೂದಲಳತೆಯ ಅಂತರದಲ್ಲಿ ಭಾರಿ‌ ಅನಾಹುತ ತಪ್ಪಿದೆ. ಟೇಕ್ ಆಫ್​ ಆಗುವ ವೇಳೆ ( take off) ಒಂದೇ ದಿಕ್ಕಿನಲ್ಲಿ ಎರಡು ವಿಮಾನಗಳು ಮುಖಾಮುಖಿ ಬಂದಿದ್ದು, ಸ್ವಲ್ಪದರಲ್ಲೆ ಈ ಅನಾಹುತ ತಪ್ಪಿದೆ. ಜನವರಿ 7 ರಂದು‌ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಒಂದೇ ಸಮಯದಲ್ಲಿ ಟೇಕ್ ಆಫ್​ ಗೆ ಬಂದ ಎರಡೂ ವಿಮಾನಗಳು ಇಂಡಿಗೋ ವಿಮಾನ ಸಂಸ್ಥೆಯದ್ದಾಗಿವೆ. ಕೊಲ್ಕತ್ತಾ ಮತ್ತು ಭುವನೇಶ್ವರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನಗಳು (indigo domestic flights) ಇವಾಗಿದ್ದವು. 6E455 ಮತ್ತು 6E246 ಸಂಖ್ಯೆಯ ಇಂಡಿಗೋ ವಿಮಾನಗಳು. ಎರಡೂ ವಿಮಾನಗಳಲ್ಲಿ ನೂರಾರು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.

ಈ ವೇಳೆ ಒಂದೇ ರನ್ ವೇ ಮೇಲೆ ಬಂದ ಪರಿಣಾಮ ಅವು ಪರಸ್ಪರ ಡಿಕ್ಕಿಯಾಗುವ ಸಂಭವವಿತ್ತು. ಇದನ್ನು ತಕ್ಷಣ ಗಮನಿಸಿದ ರಾಡರ್ ಕಂಟ್ರೋಲ್ ರೂಮ್​ನವರು ಒಂದು ವಿಮಾನವನ್ನು ಬಲ ಭಾಗಕ್ಕೆ, ಮತ್ತೊಂದು ವಿಮಾನವನ್ನು ಎಡ ಭಾಗಕ್ಕೆ ಕಳಿಸಿ ಅನಾಹುತ ತಪ್ಪಿಸಿದ್ದಾರೆ. ಈ ವೇಳೆ ಬೇರೆ ವಿಮಾನಗಳು ಲ್ಯಾಂಡಿಂಗ್ ಗೆ ಬಾರದ ಕಾರಣ ‌ಅನಾಹುತ ತಪ್ಪಿದೆ. ಇದೀಗ ತಪ್ಪಿದ ಅನಾಹುತ ಕುರಿತು ಹಿರಿಯ ಅಧಿಕಾರಿಗಳು ಸ್ವಷ್ಟನೆ ಕೇಳಿದ್ದಾರೆ. 2 ರನ್ ವೇ ಇದ್ದರೂ ನಿರ್ಲಕ್ಷ್ಯಕ್ಕೆ ಕಾರಣ ಏನು ಅನ್ನೋ ಬಗ್ಗೆ ತನಿಖೆ ನಡೆಯಬೇಕಿದೆ.

Also Read:

ರಸ್ತೆ ಅಭಿವೃದ್ಧಿ ಮಾಡಿ ಅಂತ ಕೆಳೋದೇ ತಪ್ಪಾ? ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಕ್ಕೆ ಯುವಕನ ಮನೆಗೆ ಪೊಲೀಸ್ರು ನುಗ್ಗಿದ್ರು! Also Read:

ಗೌರವ ಹೆಚ್ಚಿಸಿಕೊಂಡ ಇಳಕಲ್ ಸೀರೆ, ಗುಳೇದಗುಡ್ಡ ಖಣ; ಗಣರಾಜ್ಯೋತ್ಸವ ಸ್ತಬ್ಧಚಿತ್ರಕ್ಕೆ ಆಯ್ಕೆ

Published On - 11:34 am, Wed, 19 January 22

ಫ್ಯಾನ್ಸ್- ಪೊಲೀಸರ ನಡುವೆ ಚೇರ್ ಎಸೆದಾಟ
ಫ್ಯಾನ್ಸ್- ಪೊಲೀಸರ ನಡುವೆ ಚೇರ್ ಎಸೆದಾಟ
ಮೆಸ್ಸಿ ಜೊತೆ ಮಗನನ್ನು ನಿಲ್ಲಿಸಿ ಫೋಟೋ ಕ್ಲಿಕ್ಕಿಸಿದ ಶಾರುಖ್ ಖಾನ್
ಮೆಸ್ಸಿ ಜೊತೆ ಮಗನನ್ನು ನಿಲ್ಲಿಸಿ ಫೋಟೋ ಕ್ಲಿಕ್ಕಿಸಿದ ಶಾರುಖ್ ಖಾನ್
ಜ 6ರಂದು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಹುಸೇನ್
ಜ 6ರಂದು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಹುಸೇನ್
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್
ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್
ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್
ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ