AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲಿಗೆ ತಲೆ ಕೊಟ್ಟು ಯುವ ವೈದ್ಯನ ಆತ್ಮಹತ್ಯೆ ಪ್ರಕರಣ; ಭೂಪಾಲ್ ಮೂಲದ ಆರೋಪಿ ವಶಕ್ಕೆ ಪಡೆದು ತನಿಖೆ ನಡೆಸುತ್ತಿರುವ ಪೊಲೀಸ್

ಸೈಬರ್ ಕ್ರಿಮಿಗಳ ಬ್ಲಾಕ್ ಮೇಲ್ನಿಂದಾಗಿ ಯುವ ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದ. ಬಂಧಿತ ಆರೋಪಿ ಸಾರ್ಥಕ್ ಭೂಪಾಲ್ ಮೂಲದವ ಎಂದು ತಿಳಿದು ಬಂದಿದೆ. ಸದ್ಯ ಪ್ರಕರಣ ಸಂಬಂಧ ಸಾರ್ಥಕ್ ಅರೆಸ್ಟ್ ಮಾಡಿದ ರೈಲ್ವೆ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ರೈಲಿಗೆ ತಲೆ ಕೊಟ್ಟು ಯುವ ವೈದ್ಯನ ಆತ್ಮಹತ್ಯೆ ಪ್ರಕರಣ; ಭೂಪಾಲ್ ಮೂಲದ ಆರೋಪಿ ವಶಕ್ಕೆ ಪಡೆದು ತನಿಖೆ ನಡೆಸುತ್ತಿರುವ ಪೊಲೀಸ್
ಆರೋಪಿ ಸಾರ್ಥಕ್
TV9 Web
| Updated By: ಆಯೇಷಾ ಬಾನು|

Updated on: Jan 19, 2022 | 1:00 PM

Share

ಬೆಂಗಳೂರು: ಕೆಂಗೇರಿ ಹೆಜ್ಜಾಲದ ಮಾರ್ಗದ ರೈಲಿಗೆ ತಲೆ ಕೊಟ್ಟು ವೈದ್ಯ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಪೊಲೀಸರು ಸಾರ್ಥಕ್ ಎಂಬ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಡೇಟಿಂಗ್ ಆಪ್ನಲ್ಲಿ ನಕಲಿ ಖಾತೆ ತೆರೆದು ವೈದ್ಯನ ಸಂಪರ್ಕ ಬೆಳೆಸಿದ್ದ ಸೈಬರ್ ಚೋರರು ವೈದ್ಯನ ಬೆತ್ತಲೆ ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡಿದ್ದರು. ಇದಕ್ಕೆ ನೊಂದ ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದ. ಸದ್ಯ ಈಗ ಈ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.

ಸೈಬರ್ ಕ್ರಿಮಿಗಳ ಬ್ಲಾಕ್ ಮೇಲ್ನಿಂದಾಗಿ ಯುವ ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದ. ಬಂಧಿತ ಆರೋಪಿ ಸಾರ್ಥಕ್ ಭೂಪಾಲ್ ಮೂಲದವ ಎಂದು ತಿಳಿದು ಬಂದಿದೆ. ಸದ್ಯ ಪ್ರಕರಣ ಸಂಬಂಧ ಸಾರ್ಥಕ್ ಅರೆಸ್ಟ್ ಮಾಡಿದ ರೈಲ್ವೆ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ವ್ಯವಸ್ಥಿತ ಗ್ಯಾಂಗ್ ನಿಂದ ಇದೇ ಮಾದರಿಯಲ್ಲಿ ಸೈಬರ್ ಕೃತ್ಯಗಳು ನಡೆಸಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ಆರೋಪಿ ಸಾರ್ಥಕ್ ಬ್ಯಾಂಕ್ ಅಕೌಂಟ್ ಡಿಟೇಲ್ಸ್ ಮಾಹಿತಿ ಕಲೆ ಹಾಕ್ತಿದ್ದಾರೆ. ಐಟಿ(ಇನ್ಫರ್ಮೇಶನ್ ಟೆಕ್ನಾಲಜಿ) ಪೈನಲ್ ಇಯರ್ ವಿದ್ಯಾರ್ಥಿಯಾಗಿರುವ ಸಾರ್ಥಕ್, ವಿಲಾಸಿ ಜೀವನಕ್ಕಾಗಿ ಯುವತಿ ಸೋಗಿನಲ್ಲಿ ಹನಿಟ್ರಾಪ್ ಮಾಡಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಆರೋಪಿ ಸಾರ್ಥಕ್ ಜತೆಗೆ ಸೈಬರ್ ಗ್ಯಾಂಗ್ ಆಕ್ಟೀವ್ ಶಂಕೆ ಇದೆ. ಹೀಗಾಗಿ ಪೊಲೀಸರು ಟೆಕ್ನಿಕಲ್ ಅನಾಲಿಸಿಸ್ ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಆದ್ರೆ ಸೈಬರ್ ಖದೀಮರ ಬಗ್ಗೆ ಆರೋಪಿ ಸಾರ್ಥಕ್ ಗುಟ್ಟು ಬಿಟ್ಟುಕೊಟಿಲ್ಲ. ಸದ್ಯ ಆರೋಪಿ ಸಾರ್ಥಕ್ ತೀವ್ರ ವಿಚಾರಣೆಗೊಳಪಡಿಸಿ ತನಿಖೆ ಮುಂದುವರೆಸಲಾಗಿದೆ.

ಘಟನೆ ಮಾಹಿತಿ: ಕಳೆದ ವರ್ಷ ಆಗಸ್ಟ್ 13 ರಂದು ರೈಲಿಗೆ ತಲೆಕೊಟ್ಟು ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು. ಬ್ಲಾಕ್ ಮೇಲ್ನಿಂದಾಗಿ ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಡೇಟಿಂಗ್ ಆಪ್ನಲ್ಲಿ ನಕಲಿ ಖಾತೆ ತೆರೆದು ವೈದ್ಯನ ಸಂಪರ್ಕ ಬೆಳೆಸಿದ್ದ ಸೈಬರ್ ಚೋರರು ವೈದ್ಯನ ಬೆತ್ತಲೆ ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡಿದ್ದರು. ಹಣಕ್ಕಾಗಿ ಬೇಡಿಕೆ ಇಟ್ಟು ಹಣ ದೋಚಲು ಮುಂದಾಗಿದ್ದರು. ಮೊದಲಿಗೆ 70 ಸಾವಿರ ಹಣ ಪಡೆದಿದ್ದ ಗ್ಯಾಂಗ್ ಬಳಿಕ ಮತ್ತಷ್ಟು ಹಣಕ್ಕಾಗಿ ಡಿಮ್ಯಾಂಡ್ ಮಾಡಿತ್ತು. ಇದೇ ರೀತಿ ಬ್ಲಾಕ್ ಮೇಲ್ಗೆ ಬೇಸತ್ತು ವೈದ್ಯ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಸದ್ಯ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭೋಪಾಲ್ ಮೂಲದ ಓರ್ವ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ರೈಲಿಗೆ ತಲೆ ಕೊಟ್ಟು ಯುವ ವೈದ್ಯನ ಆತ್ಮಹತ್ಯೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್: ಬ್ಲ್ಯಾಕ್ ಮೇಲ್​ ಕರಿನೆರಳು!