ಹಾಲಿ ಶಾಸಕ ಮತ್ತು ಸಂಸದರ ಸ್ವಂತ ಗ್ರಾಮದಲ್ಲಿರುವ ಆಸ್ಪತ್ರೆಗೆ ತಕ್ಷಣ ಬೇಕಾಗಿದೆ ಚಿಕಿತ್ಸೆ! ಯಾಕೆ ಏನಾಗಿದೆ?

ಸ್ವತಃ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹಾಗೂ ಸ್ವತಃ ವೈದ್ಯರೂ ಆದ ನೂತನ ಸಂಸದ ಡಾ.ಕೆ. ಸುಧಾಕರ್ ಸ್ವಗ್ರಾಮವೂ ಸಹ ಇದೇ ಪೆರೇಸಂದ್ರ ಆಗಿದೆ. ಶಾಸಕರು-ಸಂಸದರ ಸ್ವಗ್ರಾಮದಲ್ಲಿ ಈ ರೀತಿ ವೈದ್ಯರೇ ಇಲ್ಲವೆಂದರೆ ಪರಿಸ್ಥಿತಿ ಇನ್ನೆಷ್ಟು ಶೋಚನೀಯವಾಗಿದೆ ನೀವೇ ಊಹಿಸಿ. ಆದ್ರೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಜಿಲ್ಲಾ ಆರೋಗ್ಯಾಧಿಕಾರಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಹಾಲಿ ಶಾಸಕ ಮತ್ತು ಸಂಸದರ ಸ್ವಂತ ಗ್ರಾಮದಲ್ಲಿರುವ ಆಸ್ಪತ್ರೆಗೆ ತಕ್ಷಣ ಬೇಕಾಗಿದೆ ಚಿಕಿತ್ಸೆ! ಯಾಕೆ ಏನಾಗಿದೆ?
ಹಾಲಿ ಶಾಸಕ -ಸಂಸದರ ಸ್ವಂತ ಗ್ರಾಮದಲ್ಲಿರುವ ಆಸ್ಪತ್ರೆಗೆ ಬೇಕಾಗಿದೆ ಚಿಕಿತ್ಸೆ
Follow us
| Updated By: ಸಾಧು ಶ್ರೀನಾಥ್​

Updated on: Jun 11, 2024 | 6:17 PM

ಅದು 24×7 ಪ್ರಾಥಮಿಕ ಆರೋಗ್ಯ ಕೇಂದ್ರ (PHS), ಹಾಗಂತ ನೀವೇನಾದ್ರೂ ಎಮೆರ್ಜೆನ್ಸಿ ಅಂತ ಅಲ್ಲಿಗೆ ಹೋದರೆ ಸಾವೇ ಗತಿ… ಸಾಕ್ಷಾತ್​​ ಹಾಲಿ ಶಾಸಕರು ಹಾಗೂ ನೂತನ ಸಂಸದರು ಸಹ (Pradeep Eshwar, Dr K Sudhakar) ಅದೇ ಗ್ರಾಮದವರು. ಆದರೂ ಆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರು ತಿಂಗಳಿದಲೂ ವೈದ್ಯರೇ ಗತಿಯಿಲ್ಲ. ಪ್ರತಿ ದಿನ ಆಸ್ಪತ್ರೆಗೆ ಬರೋ ಬಡ ಜನರು, ವೈದ್ಯರು ಆಸ್ಪತ್ರೆಯಲ್ಲಿ ಇಲ್ಲ ಎಂದು ದಾದಿಯರ ಬಳಿ ಇಂಜೆಕ್ಷನ್ ಮತ್ತು ಮಾತ್ರೆ ಪಡೆದು ಸುಮ್ಮನೆ ಮನೆಗೆ ವಾಪಾಸ್ ಹೋಗುವಂತಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

ಹೌದು… ಇದು ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ (Peresandra, Chikkaballapur) ಪ್ರಾಥಮಿಕ ಆರೋಗ್ಯ ಕೇಂದ್ರ, ಆರೋಗ್ಯ ಕೇಂದ್ರದ ನಾಮಫಲಕ ನೋಡಿದ್ರೆ 24×7 ಅಂತಿದೆ. ಅಂದ್ರೆ 24 ಗಂಟೆಯೂ ವೈದ್ಯಕೀಯ ಸೇವೆ ಲಭ್ಯವಿದೆ ಎಂದರ್ಥ. ಆದ್ರೆ ಅದಿಲ್ಲಿ ಅನರ್ಥವಾಗಿದೆ. 24 ಗಂಟೆ ಅಲ್ಲ 12 ಗಂಟೆಯೂ ಸಮರ್ಪಕ ವೈದ್ಯಕೀಯ ಸೇವೆ ಜನರಿಗೆ ಸಿಗ್ತಾ ಇಲ್ಲ. ಅಂದಹಾಗೆ ಈ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ವರ್ಗಾವಣೆಗೊಂಡು ಆರು ತಿಂಗಳುಗಳೇ ಕಳೆದಿವೆ. ಆದ್ರೆ ಇದುವರೆಗೂ ಒಬ್ಬ ಖಾಯಂ ವೈದ್ಯರನ್ನ ಈ ಆಸ್ಪತ್ರೆಗೆ ನೇಮಕ ಮಾಡಲಾಗಿಲ್ಲ. ಇದ್ರಿಂದ ಸುತ್ತಮುತ್ತಲ ಹತ್ತಾರು ಜನರಿಗೆ ಸೂಕ್ತ ವೈದ್ಯಕೀಯ ಸೌಲಭ್ಯಗಳು ಸಿಗದೆ ಪರದಾಡ್ತಿದ್ದಾರೆ ಎಂದು ಆಸ್ಪತ್ರೆಗೆ ಆಗಮಿಸಿದ್ದ ರೋಗಿ ನರಸಿಂಹರೆಡ್ಡಿ ಕ್ಲುಪ್ತವಾಗಿ ಆಸ್ಪತ್ರೆಯ ದುಃಸ್ಥಿತಿಯನ್ನು ವಿವರಿಸಿದ್ದಾರೆ.

Also Read: ಭರ್ಜರಿಯಾಗಿ ಬೆಳೆಯುತ್ತಿದೆ ಹೆಬ್ಬಾವು ಮಾಂಸ ಮಾರುಕಟ್ಟೆ! ಬನ್ನೀ ಒಂದು ರೌಂಡ್ ಹಾಕಿಬರೋಣ

ಸ್ವತಃ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹಾಗೂ ಸ್ವತಃ ವೈದ್ಯರೂ ಆದ ನೂತನ ಸಂಸದ ಡಾ.ಕೆ. ಸುಧಾಕರ್ ಸ್ವಗ್ರಾಮವೂ ಸಹ ಇದೇ ಪೇರೇಸಂದ್ರ ಆಗಿದೆ. ಶಾಸಕರು-ಸಂಸದರ ಸ್ವಗ್ರಾಮದಲ್ಲಿ ಈ ರೀತಿ ವೈದ್ಯರೇ ಇಲ್ಲವೆಂದರೆ ಪರಿಸ್ಥಿತಿ ಇನ್ನೆಷ್ಟು ಶೋಚನೀಯವಾಗಿದೆ ನೀವೇ ಊಹಿಸಿ. ಆದ್ರೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಜಿಲ್ಲಾ ಆರೋಗ್ಯಾಧಿಕಾರಿ ಎಸ್.ಎಸ್. ಮಹೇಶಕುಮಾರ್ ಅಸಹಾಯಕತೆ ವ್ಯಕ್ತಪಡಿಸಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರಿಲ್ಲ. ಬೇರೆ ಬೇರೆ ಆಸ್ಪತ್ರೆಯ ವೈದ್ಯರುಗಳನ್ನು ಸರದಿಯಂತೆ ನಿಯೋಜನೆ ಮಾಡ್ತಿದ್ದೇವೆ ಎಂದು ಕೈ ಚೆಲ್ಲಿದ್ದಾರೆ.

ಶಾಸಕ ಪ್ರದೀಪ್ ಈಶ್ವರ್ ಹಾಗೂ ಸಂಸದ ಡಾ.ಕೆ ಸುಧಾಕರ್ ಸ್ವಗ್ರಾಮದಲ್ಲೆ ಸರ್ಕಾರಿ ವೈದ್ಯರಿಲ್ಲ, ಇರುವ ದಾದಿಯರು ದಿಕ್ಕುತೋಚದೆ ಬಂದ ರೋಗಿಗಳನ್ನು ಸಾಗ ಹಾಕ್ತಿದ್ದಾರೆ. ಇನ್ನು ಮುಂದಾದ್ರು… ಶಾಸಕರು ಹಾಗೂ ಸಂಸದರು ತಮ್ಮೂರಿನ ಆಸ್ಪತ್ರೆಯತ್ತ ಚಿತ್ತ ಹರಿಸುತ್ತಾರಾ, ಆಸ್ಪತ್ರೆಗೆ ಬಡಿದಿರುವ ರೋಗಕ್ಕೆ ಚಿಕಿತ್ಸೆ ಕೊಡುತ್ತಾರಾ? ಕಾದು ನೋಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಗದಗ: ಗೋದಾಮಿನಲ್ಲಿ ಲಕ್ಷಾಂತರ ಮೌಲ್ಯದ ಅಕ್ಕಿ, ಗೋಧಿ ಹುಳುಗಳ ಪಾಲು
ಗದಗ: ಗೋದಾಮಿನಲ್ಲಿ ಲಕ್ಷಾಂತರ ಮೌಲ್ಯದ ಅಕ್ಕಿ, ಗೋಧಿ ಹುಳುಗಳ ಪಾಲು
ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿಚಾರಣೆ ಏಕೆ
ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿಚಾರಣೆ ಏಕೆ
Horoscope: ಈ ರಾಶಿಯವರಿಗೆ ಇಂದು ಪಿತ್ರಾರ್ಜಿತ ಸಂಪತ್ತಗಳು ಸಿಗುವ ಸಾಧ್ಯತೆ
Horoscope: ಈ ರಾಶಿಯವರಿಗೆ ಇಂದು ಪಿತ್ರಾರ್ಜಿತ ಸಂಪತ್ತಗಳು ಸಿಗುವ ಸಾಧ್ಯತೆ
ಹನುಮಂತನಿಗೆ ವೀಳ್ಯದೆಲೆ ಮಾಲೆ ಧಾರಣೆಯ ಮಹತ್ವವೇನು?
ಹನುಮಂತನಿಗೆ ವೀಳ್ಯದೆಲೆ ಮಾಲೆ ಧಾರಣೆಯ ಮಹತ್ವವೇನು?
ಸ್ಯಾಮ್​ಸಂಗ್ ಸ್ಮಾರ್ಟ್​ ಟಿವಿ ಸರಣಿಯಲ್ಲಿ ಮತ್ತೊಂದು ಲೇಟೆಸ್ಟ್​ ಮಾಡೆಲ್
ಸ್ಯಾಮ್​ಸಂಗ್ ಸ್ಮಾರ್ಟ್​ ಟಿವಿ ಸರಣಿಯಲ್ಲಿ ಮತ್ತೊಂದು ಲೇಟೆಸ್ಟ್​ ಮಾಡೆಲ್
ಡಿಎನ್​ಎ ಟೆಸ್ಟ್​ ಮಾಡಿಸಲು ಆಸ್ಪತ್ರೆಗೆ ತೆರಳುವಾಗಿ ಟೆನ್ಷನ್​ ಆದ ಪವಿತ್ರಾ
ಡಿಎನ್​ಎ ಟೆಸ್ಟ್​ ಮಾಡಿಸಲು ಆಸ್ಪತ್ರೆಗೆ ತೆರಳುವಾಗಿ ಟೆನ್ಷನ್​ ಆದ ಪವಿತ್ರಾ
ಡಿಕೆ ಶಿವಕುಮಾರ್​ ಸಭೆಗೂ ಕೈಕೊಟ್ಟ ವಿದ್ಯುತ್: ಅಧಿಕಾರಿಗಳ ಸರ್ಕಸ್ ನೋಡಿ
ಡಿಕೆ ಶಿವಕುಮಾರ್​ ಸಭೆಗೂ ಕೈಕೊಟ್ಟ ವಿದ್ಯುತ್: ಅಧಿಕಾರಿಗಳ ಸರ್ಕಸ್ ನೋಡಿ
ಆಕಾಶದಲ್ಲಿದ್ದ ವಿಮಾನದಲ್ಲಿ ಕೈಕೊಟ್ಟ AC, ಪ್ರಯಾಣಿಕರ ಪರದಾಟ: ವಿಡಿಯೋ ನೋಡಿ
ಆಕಾಶದಲ್ಲಿದ್ದ ವಿಮಾನದಲ್ಲಿ ಕೈಕೊಟ್ಟ AC, ಪ್ರಯಾಣಿಕರ ಪರದಾಟ: ವಿಡಿಯೋ ನೋಡಿ
‘ಡೆವಿಲ್​ ಎದುರು ನನ್ನ ಸಿನಿಮಾ ರಿಲೀಸ್​’: ಪ್ರಥಮ್​ ಬಹಿರಂಗ ಸವಾಲು
‘ಡೆವಿಲ್​ ಎದುರು ನನ್ನ ಸಿನಿಮಾ ರಿಲೀಸ್​’: ಪ್ರಥಮ್​ ಬಹಿರಂಗ ಸವಾಲು
ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡಕ್ಕೆ ಧುಮುಕಿದ ಡಿಕೆ ಶಿವಕುಮಾರ್‌
ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡಕ್ಕೆ ಧುಮುಕಿದ ಡಿಕೆ ಶಿವಕುಮಾರ್‌