ಚಿಕ್ಕಬಳ್ಳಾಪುರ: ಅಕ್ರಮ ಮದ್ಯ ಮಾರಾಟ ಹಾವಳಿ ತಪ್ಪಿಸಲು ಠಾಣೆಗೆ ದೂರು ನೀಡಿದ ಗ್ರಾಮ ಪಂಚಾಯಿತಿ ಸದಸ್ಯನಿಗೆ ಪೊಲೀಸರು ಬೈದು ಕಳಿಸಿದ ಆರೋಪ ಕೇಳಿ ಬಂದಿದ್ದು ಗ್ರಾ.ಪಂ. ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಘಟನೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ.
ಗ್ರಾಮ ಪಂಚಾಯಿತಿ ಚುನಾವಣೆ ನಡೆಯುವ ವೇಳೆ ಗ್ರಾಮದಲ್ಲಿರುವ ಅಕ್ರಮ ಮದ್ಯೆ ಮಾರಾಟ ತಡೆಗಟ್ಟುವುದಾಗಿ ಹೇಳಿ ಮತ ಪಡೆದು ಗ್ರಾಮ ಪಂಚಾಯತಿ ಸದಸ್ಯನಾಗಿದ್ದ ವೆಂಕಟೇಶ್ ಈಗ ಅಕ್ರಮ ಮದ್ಯೆ ತಡೆಗಟ್ಟಲು ಆಗ್ತಿಲ್ಲ. ಸ್ವತಃ ಪೊಲೀಸರು ಅಧಿಕಾರಿಗಳು ತನಗೆ ಬುದ್ದಿವಾದ ಹೇಳಿ ಕಳಿಸ್ತಾರೆ ಅಂತ ಬೇಸರ ಮಾಡಿಕೊಂಡ ಗ್ರಾಮ ಪಂಚಾಯತಿ ಸದಸ್ಯ ತನ್ನ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಚಿಕ್ಕಬಳ್ಳಾಫುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಕನಗಾನಕೊಪ್ಪ ನಿವಾಸಿ ಹಾಗೂ ಮೀನಕನಗುರ್ಕಿ ಗ್ರಾಮ ಪಂಚಾಯಿತಿ ಸದಸ್ಯನಾಗಿರುವ ವೆಂಕಟೇಶ್ ಮತದಾರರ ಭರವಸೆ ಹಿಡೇರಿಸಲು ಆಗಲಿಲ್ಲ ಅಂತ ರಾಜೀನಾಮೆ ಸಲ್ಲಿಸಿದ್ದಾರೆ.
ಕನಗಾನಕೊಪ್ಪ ಗ್ರಾಮದ ವಾರ್ಡ ನಂಬರ್ 4ರಿಂದ ಗ್ರಾಮ ಪಂಚಾಯಿತಿ ಸದಸ್ಯನಾಗಿ ಆಯ್ಕೆ ಆಗಿರುವ ವೆಂಕಟೇಶ, ಗ್ರಾಮದ ಶ್ರೀನಾಥ್ ಚಿಲ್ಲರೆ ಅಂಗಡಿ, ಶ್ರೀರಂಗಪ್ಪ ಚಿಲ್ಲರೆ ಅಂಗಡಿ. ಮಲ್ಲೇಶ ಚಿಲ್ಲರೆ ಅಂಗಡಿ, ನಾರಾಯಣಪ್ಪ ಚಿಲ್ಲರೆ ಅಂಗಡಿಯಲ್ಲಿ ನಾಲ್ಕು ಕಡೆ ಅಕ್ರಮ ಮದ್ಯ ಮಾರಾಟವಾಗ್ತಿದೆ, ಗ್ರಾಮದ ಯುವಕರು ಕುಡಿದು ಹಾಳಾಗುತ್ತಿದ್ದಾರೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡಬೇಡಿ ಅಂತ ಅಂಗಡಿಯವರಿಗೆ ಹೇಳಿದ್ದರು. ಆದ್ರೆ ಸ್ಥಳಿಯ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಸ್ಥಳೀಯರ ಮಾತು ಕೇಳದೆ ಅಂಗಡಿಯವರು ನಿರಂತರವಾಗಿ ಅಕ್ರಮ ಮದ್ಯ ಮಾರಾಟ ಮಾಡ್ತಿದ್ದಾರೆ. ಇನ್ನೂ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯದ ಅಮಲಿಗೆ ಕಡಿವಾಣ ಹಾಕುವಂತೆ ಸದಸ್ಯ ವೆಂಕಟೇಶ ಸ್ಥಳೀಯ ಮಂಚೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ರು. ಅವರು ಕ್ರಮ ಕೈಗೊಳ್ಳುವುದರ ಬದಲು ವೆಂಕಟೇಶಗೆ ಬುದ್ದಿವಾದ ಹೇಳಿ ಬೈದು ಕಳುಹಿಸಿದರೆಂದು ವೆಂಕಟೇಶ ಆರೋಪ ಮಾಡಿದ್ದಾರೆ.
ಇನ್ನೂ ಗೌರಿಬಿದನೂರು ತಾಲೂಕು ಅಬಕಾರಿ ಇಲಾಖೆಗೆ ದೂರು ನೀಡಿದ್ರು ಅಧಿಕಾರಿಗಳು ಅಕ್ರಮ ಮದ್ಯದ ವಿರುದ್ದ ಕ್ರಮ ಕೈಗೊಳ್ಳುವುದರ ಬದಲು ವೆಂಕಟೇಶಗೆ ಬುದ್ದಿವಾದ ಹೇಳಿ ಕಳುಹಿಸಿದ್ದಾರೆ. ಇದ್ರಿಂದ ಬೇಸತ್ತ ವೆಂಕಟೇಶ ಈಗ ಮಿಣಕನಗುರ್ಕಿ ಗ್ರಾಮ ಪಂಚಾಯತಿ ಅದ್ಯಕ್ಷ ಎಂ.ವಿ.ಕಾಂತರಾಜ್ ಗೆ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅಕ್ರಮ ಮದ್ಯ ಮಾರಾಟ ಮಾಡಬೇಡಿ ಅಂದಿಕ್ಕೆ ಗಲಾಟೆ
ವೆಂಕಟೇಶ ಹಾಗೂ ಅವರ ಸ್ನೇಹಿತರು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಟ ಮಾಡಬೇಡಿ ಅಂತ ಬುದ್ದಿವಾದ ಹೇಳಿ ಪೊಲೀಸರಿಗೆ ದೂರು ನೀಡಿದ್ದಕ್ಕೆ ಅಕ್ರಮ ಮದ್ಯ ಮಾರಾಟ ಮಾಡುವ ಶ್ರೀನಾಥ್ ಚಿಲ್ಲರೆ ಅಂಗಡಿ, ಶ್ರೀರಂಗಪ್ಪ ಚಿಲ್ಲರೆ ಅಂಗಡಿ. ಮಲ್ಲೇಶ ಚಿಲ್ಲರೆ ಅಂಗಡಿ, ನಾರಾಯಣಪ್ಪ ಚಿಲ್ಲರೆ ಅಂಗಡಿಯವರು ವೆಂಕಟೇಶ ಹಾಗೂ ಅವರ ಸ್ನೇಹಿತರ ವಿರುದ್ದ ಗಲಾಟೆ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ವೆಂಕಟೇಶ ಕಂಡ ಕಡೆಯೆಲ್ಲಾ ಅಂಗಡಿಯವರು ಗಲಾಟೆ ಮಾಡುತ್ತಿದ್ದಾರೆ ಅಂತ ವೆಂಕಟೇಶ ಅಳಲು ತೊಡಿಕೊಂಡಿದ್ದಾರೆ.
ಇದನ್ನೂ ಓದಿ: ದ್ವೈತ ಮಠಕ್ಕೆ ಸೇರಿದ ಪ್ರಸನ್ನ ಸುಬ್ರಹ್ಮಣ್ಯ ದೇವಾಲಯ; ಏಳು ಹೆಡೆಗಳ ನಾಗದೇವತೆಯ ವಿಶೇಷತೆ ಏನು ಗೊತ್ತಾ?
Published On - 8:41 am, Fri, 24 September 21