ದ್ವೈತ ಮಠಕ್ಕೆ ಸೇರಿದ ಪ್ರಸನ್ನ ಸುಬ್ರಹ್ಮಣ್ಯ ದೇವಾಲಯ; ಏಳು ಹೆಡೆಗಳ ನಾಗದೇವತೆಯ ವಿಶೇಷತೆ ಏನು ಗೊತ್ತಾ?

ರಾಮನಾಥಪುರ ದೇಗುಲಗಳ ನಗರಿ ಎಂದೇ ಪ್ರಸಿದ್ಧವಾಗಿರುವ ಈ ಗ್ರಾಮದಲ್ಲಿ ರಾಮೇಶ್ವರ, ನರಸಿಂಹ, ಪ್ರಸನ್ನ ಸುಬ್ರಹ್ಮಣ್ಯ ಸೇರಿದಂತೆ ಹಲವು ದೇಗುಲಗಳು ಭಕ್ತರನ್ನು ಹರಸಿ ಹಾರೈಸುತ್ತಿವೆ. ಎಲ್ಲಾ ದೇವಾಲಯಗಳಿಗೂ ಮಧ್ಯದಲ್ಲಿರುವ ಪ್ರಸನ್ನ ಸುಬ್ರಹ್ಮಣ್ಯ ದೇಗುಲ ಸುತ್ತಮುತ್ತಲ ಜಿಲ್ಲೆಗಳ ಲಕ್ಷ ಲಕ್ಷ ಭಕ್ತರ ಆರಾಧ್ಯ ದೈವ.

ದ್ವೈತ ಮಠಕ್ಕೆ ಸೇರಿದ ಪ್ರಸನ್ನ ಸುಬ್ರಹ್ಮಣ್ಯ ದೇವಾಲಯ; ಏಳು ಹೆಡೆಗಳ ನಾಗದೇವತೆಯ ವಿಶೇಷತೆ ಏನು ಗೊತ್ತಾ?
ಪ್ರಸನ್ನ ಸುಬ್ರಹ್ಮಣ್ಯ ದೇಗುಲ
Follow us
TV9 Web
| Updated By: preethi shettigar

Updated on:Sep 24, 2021 | 8:32 AM

ಹಾಸನ: ಹಲವು ಐತಿಹಾಸಿಕ ದೇಗುಲಗಳನ್ನು ಹೊಂದಿರುವ ಜಿಲ್ಲೆ ಎಂದರೆ ಅದು ಹಾಸನ. ಇತಿಹಾಸ ಪ್ರಸಿದ್ಧ, ಸುಂದರ ವಾಸ್ತುಶಿಲ್ಪಗಳ ನೆಲೆಬೀಡು, ಜೊತೆಗೆ ಇಲ್ಲಿನ ಧಾರ್ಮಿಕ ಶ್ರದ್ಧಾ ಕೇಂದ್ರಗಳೂ ಕೂಡ ಭಕ್ತರನ್ನು ಸೆಳೆಯುತ್ತವೆ. ಅದರಲ್ಲೂ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಶ್ರೀ ಪ್ರಸನ್ನ ಸುಬ್ರಹ್ಮಣ್ಯ ದೇಗುಲ ದಕ್ಷಿಣ ಕರ್ನಾಟಕದ ಜನರ ಪಾಲಿಗೆ ಕುಕ್ಕೇ ಸುಬ್ರಹ್ಮಣ್ಯ ದೇಗುಲದಷ್ಟೇ ಪ್ರಸಿದ್ಧಿ ಪಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಅದೀನದಲ್ಲೇ ಇರುವ ಈ ದೇಗಲದಲ್ಲಿ ಸುಬ್ರಹ್ಮಣ್ಯನ ವಿಗ್ರಹವೇ ಮೂಲ ವಿಗ್ರಹ ಎಂದೂ ಕೂಡ ಹೇಳಲಾಗುತ್ತದೆ.

ರಾಮನಾಥಪುರ ದೇಗುಲಗಳ ನಗರಿ ಎಂದೇ ಪ್ರಸಿದ್ಧವಾಗಿರುವ ಈ ಗ್ರಾಮದಲ್ಲಿ ರಾಮೇಶ್ವರ, ನರಸಿಂಹ, ಪ್ರಸನ್ನ ಸುಬ್ರಹ್ಮಣ್ಯ ಸೇರಿದಂತೆ ಹಲವು ದೇಗುಲಗಳು ಭಕ್ತರನ್ನು ಹರಸಿ ಹಾರೈಸುತ್ತಿವೆ. ಎಲ್ಲಾ ದೇವಾಲಯಗಳಿಗೂ ಮಧ್ಯದಲ್ಲಿರುವ ಪ್ರಸನ್ನ ಸುಬ್ರಹ್ಮಣ್ಯ ದೇಗುಲ ಸುತ್ತಮುತ್ತಲ ಜಿಲ್ಲೆಗಳ ಲಕ್ಷ ಲಕ್ಷ ಭಕ್ತರ ಆರಾಧ್ಯ ದೈವವಾಗಿದೆ.

ಸುಬ್ರಹ್ಮಣ್ಯ ಸ್ವಾಮಿ ದೇಗುಲದ ಇತಿಹಾಸ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ದೇಗುಲ ಸ್ಥಾಪನೆ ಹಿಂದೆ ಒಂದು ಸುಂದರ ಕತೆಯೇ ಇದೆ. ಶ್ರೀ ಸಂಫುಟ ಮಠದ 14ನೇ ಯತಿಗಳಾದ ಶ್ರೀ ವಿಭುದೇಶ ತಿರ್ಥರು ಲೋಕ ಸಂಚಾರ ಮಾಡುತ್ತಾ ಕಾವೇರಿ ನದಿ ದಂಡೆಯಲ್ಲಿರುವ ರಾಮನಾಥಪುರದಕ್ಕೆ ಬಂದು ತಂಗಿದ್ದರಂತೆ. ರಾತ್ರಿ ನಿದ್ರೆಯಲ್ಲಿರುವಾಗ ಗುರುಗಳ ಕನಸ್ಸಿನಲ್ಲಿ ಪ್ರತ್ಯಕ್ಷವಾದ ಭಗವಂತ ಈ ಸ್ಥಳದಲ್ಲಿ ತನಗೊಂದು ದೇಗುಲ ಕಟ್ಟಿಸುವಂತೆ ಆಜ್ಞಾಪಿಸಿದರಂತೆ. ಅದೇ ದಿನ ಈ ಭಾಗದ ಪಾಳೆಗಾರನಾಗಿದ್ದ ಹೊಳೆನರಸೀಪುರದ ಶ್ರೀ ನರಸಪ್ಪ ನಾಯಕ ಕನಸಿನಲ್ಲಿ ಪ್ರತ್ಯಕ್ಷನಾದ ದೇವರು ವಿಭುದೇಶ ತೀರ್ಥರು ನಿರ್ಮಿಸುವ ದೇಗುಲಕ್ಕೆ ನೆರವು ನೀಡವಂತೆ ಆದೇಶಿಸಿದರಂತೆ. ಹೀಗೆ ನೆರವು ನೀಡಿದರೆ ಪುತ್ರ ಸಂತಾನ ಇಲ್ಲದ ನಾಯಕನಿಗೆ ಪುತ್ರ ಸಂತಾನ ಪ್ರಾಪ್ತಿಯಾಗುವುದಾಗಿ ಹೇಳಿದರಂತೆ. ಅದರಂತೆ ಮರುದಿನವೇ ರಾಮನಾಥಪುರಕ್ಕೆ ಬಂದ ನರಸಪ್ಪ ನಾಯಕ, ದೇಗುಲ ಕಟ್ಟಿಸಲು ನೆರವಾಗಿ ಕರುನಾಡಿನ ಜೀವನದಿ ಕಾವೇರಿಯ ದಂಡೆ ಮೇಲೆ ಸುಂದರವಾದ ದೇಗುಲ ನಿರ್ಮಾಣವಾಯಿತು.

ಬಳಿಕ ಪಾಳೆಗಾರನಾದ ನರಸಪ್ಪ ನಾಯಕನಿಗೆ ಗಂಡು ಮಗುವಿನ ಜನನವಾಯಿತಂತೆ. ಅಂದಿನಿಂದ ಇಂದಿನವರೆಗೂ ಇಲ್ಲಿನ ದೇಗುಲಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಆಗಮಿಸುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಸಿಕೊಂಡು ದೇವರಿಗೆ ನಮಿಸುತ್ತಾರೆ. ಸುಮಾರು 450 ವರ್ಷಗಳ ಇತಿಹಾಸ ಹೊಂದಿರುವ ಈ ದೇಗುಲ, ಮದ್ವ ಪರಂಪರೆಯನ್ನು ಅನುಸರಿಸುವ ದ್ವೈತ ಸಂಪ್ರದಾಯದ ಮಠಕ್ಕೆ ಸೇರಿದ ದೇವಾಲಯವಾಗಿದೆ.

ಏಳು ಹೆಡೆಗಳ ನಾಗದೇವತೆ ಕುಕ್ಕೆ ಸುಬ್ರಹ್ಮಣ್ಯದ ಮೂಲ ದೇವರೇ ಇಲ್ಲಿರೋದು ಎಂದು ಕೂಡ ಹೇಳಲಾಗುತ್ತದೆ. ಇಲ್ಲಿನ ಪ್ರಸನ್ನ ಸುಬ್ರಹ್ಮಣ್ಯ ದೇವರ ತಲೆಯ ಮೇಲೆ ಏಳು ಹೆಡೆಗಳ ನಾಗದೇವತೆ ಇದೆ. ಇಲ್ಲಿನ ವಿಗ್ರಹವನ್ನು ಕಪ್ಪು ಬಣ್ಣದ ಸಾಲಿಗ್ರಾಮ ಶಿಲೆಯಿಂದ ನಿರ್ಮಿಸಲಾಗಿದೆ. ವರ್ಷದ ಕೊನೆಯ ಷಷ್ಠಿಯ ಡಿಸೆಂಬರ್ -ಜನವರಿ ತಿಂಗಳ ಸಂದರ್ಭದಲ್ಲಿ ಒಂದು ತಿಂಗಳು ಇಲ್ಲಿ ಜಾತ್ರೆ ನಡೆಯುತ್ತದೆ. ಮಹಾ ರಥೋತ್ಸವಕ್ಕೆ ರಾಜ್ಯದ ವಿವಿಧೆಡೆಗಳಿಂದ ಸಾಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇಲ್ಲಿನ ಕಾವೇರಿ ನದಿಯಲ್ಲಿ ಮಿಂದು, ಪ್ರಸನ್ನ ಸುಬ್ರಹ್ಮಣ್ಯನ ದರ್ಶನ ಮಾಡಿದರೆ ಸಕಲ ಪಾಪ ಕರ್ಮಗಳು ಅಳಿಯುತ್ತವೆ ಎನ್ನುವುದು ಭಕ್ತರ ನಂಬಿಕೆ.

ಕುಕ್ಕೆ ಸುಬ್ರಹ್ಮಣ್ಯದಂತೆ ಇಲ್ಲಿಯೂ ನಾಗ ಪ್ರತಿಷ್ಠೆ, ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ಹಲವು ಪೂಜೆಗಳನ್ನು ನೆರವೇರಿಸಲಾಗುತ್ತದೆ. ಸಂತಾನ ಹೀನತೆ, ಸರ್ಪದೋಷ, ಚರ್ಮ ವ್ಯಾದಿಗೆ ಪ್ರಮುಖವಾಗಿ ಭಕ್ತರು ಹರಕೆ ಹೊತ್ತು, ಇಲ್ಲಿಗೆ ಬಂದು ದೇವರಿಗೆ ದರ್ಶನ ಮಾಡಿ, ಹೋಗುತ್ತಾರೆ. ತಮ್ಮ ಇಷ್ಟಾರ್ಥ ಸಿದ್ಧಿಸಿದ ಬಳಿಕ ದೇವರಿಗೆ ಹರಕೆಯನ್ನು ತೀರಿಸುತ್ತಾರೆ. ಬುದ್ಧಿಗೆ ಪ್ರಚೋದಕನಾದ ಸುಬ್ರಹ್ಮಣ್ಯ ಹಾಗೂ ಸಂತತಿ, ಸಂಪತ್ತು, ಆರೋಗ್ಯಕ್ಕೆ ಅಧಿಪತಿಯಾದ ನಾಗದೇವರು ಇರುವ ಮನುಷ್ಯನ ಮೂಲಭೂತ ಅವಶ್ಯಕತೆ ಪೂರೈಸುವ ಉಭಯ ದೇವರುಗಳು ನೆಲೆಸಿರುವ ವಿಶಿಷ್ಟ ತಾಣ ಈ ರಾಮನಾಥಪುರ.

ಜಿಲ್ಲಾ ಕೇಂದ್ರ ಹಾಸನದಿಂದ 45 ಕಿಲೋಮೀಟರ್. ಅರಕಲಗೂಡಿನಿಂದ 18 ಕಿಲೋಮೀಟರ್ ದೂರದಲ್ಲಿರುವ ಈ ದೇಗುಲಕ್ಕೆ ಮೈಸೂರಿನಿಂದ ಕೆ.ಆರ್.ನಗರ ಮಾರ್ಗವಾಗಿ, ಕೊಡಗಿನಿಂದ ಕುಶಾಲನಗರ ಮಾರ್ಗವಾಗಿ, ಬೆಂಗಳೂರಿನಿಂದ ಹೊಳೆನರಸೀಪುರ ಮಾರ್ಗವಾಗಿ ತಲುಪಬಹುದಾಗಿದೆ. ನಿತ್ಯವೂ ಇಲ್ಲಿ ಅನ್ನ ಸಂತರ್ಪಣೆ ನೆರವೇರುತ್ತದೆ. ಭಕ್ತಾದಿಗಳ ಬಹುದಿನಗಳ ಬೇಡಿಕೆಯಂತೆ ಇತ್ತೀಚೆಗೆ ಇಲ್ಲಿ 9 ಅಡಿ ಎತ್ತರದ 64 ಕೆಜಿ ತೂಕದ ಸುಂದರ ಬೆಳ್ಳಿಯ ರಥವೂ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿಯ ಉತ್ಸವಕ್ಕಾಗಿ ಲಭ್ಯವಾಗಿದ್ದು, ಭಕ್ತರ ಖುಷಿಯನ್ನು ಇಮ್ಮಡಿಗೊಳಿಸಿದೆ.

ವರದಿ: ಮಂಜುನಾಥ್ ಕೆ.ಬಿ ಇದನ್ನೂ ಓದಿ: ಹೊಯ್ಸಳ ಪದ ಹುಟ್ಟಿಗೆ ಕಾರಣವೇನು ಗೊತ್ತಾ? ವಸಂತಿಕಾದೇವಿ ದೇವಾಲಯದ ಇತಿಹಾಸ ಇಲ್ಲಿದೆ

ಬೀದರ್: ರಾಕ್ಷಸರಿಂದ ನಿರ್ಮಾಣವಾದ ಆಂಜನೇಯ ದೇವಾಲಯ; ಇಲ್ಲಿನ ಹನುಮಂತನಿಗಿದೆ 2 ಸಾವಿರ ವರ್ಷಗಳ ಇತಿಹಾಸ

Published On - 8:31 am, Fri, 24 September 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್