ಹಾಸನ: ದೊಡ್ಡಗದ್ದವಳ್ಳಿಯ ಮಹಾಕಾಳಿ ದೇಗುಲಕ್ಕೆ 1 ವರ್ಷದಿಂದ ಬೀಗ; ಪುರಾತತ್ವ ಇಲಾಖೆ ನಿರ್ಲಕ್ಷ್ಯಕ್ಕೆ ಜನರ ಅಸಮಾಧಾನ

Hassan News: ದೇವಿ ದರ್ಶನಕ್ಕೆ ಬಂದು ಪೂಜೆಯಿಲ್ಲದ ಕಾರಣ ಹೊರಗಿನಿಂದಲೇ ಭಕ್ತರು ನಮಿಸಿ ಹೋಗುತ್ತಿದ್ದಾರೆ. ಭಗ್ನಗೊಂಡ ಮೂರ್ತಿಗೆ ಪೂಜೆ ಇಲ್ಲದ ಕಾರಣ ನಿತ್ಯ ಪೂಜೆ ಸ್ಥಗಿತವಾಗಿದೆ. ಹೊಸ ವಿಗ್ರಹ ಮಾಡಿಸಿ‌ ಪೂಜೆ‌ಸಲ್ಲಿಸಲು ಪುರಾತತ್ವ ಇಲಾಖೆ ಇನ್ನೂ ವ್ಯವಸ್ಥೆ ಮಾಡಿಲ್ಲ.

ಹಾಸನ: ದೊಡ್ಡಗದ್ದವಳ್ಳಿಯ ಮಹಾಕಾಳಿ ದೇಗುಲಕ್ಕೆ 1 ವರ್ಷದಿಂದ ಬೀಗ; ಪುರಾತತ್ವ ಇಲಾಖೆ ನಿರ್ಲಕ್ಷ್ಯಕ್ಕೆ ಜನರ ಅಸಮಾಧಾನ
ಹಾಸನ ದೇಗುಲದ ಒಂದು ಚಿತ್ರ
Follow us
TV9 Web
| Updated By: ganapathi bhat

Updated on: Sep 24, 2021 | 3:57 PM

ಹಾಸನ: ದಕ್ಷಿಣ ಭಾರತದ ಶಕ್ತಿ ದೇವತೆ ಮಹಾಕಾಳಿ ದೇಗುಲದ ವಿಚಾರದಲ್ಲಿ ಕೇಂದ್ರ ಪುರಾತತ್ವ ಇಲಾಖೆಯಿಂದ ಮಹಾ ಎಡವಟ್ಟು ಆಗಿದೆ. 900 ವರ್ಷಗಳ ಹಳೆಯ ಮಹಾಕಾಳಿ ಗರ್ಭಗುಡಿಗೆ ಬೀಗ ಹಾಕಲಾಗಿದೆ. ಹಾಸನ ತಾಲೂಕಿನ ದೊಡ್ಡಗದ್ದವಳ್ಳಿಯಲ್ಲಿರುವ ದೇಗುಲದಲ್ಲಿನ ಕಾಳಿ ವಿಗ್ರಹವು ಭಿನ್ನವಾಗಿತ್ತು. 2020 ರ ನವೆಂಬರ್ 22 ರಂದು ಕಾಳಿ ವಿಗ್ರಹ ಭಿನ್ನವಾಗಿತ್ತು. ಹಾಗಾಗಿ, ಪುರಾತತ್ವ ಇಲಾಖೆಯಿಂದ ಗರ್ಭಗುಡಿಗೆ ಬೀಗ ಹಾಕಲಾಗಿತ್ತು. ಆದರೆ, ಕಳೆದ 1 ವರ್ಷದಿಂದ ಬೀಗ ಹಾಕಲಾಗಿದ್ದು, ಹೊಸ ವಿಗ್ರಹ ಮಾಡಿಸಿ‌ ಇಲಾಖೆ ಪೂಜೆ‌ಗೆ ವ್ಯವಸ್ಥೆ ಮಾಡಿಲ್ಲ. ಪುರಾತತ್ವ ಇಲಾಖೆಯ ಈ ನಿರ್ಲಕ್ಷ್ಯಕ್ಕೆ ಜನರು ಅಸಮಾಧಾನ ಹೊರಹಾಕಿದ್ದಾರೆ.

ಹಾಸನ ತಾಲ್ಲೂಕಿನ ದೊಡ್ಡಗದ್ದವಳ್ಳಿಯ ಐತಿಹಾಸಿಕ ದೇಗುಲದ ಮೇಲೆ ದಿವ್ಯ ನಿರ್ಲಕ್ಷ್ಯ ವಹಿಸಲಾಗಿದೆ. ಕೋಲ್ಕತ್ತದ ಉಗ್ರ ಕಾಳಿ ಬಿಟ್ಟರೆ ದಕ್ಷಿಣ ಭಾರತದ ಸೌಮ್ಯ ಸ್ವರೂಪಿ ಕಾಳಿಮಾತೆ ಎಂದೇ ಖ್ಯಾತವಾಗಿದ್ದ ದೇಗುಲುವನ್ನು ಕಡೆಗಣಿಸಲಾಗಿದೆ. ದೊಡ್ಡಗದ್ದವಳ್ಳಿಯ ಮಹಾಲಕ್ಷ್ಮಿ ಚತುಷ್ಕೂಟ ದೇವಾಲಯದಲ್ಲಿ ಅಚಾತುರ್ಯ ಸಂಭವಿಸಿದೆ ಎಂದು ಜನರು ಅಸಮಾಧಾನ ತೋರಿದ್ದಾರೆ. ಮಹಾಲಕ್ಷ್ಮಿ, ಮಹಾಕಾಳಿ, ಈಶ್ವರ, ಮಹಾವಿಷ್ಣು ನೆಲೆಸಿರುವ ದೇಗುಲ ಇದಾಗಿದೆ. ಒಂದು ವರ್ಷದಿಂದಲೂ ಪೂಜೆ ಇಲ್ಲದೆ ಗರ್ಭಗುಡಿಗೆ ಬೀಗ ಹಾಕಿ ಇಡಲಾಗಿದೆ.

ದೇವಿ ದರ್ಶನಕ್ಕೆ ಬಂದು ಪೂಜೆಯಿಲ್ಲದ ಕಾರಣ ಹೊರಗಿನಿಂದಲೇ ಭಕ್ತರು ನಮಿಸಿ ಹೋಗುತ್ತಿದ್ದಾರೆ. ಭಗ್ನಗೊಂಡ ಮೂರ್ತಿಗೆ ಪೂಜೆ ಇಲ್ಲದ ಕಾರಣ ನಿತ್ಯ ಪೂಜೆ ಸ್ಥಗಿತವಾಗಿದೆ. ಹೊಸ ವಿಗ್ರಹ ಮಾಡಿಸಿ‌ ಪೂಜೆ‌ಸಲ್ಲಿಸಲು ಪುರಾತತ್ವ ಇಲಾಖೆ ಇನ್ನೂ ವ್ಯವಸ್ಥೆ ಮಾಡಿಲ್ಲ. ದೇಶದ ವಿವಿಧೆಡೆಯಿಂದ ದೇವಿ ದರ್ಶನಕ್ಕೆ ಆಗಮಿಸೋ ಭಕ್ತರು ಇದೀಗ ಪುರಾತತ್ತ್ವ ‌ಇಲಾಖೆ ನಿರ್ಲಕ್ಷ್ಯಕ್ಕೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Temple Tour: ಅಮ್ಮನಿಗಾಗಿ ದೇಗುಲ ಕಟ್ಟಿದ ಮಕ್ಕಳು; ವಿಡಿಯೋ ಇದೆ

ಇದನ್ನೂ ಓದಿ: ವಿಧಾನ ಪರಿಷತ್​ನಲ್ಲಿ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ವಿಧೇಯಕ ಅಂಗೀಕಾರ; ವಿಧೇಯಕ ಸಂವಿಧಾನ ವಿರೋಧಿ ಎಂದ ಮರಿತಿಬ್ಬೇಗೌಡ