ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮಕ್ಕೆ ಹೊಂದಿಕೊಂಡಿರುವ ಚನ್ನಗಿರಿ ಹಿಲ್ಸ್ ಈಗ ಪ್ರವಾಸಿಗರ ಹಾಟ್ ಫೇವರಿಟ್ ಸ್ಪಾಟ್ ಆಗಿದೆ. ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಬೆಟ್ಟದಲ್ಲಿ ಸುಂದರ ಜಲಪಾತ ಸೃಷ್ಟಿಯಾಗಿದೆ. ಹೀಗಾಗಿ ನಂದಿಗಿರಿಧಾಮ ನೋಡಲು ಬಂದವರು ಚನ್ನಗಿರಿಯ ಜಲಪಾತ ನೋಡಿ ಖುಷಿ ಪಡ್ತಿದ್ದಾರೆ.
ಇನ್ನು, ಬೆಟ್ಟದ ತುಂಬಾ ಇರೋ ಇಳಿಜಾರುಗಳಲ್ಲಿ ನೀರು ಧುಮ್ಮಿಕ್ಕುತ್ತಿದೆ. ಬೆಟ್ಟದಲ್ಲಿ ಸಂಗ್ರಹವಾಗುವ ಮಳೆ ನೀರು ಒಂದೆಡೆ ಸೇರಿ ನೂರು ಅಡಿ ಮೇಲಿಂದ ನೀರು ಧುಮುಕುತ್ತಿದೆ. ಇನ್ನೂ ಜಲಪಾತದ ಸುತ್ತಲೂ ಪಾಚಿಗಟ್ಟಿದೆ. ಹೀಗಾಗಿ ನೀರು ನೋಡೋ ಹುಮ್ಮಸ್ಸಿನಲ್ಲಿ ಪ್ರವಾಸಿಗರು ಬೀಳುತ್ತಿದ್ದಾರೆ. ಕಳೆದ ವರ್ಷವಂತೂ ಜಲಪಾತ ನೋಡಲು ಬಂದ ಕೆಲವು ಪ್ರವಾಸಿಗರು, ಜೀವ ಕಳೆದುಕೊಂಡಿದ್ರು. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಭಾರಿ ಚಿಕ್ಕಬಳ್ಳಾಪುರ ಜಿಲ್ಲಾ ಅರಣ್ಯ ಇಲಾಖೆ, ಸಿಬ್ಬಂದಿಯನ್ನು ನಿಯೋಜಿಸಿದೆ.
ಸದ್ಯ, ಲಾಕ್ಡೌನ್ನಿಂದ ಬೇಸತ್ತಿದ್ದ ಜನ, ರಿಲ್ಯಾಕ್ಸ್ ಆಗಲು ನಂಧಿಗಿರಿಧಾಮದತ್ತ ಆಗಮಿಸುತ್ತಾರೆ. ಆದ್ರೆ ನಂದಿಗಿರಿಧಾಮಕ್ಕೆ ಪ್ರತಿದಿನ ನಿಗಧಿತ ಪ್ರವಾಸಿಗರ ಪ್ರವೇಶಕ್ಕೆ ಮಾತ್ರ ಅವಕಾಶವಿದೆ. ಜೊತೆಗೆ ವಿಕೇಂಡ್ನಲ್ಲಿ ಸಂಪೂರ್ಣ ಬಂದ್ ಆಗಲಿದೆ. ಹೀಗಾಗಿ ಪ್ರವಾಸಿಗರು ಚನ್ನಗಿರಿ ಫಾಲ್ಸ್ ನೋಡಲು ಬರ್ತಿದ್ದಾರೆ.
ಇದನ್ನೂ ಓದಿ: ತುಂಬಿ ಹರಿಯುವ ಸೇತುವೆ ಮೇಲೆ ದಾಟಲು ಯತ್ನಿಸಿದ ಲಾರಿ ಚಾಲಕ; ಗದಗದ ಬೆಣ್ಣೆ ಹಳ್ಳದಲ್ಲಿ ತಪ್ಪಿತು ಭಾರಿ ಅನಾಹುತ