Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಂಬಿ ಹರಿಯುವ ಸೇತುವೆ ಮೇಲೆ ದಾಟಲು ಯತ್ನಿಸಿದ ಲಾರಿ ಚಾಲಕ; ಗದಗದ ಬೆಣ್ಣೆ ಹಳ್ಳದಲ್ಲಿ ತಪ್ಪಿತು ಭಾರಿ ಅನಾಹುತ

ಜಿಲ್ಲೆಯ ರೋಣ ತಾಲೂಕಿನ ಯಾವಗಲ್ ಗ್ರಾಮ ಬಳಿಯ ಸೇತುವೆ ಅಪಾಯಮಟ್ಟ ಮೀರಿ ಹರಿಯುತ್ತಿದೆ. ನರಗುಂದ ಹಾಗೂ ರೋಣ ಮಾರ್ಗ ಸಂಪರ್ಕ ಕಡಿತವಾಗಿದ್ದು, ವಾಹನ ಸವಾರರು ಪರದಾಟ ಪಡುತ್ತಿದ್ದಾರೆ.

ತುಂಬಿ ಹರಿಯುವ ಸೇತುವೆ ಮೇಲೆ ದಾಟಲು ಯತ್ನಿಸಿದ ಲಾರಿ ಚಾಲಕ; ಗದಗದ ಬೆಣ್ಣೆ ಹಳ್ಳದಲ್ಲಿ ತಪ್ಪಿತು ಭಾರಿ ಅನಾಹುತ
ನೀರಿನ ರಭಸಕ್ಕೆ ಸಿಕ್ಕ ಲಾರಿ
Follow us
TV9 Web
| Updated By: sandhya thejappa

Updated on: Jul 25, 2021 | 1:59 PM

ಗದಗ: ಜಿಲ್ಲೆಯಲ್ಲಿ ಮಳೆ ಅಬ್ಬರ ಇಲ್ಲ. ಆದರೂ ಪ್ರವಾಹದ ಭೀತಿ ಆರಂಭವಾಗಿದೆ. ಮಲಪ್ರಭಾ ನದಿ ಹಾಗೂ ಬೆಣ್ಣೆ ಹಳ್ಳ ಉಕ್ಕಿ ಹರಿಯುತ್ತಿವೆ. ಕ್ಷಣ ಕ್ಷಣಕ್ಕೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಲಪ್ರಭೆ ಉಕ್ಕಿ ಹರಿಯುತ್ತಿರುವುದರಿಂದ ಒಂದು ಗ್ರಾಮ ನಡುಗಡ್ಡೆಯಾಗಿದ್ದರೆ, ಬೆಣ್ಣೆ ಹಳ್ಳದ ಉಗ್ರ ನರ್ತನಕ್ಕೆ ಸೇತುವೆಗಳು ಜಲಾವೃತವಾಗಿವೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಜಲಾಸುರನ ಪಾಲಾಗಿವೆ. ಈ ನಡುವೆ ಬೆಣ್ಣೆ ಹಳ್ಳದ ರಭಸಕ್ಕೆ ಲಾರಿಯೊಂದು ಹಳ್ಳಕ್ಕೆ ವಾಲಿದ್ದು, ಚಾಲಕ ಮತ್ತು ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.

ಜಿಲ್ಲೆಯ ರೋಣ ತಾಲೂಕಿನ ಯಾವಗಲ್ ಗ್ರಾಮ ಬಳಿಯ ಸೇತುವೆ ಅಪಾಯಮಟ್ಟ ಮೀರಿ ಹರಿಯುತ್ತಿದೆ. ನರಗುಂದ ಹಾಗೂ ರೋಣ ಮಾರ್ಗ ಸಂಪರ್ಕ ಕಡಿತವಾಗಿದ್ದು, ವಾಹನ ಸವಾರರು ಪರದಾಟ ಪಡುತ್ತಿದ್ದಾರೆ. ಹರಿಯುತ್ತಿರುವ ನೀರಿನ ನಡುವೆ ಸೇತುವೆ ದಾಟಲು ಯತ್ನಿಸಿದ್ದ ಲಾರಿ, ಬೆಣ್ಣೆ ಹಳ್ಳದಲ್ಲಿ ಸಿಲುಕಿಕೊಂಡು ಭಾಗಶಃ ಮುಳಗಡೆಯಾಗಿದೆ. ಉಕ್ಕಿ ಹರಿಯುವ ಬೆಣ್ಣೆ ಹಳ್ಳದಲ್ಲಿ ಲಾರಿ ದಾಟಿಸಲು ಚಾಲಕ ಪ್ರಯತ್ನ ಮಾಡಿದ್ದಾನೆ. ಆದರೆ ನೀರಿನ ರಭಸಕ್ಕೆ ಲಾರಿ ಹಳ್ಳಕ್ಕೆ ವಾಲಿದೆ.

ಲಾರಿ ಸೇತುವೆ ಪಾಲಾಗುತ್ತೆ ಅಂತಾ ಕಬ್ಬಿಣದ ಚೈನ್ ಹಾಕಿ ಲಾರಿ ಕಾಪಾಡಿಕೊಳ್ಳುವ ಪ್ರಯತ್ನ ಕೂಡಾ ನಡೆದಿದೆ. ಅದೃಷ್ಟವಶಾತ್ ಚಾಲಕ, ಕ್ಲೀನರ್ ಬಚಾವ್ ಆಗಿದ್ದಾರೆ.

ನವಿಲು ತೀರ್ಥ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹರಿಬಿಟ್ಟಿದ್ದು, ಮಲಪ್ರಭಾ ದಡದಲ್ಲಿ ಗ್ರಾಮಗಳಿಗೆ ಪ್ರವಾಹದ ಭೀತಿ ಅರಂಭವಾಗಿದೆ. ಅದರಲ್ಲೂ ಜಿಲ್ಲೆಯ ನರಗುಂದ ತಾಲೂಕಿನ ಲಖಮಾಪುರ ಗ್ರಾಮ ಸಂಪೂರ್ಣ ನಡುಗಡ್ಡೆಯಾಗಿದೆ. ಗ್ರಾಮಸ್ಥರು ಕಾಳಜಿ ಕೇಂದ್ರದಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ಇನ್ನೂ ಕೆಲವರು ಉಕ್ಕಿ ಹರಿಯುವ ಮಲಪ್ರಭಾ ನದಿಯನ್ನು ದಾಟಿ ಅಪಾಯವನ್ನು ಮೈಮೆಲೆ ಎಳೆದುಕೊಳ್ಳುತ್ತಿದ್ದಾರೆ. ಲಖಮಾಪುರ, ವಾಸನ ಹಾಗೂ ಕೊಣ್ಣೂರ ಗ್ರಾಮದ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ನೀರು ಜಲಾವೃತವಾಗಿವೆ. ಲಖಮಾಪುರ ಗ್ರಾಮಕ್ಕೆ ಸೇತುವೆ ನಿರ್ಮಾಣ ಮಾಡುವಂತೆ ಈ ಗ್ರಾಮದ ಜನರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಸರ್ಕಾರ ಕಳೆದ ಮೂರು ವರ್ಷಗಳಿಂದ ಕುಂಟು ನೆಪ ಹೇಳಿಕೊಂಡು ಬರುತ್ತಿದೆ. ಹೀಗಾಗಿಯೇ ಮಲಪ್ರಭಾ ನದಿ ಉಕ್ಕಿ ಹರಿದಾಗ ಗ್ರಾಮವನ್ನು ಬಿಟ್ಟು ಹೋಗುವಂತಹ ಸ್ಥಿತಿ ನಿರ್ಮಾಣವಾಗುತ್ತದೆ ಅಂತ ಗ್ರಾಮಸ್ಥರು ಕಿಡಿಕಾರಿದ್ದಾರೆ. ಸಚಿವರಿಗೆ, ಅಧಿಕಾರಿಗಳಿಗೆ ಪ್ರವಾಹ ಬಂದಾಗ ಮಾತ್ರ ನಮ್ಮ ನೆನಪಾಗುತ್ತೆ. ಪ್ರವಾಹ ಕಡಿಮೆಯಾದ ಬಳಿಕ ನಮ್ಮ ಗ್ರಾಮದತ್ತ ತಿರುಗಿ ನೋಡಿಲ್ಲ ಅಂತ ರೈತ ಪೂರ್ಣಾನಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ

ಮಳೆ ಅಬ್ಬರ ತಗ್ಗಿದರೂ ಬೆಳಗಾವಿಯಲ್ಲಿ ನಿಲ್ಲದ ಭೀತಿ; ಬೆಳೆ ಹಾನಿಗೆ ಪರಿಹಾರ ನೀಡುವಂತೆ ರೈತರ ಆಗ್ರಹ

60 ಅಡಿಯ ತುಂಗಾ ಚಾನಲ್​ಗೆ ಬಿದ್ದ ಹಸು; ಒಂದು ಘಂಟೆ ಕಾರ್ಯಾಚರಣೆ ಯಶಸ್ವಿ

(lorry driver tried to cross between the heavy water in Gadag)

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್