AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

60 ಅಡಿಯ ತುಂಗಾ ಚಾನಲ್​ಗೆ ಬಿದ್ದ ಹಸು; ಒಂದು ಘಂಟೆ ಕಾರ್ಯಾಚರಣೆ ಯಶಸ್ವಿ

ಸ್ಥಳೀಯರು ಮತ್ತು ಹಸು ಮಾಲೀಕ ಶೇಕ್ ದಾವೂದ್ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಮಳೆ ಸುರಿಯುತ್ತಿರುವುದರಿಂದ ಅವರಿಗೆ ಅಷ್ಟು ಆಳದಿಂದ ಹಸು ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. ನಂತರ ಹಸುವಿನ ರಕ್ಷಣೆಗಾಗಿ ಶಿವಮೊಗ್ಗ ಅಗ್ನಿಶಾಮಕ ಕಚೇರಿಗೆ ಕರೆ ಮಾಡಿದ್ದಾರೆ.

60 ಅಡಿಯ ತುಂಗಾ ಚಾನಲ್​ಗೆ ಬಿದ್ದ ಹಸು; ಒಂದು ಘಂಟೆ ಕಾರ್ಯಾಚರಣೆ ಯಶಸ್ವಿ
ಚಾನಲ್​ನಲ್ಲಿ ಸಿಲುಕಿದ್ದ ಹಸು
TV9 Web
| Edited By: |

Updated on: Jul 25, 2021 | 11:00 AM

Share

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಧಾರಾಕಾರ ಮಳೆ ಸುರಿಸುತ್ತಿದೆ. ಪರಿಣಾಮ ಜಿಲ್ಲೆಯ ಪ್ರಮುಖ ನದಿಗಳು ತುಂಬಿ ತುಳುಕುತ್ತಿವೆ. ಮಳೆ ನೀರಿನಿಂದ ತುಂಗಾ ಚಾನಲ್ ಕೂಡಾ ತುಂಬಿ ಹರಿಯುತ್ತಿದೆ. ಈ ನಡುವೆ ನಿನ್ನೆ (ಜುಲೈ 24) ಸಂಜೆ ಶಿವಮೊಗ್ಗ ಹೊರವಲಯದ ಸೋಮಿನಕೊಪ್ಪ ಗ್ರಾಮದ ಜೆ ಎಚ್ ಪಟೇಲ್ ಬಡಾವಣೆಯ 60 ಅಡಿ ತುಂಗಾ ಚಾನಲ್ಗೆ ಕಾಲು ಜಾರಿ 7 ವರ್ಷದ ಹಸು ಬಿದ್ದಿತ್ತು. ಚಾನಲ್ನಲ್ಲಿ ಬಿದ್ದು ಒದ್ದಾಡುತ್ತಿದ್ದ ಹಸುವನ್ನು ನೋಡಿದ ಸ್ಥಳೀಯರು ಮಾಲೀಕನಿಗೆ ಮಾಹಿತಿ ನೀಡಿದ್ದಾರೆ.

ಸ್ಥಳೀಯರು ಮತ್ತು ಹಸು ಮಾಲೀಕ ಶೇಕ್ ದಾವೂದ್ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಮಳೆ ಸುರಿಯುತ್ತಿರುವುದರಿಂದ ಅವರಿಗೆ ಅಷ್ಟು ಆಳದಿಂದ ಹಸು ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. ನಂತರ ಹಸುವಿನ ರಕ್ಷಣೆಗಾಗಿ ಶಿವಮೊಗ್ಗ ಅಗ್ನಿಶಾಮಕ ಕಚೇರಿಗೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ಸ್ಥಳಕ್ಕೆ ಧಾವಿಸಿ 60 ಅಡಿಯ ತುಂಗಾ ಚಾನಲ್ಗೆ ಇಳಿದು ಹಸುವನ್ನು ರಕ್ಷಿಸಿದ್ದಾರೆ.

ಕಾರ್ಯಚರಣೆ ಹೀಗಿತ್ತು ನೀರಿನಲ್ಲಿ ಒದ್ದಾಡುತ್ತಿದ್ದ ಹಸುವಿನ ಕಣ್ಣಿಗೆ ಮೊದಲು ಬಟ್ಟೆ ಕಟ್ಟುತ್ತಾರೆ. ಬಳಿಕ ಹಸುವಿಗೆ ಹಗ್ಗ ಕಟ್ಟಿ ಅದನ್ನು ಮೇಲೆ ಎಳೆಯುವ ಆಪರೇಶನ್ಗೆ ಮುಂದಾಗುತ್ತಾರೆ. ಸುಮಾರು ಒಂದೂವರೆ ಘಂಟೆಯ ಮಳೆಯಲ್ಲೇ ಹರಸಾಹಸ ಪಟ್ಟು ಹಸುವನ್ನು ರಕ್ಷಣೆ ಮಾಡುತ್ತಾರೆ. ಹಸುವನ್ನು ಜೀವಂತವಾಗಿ ಚಾನಲ್ನಿಂದ ಮೇಲೆ ಎತ್ತಲಾಗಿದೆ. ಹಸು ತುಂಬಾ ಗಾಬರಿ ಆಗಿತ್ತು. ಗೋ ಮಾತೆ ರಕ್ಷಣೆ ಮಾಡಿದ ಸಿಬ್ಬಂದಿ ಎಂದು ಸ್ಥಳೀಯರು ಶ್ಲಾಘಿಸಿದ್ದಾರೆ. ಗಾಯಗೊಂಡಿರುವ ಹಸುವಿಗೆ ವೈದ್ಯರಿಂದ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ

ಪ್ರವಾಸಿ ತಾಣವಾದ ಹರಿಹರದ ತುಂಗಭದ್ರಾ ಸೇತುವೆ; ನದಿ ನೋಡಲು ನೂರಾರು ಜನ ಆಗಮನ

Viral Video: ನೀರಿನೊಳಗೆ ದೈತ್ಯಾಕಾರದ ಅನಕೊಂಡಾ ನೋಡಿ ಬೆರಗಾದ ನೆಟ್ಟಿಗರು! ವಿಡಿಯೋ 1 ಮಿಲಿಯನ್ ವ್ಯೂವ್ಸ್

(cow had fallen into the 60 foot Tunga Canal in Shivamogga)

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ