ಚಿಕ್ಕಬಳ್ಳಾಪುರ: ಸರ್ಕಾರಕ್ಕೆ ರಾಜಧನ ವಂಚಿಸಿ ಅಕ್ರಮವಾಗಿ ಗಣಿ ಉತ್ಪನ್ನ ಸಾಗಾಟ ಮಾಡುತ್ತಿರುವ ಪ್ರಕರಣ ಚಿಕ್ಕಬಳ್ಳಾಪುರದಲ್ಲಿ (Chikkaballapura) ಬೆಳಕಿಗೆ ಬಂದಿದ್ದು, ಆರ್ಟಿಒ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಕಣ್ಣು ಮುಚ್ಚಿ ಕುಳಿತಿದ್ದಾರೆ. ಉತ್ಪನ್ನಗಳನ್ನು ಟಿಪ್ಪರ್ನಲ್ಲಿ ಓವರ್ಲೋಡ್ ಸಾಗಿಸುತ್ತಿದ್ದರೂ ಪರಿಶೀಲಿಸದ ಸಿಬ್ಬಂದಿ ಅಕ್ರಮ ಗಣಿ ಸಾಗಾಟಕ್ಕೆ ಸಾಥ್ ನೀಡುತ್ತಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಭೂವಿಜ್ಞಾನ ಇಲಾಖೆ ಅಧಿಕಾರಿಗಳು ನಡೆಸಿದ ಪರಿಶೀಲನೆ ವೇಳೆ ಕಳ್ಳಾಟ ಬಯಲಾಗಿದೆ.
ಭೂವಿಜ್ಞಾನ ಇಲಾಖೆ ಅಧಿಕಾರಿಗಳು ನಡೆಸಿದ ಪರಿಶೀಲನೆ ವೇಳೆ ಟಿಪ್ಪರ್ಗಳ ಮಿತಿಗಿಂತ ಹೆಚ್ಚಿಗೆ ಗಣಿ ಉತ್ಪನ್ನಗಳ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಪಡೆದ ಪರ್ಮಿಟ್ಗಿಂತ ಹೆಚ್ಚುವರಿಯಾಗಿ ಗಣಿ ಉತ್ಪನ್ನಗಳ ಸಾಗಿಸುತ್ತಿರುವ ಟಿಪ್ಪರ್ಗಳ ವಿರುದ್ಧ ಕ್ರಮಕ್ಕೆ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ಮುಂದಾಗಿದ್ದಾರೆ.
ಸರ್ಕಾರಕ್ಕೆ ರಾಜಧನ ವಂಚಿಸಿ ಅಕ್ರಮ ಗಣಿಗಾರಿಕೆ ಹಿನ್ನೆಲೆ 10ಕ್ಕೂ ಹೆಚ್ಚು ಕಲ್ಲು ಹಾಗೂ ಕಲ್ಲಿನ ಉತ್ಪನ್ನ ಸಾಗಿಸುತ್ತಿದ್ದ ಲಾರಿಗಳನ್ನು ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಧಿಕಾರಿ ಕೃಷ್ಣವೇಣಿ ನೇತೃತ್ವದಲ್ಲಿ ದಾಳಿ ನಡೆಸಿ ಬೆಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಕಲ್ಲಿನ ಉತ್ಪನ್ನಗಳನ್ನು ಚಿಕ್ಕಬಳ್ಳಾಪುರ ತಾಲೂಕಿನ ಚದಲಪುರ ಗೇಟ್ ಬಳಿ ವಶಕ್ಕೆ ಪಡೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ